IND VS PAK Emerging Asia cup 2024: ಉದಯೋನ್ಮುಖ ಕ್ರಿಕೆಟಿಗರ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮಸ್ಕತ್ನ ಓಮನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.
ಎರಡೂ ತಂಡಗಳು ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಲು ಬಯಸುತ್ತಿವೆ. ಭಾರತ ಎ ತಂಡವು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕನಿಷ್ಠ ನಾಲ್ವರು ಆಟಗಾರರನ್ನು ಹೊಂದಿದೆ. ತಿಲಕ್ ವರ್ಮಾ, ರಾಹುಲ್ ಚಹಾರ್, ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ತಂಡದಲ್ಲಿದ್ದಾರೆ.
𝘼 𝙧𝙞𝙫𝙖𝙡𝙧𝙮 𝙡𝙞𝙠𝙚 𝙣𝙤 𝙤𝙩𝙝𝙚𝙧!🤜🤛
— AsianCricketCouncil (@ACCMedia1) October 19, 2024
Brace yourselves for the battle between India ‘A’ and Pakistan ‘A’ in match 4️⃣ of the #MensT20EmergingTeamsAsiaCup!⚡️#ACC pic.twitter.com/WsZTMp8tse
ಭಾರತ ತಂಡವನ್ನು ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ತಿಲಕ್, ಟೀಂ ಇಂಡಿಯಾ ಪರ 4 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಟೂರ್ನಿಯಲ್ಲಿ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಯಶಸ್ಸು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಮತ್ತೊಂದೆಡೆ ಯುವ ಆಟಗಾರ ಮೊಹ್ಮದ್ ಹ್ಯಾರಿಸ್ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ಇವರ ನಾಯಕತ್ವದಲ್ಲಿ ಪಾಕ್ ಉದಯೋನ್ಮುಕ ಕ್ರಿಕೆಟಿಗರ ಎಮರ್ಜಿಂಗ್ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ರನ್ನರ್ ಅಪ್ ಆಗಿತ್ತು.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ಲೈವ್ ಸ್ಟೀಮಿಂಗ್ ಎಲ್ಲಿ: ಭಾರತ-ಪಾಕ್ ನಡುವಿನ ಈ ಟಿ20 ಪಂದ್ಯವನ್ನು ಭಾರತದಲ್ಲಿ ಫ್ಯಾನ್ಕೋಡ್ ಆಪ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರವಾಗಲಿದೆ.
It's india vs Pakistan today guys #IndVsPak pic.twitter.com/fJ5J4dNMFm
— Vishal 😎 (@BLUEVISHAL) October 19, 2024
ಸಂಭಾವ್ಯ ತಂಡಗಳು - ಭಾರತ ಎ: ತಿಲಕ್ ವರ್ಮಾ (ನಾಯಕ), ಅಭಿಷೇಕ್ ಶರ್ಮಾ (ಉಪನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ರಮಣದೀಪ್ ಸಿಂಗ್, ನೆಹಾಲ್ ವಧೇರಾ, ಆಯುಷ್ ಬಡೋನಿ, ಅನುಜ್ ರಾವತ್ (ವಿಕೆಟ್ ಕೀಪರ್), ಸಾಯಿ ಕಿಶೋರ್, ಹೃತಿಕ್ ಶೌಕೀನ್, ರಾಹುಲ್ ಚಾಹರ್ , ವೈಭವ್ ಅರೋರಾ, ಅನ್ಶುಲ್ ಕಾಂಬೋಜ್, ಆಕಿಬ್ ಖಾನ್, ರಸಿಕ್ ಸಲಾಮ್.
ಪಾಕಿಸ್ತಾನ ಶಾಹೀನ್ ತಂಡ: ಮೊಹಮ್ಮದ್ ಹ್ಯಾರಿಸ್ (ನಾಯಕ), ಅಬ್ದುಲ್ ಸಮದ್, ಅಹ್ಮದ್ ದನಿಯಾಲ್, ಅರಾಫತ್ ಮಿನ್ಹಾಸ್, ಹೈದರ್ ಅಲಿ, ಹಸಿಬುಲ್ಲಾ, ಮೆಹ್ರಾನ್ ಮುಮ್ತಾಜ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಇಮ್ರಾನ್ ಜೂನಿಯರ್, ಒಮೈರ್ ಬಿನ್ ಯೂಸುಫ್, ಖಾಸಿಮ್ ಅಕ್ರಂ, ಸುಫಿಯಾನ್ ಮೊಹನ್, ಸುಫಿಯಾನ್ ಮೊಹನ್, ಸುಫಿಯಾನ್ ದಾಕಿ ಖಾನ್ ಮತ್ತು ಜಮಾನ್ ಖಾನ್.
ಇದನ್ನೂ ಓದಿ: ಶೂನ್ಯ ಎಸೆತಕ್ಕೆ ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್!