ETV Bharat / sports

ಟಿ20 ವಿಶ್ವಕಪ್‌: ಪಾಕಿಸ್ತಾನ ಬಗ್ಗುಬಡಿದ ಭಾರತ; ದಾಖಲೆಯ 6 ರನ್​​ಗಳ​ ಗೆಲುವು - India Beats Pakistan

ಟಿ20 ವಿಶ್ವಕಪ್‌ ಕ್ರಿಕೆಟ್​ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಗಳಿಸಿದೆ.

india defeats arch rivals pakistan
ಪಾಕಿಸ್ತಾನ ಮಣಿಸಿದ ಭಾರತ (IANS)
author img

By ANI

Published : Jun 10, 2024, 6:28 AM IST

ನ್ಯೂಯಾರ್ಕ್ (ಯುಎಸ್): ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್​ ಟೂರ್ನಿಗಳಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಪ್ರಾಬಲ್ಯ ಮುಂದುವರೆದಿದೆ. ಭಾನುವಾರ ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರಾರುವಾಕ್​ ಬೌಲಿಂಗ್​ನಿಂದ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದ ಟೀಂ ಇಂಡಿಯಾ, 6 ರನ್​ಗಳ ಜಯ ದಾಖಲಿಸಿದೆ. ಟೂರ್ನಿಯಲ್ಲಿ ಅತ್ಯಲ್ಪ ಮೊತ್ತವನ್ನು ಡಿಫೆಂಡ್​ ಮಾಡಿದ ದಾಖಲೆಗೆ ಭಾರತ ಸೇರ್ಪಡೆಯಾಗಿದೆ.

ಮಳೆಯಿಂದ ಸ್ವಲ್ಪ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಮೊದಲು ರೋಹಿತ್​ ಪಡೆಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮಳೆಯ ವಾತಾವರಣ ಹಾಗೂ ಅನಿಯಮಿತ ಬೌನ್ಸ್​ನ ಪಿಚ್​ನಲ್ಲಿ ರನ್​ ಗಳಿಸುವುದು ಸುಲಭವಿರಲಿಲ್ಲ. ಇನ್ನಿಂಗ್ಸ್​ ಆರಂಭಿಸಿದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 4 ರನ್​ ಗಳಿಸಿದ್ದ ಕೊಹ್ಲಿ ನಶೀಮ್​ ಶಾ ಬೌಲಿಂಗ್​ನಲ್ಲಿ ಉಸ್ಮಾನ್​ ಖಾನ್​ಗೆ ಸುಲಭದ ಕ್ಯಾಚ್​ ನೀಡಿ ಔಟಾದರು. ಬಳಿಕ ರೋಹಿತ್ (13)​ ಕೂಡ 3ನೇ ಓವರ್​ನಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಪೆವಿಲಿಯನ್​ಗೆ ಮರಳಿದರು.

ತದನಂತರ ಒಂದಾದ ಅಕ್ಷರ್​ ಪಟೇಲ್ (20)​ ಹಾಗೂ ರಿಷಭ್​ ಪಂತ್​ (42) ಜೊತೆಯಾಟದ ಭರವಸೆ ಮೂಡಿಸಿದರು. ಆದರೆ, ರನ್​ ಗತಿ ಹೆಚ್ಚಿಸುವ ಯತ್ನದಲ್ಲಿ ವಿಫಲರಾದ ಅಕ್ಷರ್, ನಶೀಮ್ ಎಸೆತದಲ್ಲಿ​ ಬೌಲ್ಡ್​ ಆಗಿ ಹೊರನಡೆದರು. 10 ಓವರ್​ಗಳ ಬಳಿಕ 3 ವಿಕೆಟ್​ಗೆ 81 ರನ್​ ಕಲೆ ಹಾಕಿದ್ದ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ 12ನೇ ಓವರ್​ನಲ್ಲಿ ಸೂರ್ಯಕುಮಾರ್ ಯಾದವ್​ (7) ಔಟಾಗುತ್ತಿದ್ದಂತೆ ದಿಢೀರ್​ ಕುಸಿತದ ಹಾದಿ ಹಿಡಿಯಿತು.

ಬಳಿಕ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ 9 ಬಾಲ್​ಗಳಲ್ಲಿ ಕೇವಲ 3 ರನ್​ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ನಡುವೆ ಉತ್ತಮ ಆಟವಾಡುತ್ತಿದ್ದ ಪಂತ್ (42)​ ಕೂಡ ದೊಡ್ಡ ಹೊಡೆತಕ್ಕೆ ಯತ್ನಿಸಿ ಅಮಿರ್​ಗೆ ಬಲಿಯಾದರು. ತದನಂತರ, ರವೀಂದ್ರ ಜಡೇಜಾ ಶೂನ್ಯ, ಹಾರ್ದಿಕ್​ ಪಾಂಡ್ಯ 7 ರನ್​ ಹಾಗೂ ಬುಮ್ರಾ ಖಾತೆ ತೆರೆಯದೇ ವಾಪಸ್​ ಆದರು. ಕೊನೆಯಲ್ಲಿ ಅರ್ಶದೀಪ್​ 9 ಹಾಗೂ ಸಿರಾಜ್​ 7 ರನ್​ ಗಳಿಸಿದ್ದು, ಭಾರತ 119 ರನ್​ಗೆ ಆಲೌಟ್​ ಆಯಿತು. ಪಾಕ್​ ಪರ ನಶೀಮ್​ ಶಾ 21ಕ್ಕೆ 3 ಹಾಗೂ ಅಮಿರ್ ​23ಕ್ಕೆ 2 ವಿಕೆಟ್​ ಪಡೆದು ಭಾರತವನ್ನು ನಿಯಂತ್ರಿಸಿದರು.

ಪಾಕಿಸ್ತಾನದ ಇನ್ನಿಂಗ್ಸ್​: 120 ರನ್​ ಬೆನ್ನಟ್ಟಿದ ಪಾಕ್​ ತಂಡ ನಿಧಾನಗತಿಯ ಆಟಕ್ಕೆ ಮೊರೆ ಹೋಯಿತು. 4.4 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 26 ರನ್​ ಕಲೆಹಾಕಿತ್ತು. ಈ ವೇಳೆ ನಾಯಕ ಬಾಬರ್ (13)​ ಬ್ಯಾಟ್​ ಸವರಿಕೊಂಡು ಬಂದ ಬಾಲ್​​ನ್ನು ಸ್ಲಿಪ್​ನಲ್ಲಿ ಸೂರ್ಯಕುಮಾರ್​ ಯಾದವ್ ಸುರಕ್ಷಿತವಾಗಿ ಹಿಡಿದಿದ್ದರಿಂದ ಭಾರತಕ್ಕೆ ​ಬುಮ್ರಾ ಮೊದಲ ಮೇಲುಗೈ ಒದಗಿಸಿದರು. ಬಳಿಕ ಉಸ್ಮಾನ್ ಖಾನ್​ (13)​ ಹಾಗೂ ಮೊಹಮದ್​ ರಿಜ್ವಾನ್​ (31) ಜೊತೆಯಾಟದ ಮುನ್ಸೂಚನೆ ನೀಡಿದರೂ ರನ್​ ಗತಿ ಹೆಚ್ಚಿಸುವಲ್ಲಿ ವಿಫಲರಾದರು.

13 ರನ್ ಗಳಿಸಿದ್ದಾಗ ಅಕ್ಷರ್​ ಪಟೇಲ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದ ಉಸ್ಮಾನ್​​ ಪೆವಿಲಿಯನ್​ ಸೇರಿದರು. ಬಳಿಕ ಬಂದ ಫಖಾರ್ ಜಮಾನ್ (13)​ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಮೂಲಕ ಅಪಾಯದ ಸೂಚನೆ ನೀಡಿದರೂ ಕೂಡ ಅವರನ್ನು ಹಾರ್ದಿಕ್​ ಪಾಂಡ್ಯ ಔಟ್​ ಮಾಡಿದರು. ಈ ನಡುವೆ 44 ಎಸೆತಗಳಲ್ಲಿ 31 ರನ್​ ಗಳಿಸಿದ್ದ ರಿಜ್ವಾನ್​ ಬುಮ್ರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಲ್ಡ್​ ಆದರು. ಇದರೊಂದಿಗೆ ಜಸ್ಪ್ರೀತ್​ ಪಾಕ್​ ತಂಡವು ಸೋಲಿನತ್ತ ಮುಖ ಮಾಡುವಂತೆ ಮಾಡಿದರು.

ತದನಂತರ ರನ್​ ಗಳಿಸಲು ಮತ್ತಷ್ಟು ಪರದಾಡಿದ ಪಾಕ್​ ಒತ್ತಡಕ್ಕೆ ಸಿಲುಕಿತು. ರಿಜ್ವಾನ್​ ಬಳಿಕ ಕ್ರೀಸ್​ಗಿಳಿದ ಶದಾಬ್​ ಖಾನ್​ 4 ರನ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಮೂರು ಓವರ್​ಗಳಲ್ಲಿ ಪಾಕಿಸ್ತಾನಕ್ಕೆ 30 ರನ್​ ಅಗತ್ಯವಿತ್ತು. 19ನೇ ಓವರ್​ನ ಕೊನೆಯ ಬಾಲ್​ನಲ್ಲಿ ಇಫ್ತಿಕಾರ್​ ಅಹ್ಮದ್​ರನ್ನು (5 ರನ್) ಬುಮ್ರಾ ಔಟ್​ ಮಾಡಿದರು. ಅರ್ಶದೀಪ್​ ಎಸೆದ ಕೊನೆಯ ಓವರ್​ನಲ್ಲಿ 18 ರನ್​ ಬೇಕಿದ್ದಾಗ 23 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದ್ದ ಇಮಾದ್​ ವಾಸಿಂ ಔಟಾದರು. ಆ ಬಳಿಕ ನಶೀಮ್​ ಶಾ ಎರಡು ಬೌಂಡರಿ ಗಳಿಸಿದರೂ ಕೂಡ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಭಾರತದ ಪರ ಮಾರಕ ಬೌಲಿಂಗ್​ ನಡೆಸಿದ ವೇಗಿ ಜಸ್ಪ್ರೀತ್​ ಬುಮ್ರಾ (14ಕ್ಕೆ 3) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾರ್ದಿಕ್​ 24ಕ್ಕೆ 2 ಹಾಗೂ ಅಕ್ಷರ್​ 11ಕ್ಕೆ 1 ಹಾಗೂ ಅರ್ಶದೀಪ್​ 31ಕ್ಕೆ 1 ವಿಕೆಟ್ ಪಡೆದು ಸಾಥ್​ ನೀಡಿದರು. ಸಿರಾಜ್​ (19ಕ್ಕೆ 0) ಹಾಗೂ ಜಡೇಜಾ (10ಕ್ಕೆ 0) ವಿಕೆಟ್​ ಗಳಿಸದಿದ್ದರೂ ಕೂಡ ಪಾಕ್​ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್​ ಜೊತೆಗೆ ಕೀಪಿಂಗ್​ನಲ್ಲೂ ಮಿಂಚಿದ ಪಂತ್​ ಮೂರು ಅತ್ಯುತ್ತಮ ಕ್ಯಾಚ್​ ಪಡೆದರು.

ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಭಾರತ ಗೆದ್ದು ಬೀಗಿದರೆ, ಎರಡೂ ಹಣಾಹಣಿಗಳಲ್ಲಿ ಸೋತ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿದೆ. ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಬಾಬರ್​ ಪಡೆಗೆ ಎದುರಾಗಿದೆ.

ಭಾರತ ತಂಡದಿಂದ ದಾಖಲೆ: 120 ರನ್​ಗಳ ಅಲ್ಪ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಮತ್ತೊಂದು ಮುಖಭಂಗ ಅನುಭವಿಸಿತು. ವಿಶ್ವಕಪ್​ನಲ್ಲಿ ತಂಡವೊಂದು ಡಿಫೆಂಡ್​ ಮಾಡಿದ ಕಡಿಮೆ ಮೊತ್ತ ಇದಾಗಿದೆ. ಈ ಹಿಂದೆ 2014ರಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್​ ವಿರುದ್ಧ ಇಷ್ಟೇ ರನ್ (120)​ ಡಿಫೆಂಡ್​ ಮಾಡಿತ್ತು.

ಇದನ್ನೂ ಓದಿ: ಫ್ರೆಂಚ್ ಓಪನ್: ಅರೆವಾಲೊ-ಪಾವಿಕ್ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ - French Open

ETV Bharat Logo

Copyright © 2024 Ushodaya Enterprises Pvt. Ltd., All Rights Reserved.