Rishabh Pant: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ 99 ರನ್‌ಗಳಿಗೆ ಔಟಾಗಿ ಕೇವಲ ಒಂದು ರನ್ನಿಂದ ಶತಕ ವಂಚಿತರಾಗಿದ್ದಾರೆ. ತೀವ್ರ ಮಂಡಿನೋವಿನ ನಡುವೆಯೂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ಗೆ ಬಂದ ಪಂತ್ ಭರ್ಜರಿ ಪ್ರದರ್ಶನ ತೋರಿದರು.
2ನೇ ಇನ್ನಿಂಗ್ಸ್‌ನಲ್ಲಿ 105 ಎಸೆತಗಳನ್ನು ಎದುರಿಸಿದ ಪಂತ್ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 99 ರನ್ ಸಿಡಿಸಿದ್ದರು. ಶತಕಕ್ಕೆ ಇನ್ನು ಒಂದು ರನ್ ಬಾಕಿ ಇರುವಾಗ ಓ'ರೂರ್ಕ್ ಎಸೆತದಲ್ಲಿ ಡಿಫೆನ್ಸ್ ಮಾಡುವ ಭರದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 99ಕ್ಕೆ ಔಟ್ ಆದರೂ ಪಂತ್ ಈ ಪಂದ್ಯದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ನಲ್ಲಿ ವೇಗವಾಗಿ 2500 ರನ್ಗಳಿಸಿದ ವಿಕೆಟ್ ಕೀಪರ್ ಆಗಿ ದಾಖಲೆ ಬರೆದಿದ್ದಾರೆ. ಪಂತ್ 36 ಪಂದ್ಯಗಳ 62 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಎಂಎಸ್ ಧೋನಿ 69 ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಈ ದಾಖಲೆಯನ್ನು ಹೊಂದಿದ್ದರು.
An unfortunate end to a blistering knock from Rishabh Pant.
— BCCI (@BCCI) October 19, 2024
The #TeamIndia batter departs for 99(105) 👏👏
Live - https://t.co/FS97Llv5uq#INDvNZ | @RishabhPant17 | @IDFCFIRSTBank pic.twitter.com/GqGVNjTTeN
ಪಂತ್ ಔಟಾದ ಕೆಲವೇ ನಿಮಿಗಳಲ್ಲಿ ಕೆಎಲ್ ರಾಹುಲ್ ಕೂಡ ಔಟಾದರು. 16 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 12 ರನ್ ಗಳಿಸಿದ್ದ ರಾಹುಲ್ ಓ'ರೂರ್ಕ್ ಎಸೆತದಲ್ಲೇ ಪವಿಲಿಯನ್ ಸೇರಿದರು. ನಂತರ ಬಂದ ಜಡೇಜಾ, ಅಶ್ವಿನ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಇದೀಗ ಭಾರತ ಅಲ್ಪ ರನ್‌ಗಳ ಮುನ್ನಡೆ ಸಾಧಿಸಿದೆ.
ಪಂದ್ಯದ ವಿವರ: ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಔಟಾಗಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಭಾರತ ಪರ ಸರ್ಫರಾಜ್ ಖಾನ್ 150 ರನ್ ಗಳ ಶತಕ ಸಿಡಿಸಿದ್ದರು. ಅದೇ ಸಮಯದಲ್ಲಿ ರೋಹಿತ್ ಶರ್ಮಾ (52) ಮತ್ತು ವಿರಾಟ್ ಕೊಹ್ಲಿ (70), ರಿಷಭ್ ಪಂತ್ ಸಹ ಅರ್ಧಶತಕ ಸಿಡಿಸಿದ್ದಾರೆ. ಇದರಿಂದಿಗಾಗಿ ಭಾರತವು ಟೀ ವಿರಾಮದ ವೇಳೆಗೆ 82 ರನ್‌ಗಳ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಪಿಚ್ನಲ್ಲಿ ಜಿಗಿದಾಡಿ ಪಂತ್ ರನ್ಔಟ್ ಆಗುವುದನ್ನು ತಡೆದ ಸರ್ಫರಾಜ್ ಖಾನ್: ಫನ್ನಿ ವಿಡಿಯೋ ವೈರಲ್