IND VS NZ 1st Test Sarfaraz Funny Reaction pant: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಸರ್ವಪತನ ಕಂಡಿದ್ದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. 356ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಇದೀಗ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ.
ಈ ಪಂದ್ಯದಲ್ಲಿ ಯುವ ಬ್ಯಾಟರ್ ಸರ್ಫರಾಜ್ ಖಾನ್ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಎಲ್ಲರ ಗಮನ ಸೆಳೆದರು. ಮತ್ತೊಂದೆಡೆ ರಿಷಬ್ ಪಂತ್ ಅರ್ಧಶತಕ ಪೂರ್ಣಗೊಳಿಸಿ ಶತಕದತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ ಇನ್ನಿಂಗ್ಸ್‌ನ 56ನೇ ಓವರ್‌ನಲ್ಲಿ ತಮಾಷೆಯ ಪ್ರಸಂಗವೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದರ ವಿಡಿಯೋ ವೈರಲ್ ಆಗುತ್ತಿದೆ.
ವಾಸ್ತವವಾಗಿ, 56ನೇ ಓವರ್ನ 4ನೇ ಎಸೆತದ ವೇಳೆ ಸ್ಟ್ರೈಕ್ನಲ್ಲಿದ್ದ ಸರ್ಫರಾಜ್ ಚೆಂಡನ್ನು ಬೌಂಡರಿಯತ್ತ ಹೊಡೆದಿದ್ದರು. ಈ ವೇಳೆ ಸರ್ಫರಾಜ್ ಒಂದು ರನ್ ತೆಗೆದಕೊಂಡರು. ನಂತರ ಚೆಂಡನ್ನು ನೋಡದ ಪಂತ್ ಎರಡನೇ ರನ್ಗಳಿಸಲೆಂದು ಅರ್ಧಪಿಚ್ ವರೆಗೂ ಓಡಿ ಬಂದಿದ್ದರು. ಈ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಸರ್ಫರಾಜ್ ಪಿಚ್ನಲ್ಲಿ ಜಿಗಿದಾಡುತ್ತ ಪಂತ್ ಅವರನ್ನು ಹಿಂದಕ್ಕೆ ಹೋಗುವಂತೆ ಕಿರುಚಾಡಿದ್ದಾರೆ. ಕೂಡಲೇ ಪಂತ್ ಕ್ರೀಸ್ಗೆ ಮರುಳಿ ರನ್ ಔಟ್ನಿಂದ ಸ್ವಲ್ಪ ಅಂತರದಲ್ಲೇ ಪಾರಾದರು. ಸದ್ಯ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
— Kirkit Expert (@expert42983) October 19, 2024
ಸರ್ಫರಾಜ್ ಖಾನ್ ಪ್ರತಿಕ್ರಿಯೆ: ರನ್ಔಟ್ ತಪ್ಪಿಸಿದ ಸಂದರ್ಭದ ಕುರಿತು ವಿವರಿಸಿರುವ ಸರ್ಫರಾಜ್, ''ಮೂರನೇ ದಿನದಾಟದ ಸಂದರ್ಭದಲ್ಲಿ ರಿಷಭ್ ಪಂತ್ ಮೊಣಕಾಲಿಗೆ ಗಾಯವಾಗಿತ್ತು. ಆದ್ದರಿಂದ ಜಾಗರೂಕತೆಯಿಂದ ರನ್ಗಳಿಸುವ ಕುರಿತು ಇಬ್ಬರು ಮಾತನಾಡಿಕೊಂಡಿದ್ದೆವು. ಆದರೆ ಮಧ್ಯದಲ್ಲಿ ಅದನ್ನ ಮರೆತ ನಾನೇ 2ರನ್‌ಗೆ ಕರೆ ನೀಡಿದೆ. ಆದರೆ ನಂತರದಲ್ಲಿ ಅವರ ಮೊಣಕಾಲು ಗಾಯದ ಬಗ್ಗೆ ನೆನಪಾಯಿತು. ತಕ್ಷಣ ಎರಡನೇ ರನ್ ಕದಿಯಲು ನಿರಾಕರಿಸಿ ಅವರನ್ನ ತಡೆಯಬೇಕಾಯಿತು. ದೇವರ ದಯೆಯಿಂದ ರನ್ಔಟ್ ಆಗಲಿಲ್ಲ'' ಎಂದು ನಕ್ಕರು.
— Kirkit Expert (@expert42983) October 19, 2024
ಸರ್ಫರಾಜ್ ಚೊಚ್ಚಲ ಶತಕ: ಸರ್ಫರಾಜ್ ಖಾನ್ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ. ನಾಲ್ಕನೇ ದಿನದಾಟದಂದು ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಪಂತ್ 195 ಎಸೆತಗಳಲ್ಲಿ 150 ರನ್ ಸಿಡಿಸಿ ಸೌತೆ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆ ಶುರು: ಭಾರತ - ನ್ಯೂಜಿಲೆಂಡ್ ಪಂದ್ಯಕ್ಕೆ ಬ್ರೇಕ್ ಹಾಕಿದ ವರುಣ!