ನವದೆಹಲಿ: ನಾಳೆಯಿಂದ (ಜನವರಿ 25) ಆರಂಭವಾಗಲಿರುವ ಇಂಗ್ಲೆಂಡ್- ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ವಿವಾದವೊಂದು ಹುಟ್ಟಿಕೊಂಡಿದೆ. ಇಂಗ್ಲೆಂಡ್ನ ಯುವ ಸ್ಪಿನ್ನರ್ ಶೋಯೆಬ್ ಬಶೀರ್ಗೆ ವೀಸಾ ವಿಳಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದರ ವಿರುದ್ಧ ಆಂಗ್ಲ ನಾಯಕ ಬೆನ್ ಸ್ಟೋಕ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Ben Stokes is "frustrated" as Shoaib Bashir returns home to the UK in the hope of resolving the delay to his visa application for England's tour of Indiahttps://t.co/vZnK2zm9Ip | #INDvENG pic.twitter.com/9HfNUZL6sG
— ESPNcricinfo (@ESPNcricinfo) January 23, 2024 " class="align-text-top noRightClick twitterSection" data="
">Ben Stokes is "frustrated" as Shoaib Bashir returns home to the UK in the hope of resolving the delay to his visa application for England's tour of Indiahttps://t.co/vZnK2zm9Ip | #INDvENG pic.twitter.com/9HfNUZL6sG
— ESPNcricinfo (@ESPNcricinfo) January 23, 2024Ben Stokes is "frustrated" as Shoaib Bashir returns home to the UK in the hope of resolving the delay to his visa application for England's tour of Indiahttps://t.co/vZnK2zm9Ip | #INDvENG pic.twitter.com/9HfNUZL6sG
— ESPNcricinfo (@ESPNcricinfo) January 23, 2024
20 ವರ್ಷದ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಭಾರತ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದರು. ಭಾರತಕ್ಕೆ ಬರಲು ವೀಸಾಕ್ಕಾಗಿ ಕಾಯುತ್ತಿದ್ದ ಅವರಿಗೆ ಕೊನೆಯ ಕ್ಷಣದವರೆಗೂ ಮಂಜೂರಾತಿ ಸಿಗದ ಕಾರಣ, ದುಬೈನಿಂದ ಇಂಗ್ಲೆಂಡ್‌ಗೆ ಮರಳಿದ್ದಾರೆ.
ಭಾರತದ ಪಿಚ್‌ಗಳಲ್ಲಿ ಇಂಗ್ಲೆಂಡ್‌ಗೆ ಉತ್ತಮ ಸ್ಪಿನ್ನರ್‌ನ ಅಗತ್ಯವಿತ್ತು. ಬಶೀರ್ ಭಾರತದ ಟರ್ನಿಂಗ್ ಪಿಚ್‌ಗಳಲ್ಲಿ ಇಂಗ್ಲೆಂಡ್‌ಗೆ ಟ್ರಂಪ್ ಕಾರ್ಡ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಅವರು ಅಬುಧಾಬಿಯಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಕಠಿಣ ಅಭ್ಯಾಸ ಮಾಡಿದ್ದರು.
ವೀಸಾ ವಿಳಂಬ ಭಾರತಕ್ಕೆ ತೆರಳಲು ಇಂಗ್ಲೆಂಡ್ ಆಟಗಾರ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದರಲ್ಲಿ ನ್ಯೂನ್ಯತೆಗಳು ಇದ್ದ ಕಾರಣ ಮಂಜೂರಾಗಿಲ್ಲ ಎಂದು ಹೇಳಲಾಗಿದೆ. ಆದರೆ, ಬಶೀರ್ ಪಾಕಿಸ್ತಾನ ಮೂಲ ಎಂಬ ಕಾರಣಕ್ಕಾಗಿ ವೀಸಾ ವಿಳಂಬವಾಗಿದೆ ಎಂಬ ಮಾತು ಕೇಳಿಬಂದಿದೆ. ಇದೀಗ ವಿವಾದಕ್ಕೂ ಕಾರಣವಾಗಿದೆ.
" ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ವೀಸಾಗಳಿಗೆ ಅರ್ಜಿ ಸಲ್ಲಿಸುವ ಪಾಕಿಸ್ತಾನಿ ಬ್ರಿಟಿಷ್ ನಾಗರಿಕರ ಸಮಸ್ಯೆಗಳ ಬಗ್ಗೆ ನಾವು ಈ ಹಿಂದೆ ಪ್ರಸ್ತಾಪಿಸಿದ್ದೇವೆ" ಎಂದು ಬ್ರಿಟಿಷ್ ಅಧಿಕಾರಿಯೊಬ್ಬರು ಕ್ರೀಡಾ ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟೇ ಬಶೀರ್ಗೆ ವೀಸಾ ಮಂಜೂರಾಗದಿರಲು ಕಾರಣ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಬಶೀರ್ ಟರ್ನಿಂಗ್ ಪಿಚ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದು ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿತ್ತು. ಭಾರತದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಬಯಕೆಯಲ್ಲಿ ಬಶೀರ್ ಇದ್ದರು.
ನಾಯಕ ಸ್ಟೋಕ್ಸ್ ಬೇಸರ: ಬಶೀರ್ಗೆ ವೀಸಾ ಸಿಗದೇ, ತಂಡದಿಂದ ಹೊರಬಿದ್ದಿದ್ದಕ್ಕೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರನ ಕನಸು ಭಗ್ನಗೊಂಡಿದೆ. ಇದು ನನಗೆ ತುಂಬಾ ಬೇಸರ ತರಿಸಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಎರಡು ಟೆಸ್ಟ್ಗಳಿಗೆ ವಿರಾಟ್ ಕೊಹ್ಲಿ ಅಲಭ್ಯ; ಆರ್ಸಿಬಿ ಬಾಯ್ಗೆ ಸಿಗುವುದೇ ಚಾನ್ಸ್?