ನವದೆಹಲಿ: ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಪೈಕಿ ಇಂದು (ಶನಿವಾರ) ನಾಲ್ಕನೇ ಪಂದ್ಯವನ್ನು ಆಡಲಿದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡವು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯವನ್ನು ಜಯ ಗಳಿಸುವ ಮೂಲಕ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನಡೆಯಲಿದೆ.
𝗪𝗵𝗮𝘁 𝗱𝗶𝗱 𝘁𝗵𝗲𝘆 𝗺𝗮𝗸𝗲 𝗼𝗳 𝘁𝗵𝗮𝘁 𝗥𝗮𝘃𝗶 𝗕𝗶𝘀𝗵𝗻𝗼𝗶 𝗰𝗮𝘁𝗰𝗵❓🤔
— BCCI (@BCCI) July 11, 2024
Watch as banter, appreciation, fun & more unfold in this post-match chat! 😎 😎 - By @ameyatilak #TeamIndia | #ZIMvIND | @Avesh_6 | @ShubmanGill | @Sundarwashi5 | @rinkusingh235 pic.twitter.com/fd7QGeFsgy
ಉಭಯ ತಂಡಗಳ ಟಿ-20 ಸರಣಿ: ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 13 ರನ್‌ಗಳಿಂದ ಸೋತಿತ್ತು. ಇದಾದ ನಂತರ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿತ್ತು. ಜಿಂಬಾಬ್ವೆಯನ್ನು 100 ರನ್‌ಗಳಿಂದ ಸೋಲಿಸಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ 182 ರನ್‌ಗಳನ್ನು ಗಳಿಸುವ ಮೂಲಕ ಭಾರತವು ಜಿಂಬಾಬ್ವೆಯನ್ನು 23 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡಕ್ಕೆ ನಾಲ್ಕನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವಿದೆ.
ಭಾರತ- ಜಿಂಬಾಬ್ವೆ 11 ಟಿ20 ಪಂದ್ಯ: ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದಿದೆ. ಆದರೆ, ಜಿಂಬಾಬ್ವೆ 3 ಪಂದ್ಯಗಳಲ್ಲಿ ಗೆದ್ದಿದೆ. ಉಳಿದ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ, ಜಿಂಬಾಬ್ವೆಯನ್ನು ಲಘುವಾಗಿ ಪರಿಗಣಿಸುವುದು ತುಂಬಾ ಕಷ್ಟ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದನ್ನು ಮರೆಯುವಂತಿಲ್ಲ.
#TeamIndia will look to take an unassailable lead in the series when they take on Zimbabwe in the next game. 🇮🇳vs🇿🇼
— Doordarshan Sports (@ddsportschannel) July 12, 2024
🏏 4th T20I 🗓️ July 13 ⏰ 4:30 PM onwards..
LIVE The Game on DD Sports 1.0 📺 (DD Free Dish)#ZIMvIND #MenInBlue pic.twitter.com/llHDHeesdS
ಹರಾರೆ ಸ್ಟೇಡಿಯಂ ಪಿಚ್ ವರದಿ: ಹರಾರೆ ಪಿಚ್ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ಸ್ಕೋರ್ ಹೊಂದಿಸುವುದು ಬಹಳ ಮುಖ್ಯ. ಇಲ್ಲಿ ವೇಗದ ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಮತ್ತು ಸ್ಪಿನ್ನರ್‌ಗಳು ಹಳೆಯ ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ. ಈ ಫಿಚ್ನಲ್ಲಿ ಒಮ್ಮೆ ಬ್ಯಾಟ್ಸ್‌ಮನ್‌ಗಳನ್ನು ಸೆಟ್ ಆದರೆ, ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ. ಈ ಪಿಚ್‌ನಲ್ಲಿ ಭಾರತ ಎರಡನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್ ಗಳಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಕೂಡ ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆ ಇದೆ.
ಸಂಭಾವ್ಯ ಆಟಗಾರರು:
ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್.
ಜಿಂಬಾಬ್ವೆ: ತಡಿವಾನಾಶೆ ಮಾರುಮಣಿ, ಇನೋಸೆಂಟ್ ಕಾಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮದಂಡೆ (ವಿಕೆ), ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಬಾನಿ, ತೆಂಡೈ ಚಟಾರಾ.
ಇದನ್ನೂ ಓದಿ: ತಂದೆಯಂತೆಯೇ ಮಗ; ಟೀಂ ಇಂಡಿಯಾ ಪರ ಆಡಿದ ಅಪ್ಪ- ಮಕ್ಕಳಿವರು! - Father And Son In Cricket