ETV Bharat / sports

Ind vs Eng test: ಮೊದಲ ದಿನದಾಂತ್ಯಕ್ಕೆ ಇಂಗ್ಲೆಂಡ್​ 246 ರನ್​ಗಳಿಗೆ ಆಲೌಟ್​.. ಭಾರತ 119-1 - ಭಾರತ ಇಂಗ್ಲೆಂಡ್​ ಟೆಸ್ಟ್ ಸರಣಿ

ಮೊದಲ ಟೆಸ್ಟ್​ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಆಂಗ್ಲ ಪಡೆ 246 ಗಳಿಸಿ ಆಲೌಟ್​ ಆದರೆ, ಭಾರತ 1 ವಿಕೆಟ್​ಗೆ 119 ರನ್ ಗಳಿಸಿದೆ.

ಪ್ರಥಮ ಟೆಸ್ಟ್​
ಪ್ರಥಮ ಟೆಸ್ಟ್​
author img

By ETV Bharat Karnataka Team

Published : Jan 25, 2024, 6:07 PM IST

ಹೈದರಾಬಾದ್: ಟೆಸ್ಟ್​ ಆಟದ ಸೊಬಗನ್ನೇ ಬದಲಿಸಿ ತನ್ನದೇ ಆದ 'ಬೇಸ್​ಬಾಲ್​' ತಂತ್ರ ಬಳಸಿ ಆಡಲು ಹೋದ ಪ್ರವಾಸಿ ಇಂಗ್ಲೆಂಡ್​ಗೆ ಭಾರತ ತಂಡ ಸಖತ್​ ಗುನ್ನಾ ನೀಡಿದೆ. ಇಂದಿನಿಂದ ಆರಂಭವಾದ ಮೊದಲ ಟೆಸ್ಟ್​ನ ಪ್ರಥಮ ಇನಿಂಗ್ಸ್​ನಲ್ಲಿ ಆಂಗ್ಲರು 246 ರನ್​ಗಳಿಗೆ ಗಂಟೆಮೂಟೆ ಕಟ್ಟಿದರು. ಇದಕ್ಕುತ್ತರವಾಗಿ ಭಾರತ ಮೊದಲ ದಿನದಾಂತ್ಯಕ್ಕೆ 1 ವಿಕೆಟ್​ಗೆ 119 ರನ್​ ಗಳಿಸಿತು. ಮುನ್ನಡೆ ಸಾಧಿಸಲು ಇನ್ನೂ 127 ರನ್​ ಬೇಕಾಗಿದೆ.

ಹೈದರಾಬಾದ್​ನ ಉಪ್ಪಲ್​​ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದ ಆಂಗ್ಲ ತಂಡದ ನಾಯಕ ಬೆನ್​ ಸ್ಟೋಕ್ಸ್​ ಮೊದಲು ಬ್ಯಾಟ್​ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರ ಸರಿ ಎಂಬಂತೆ ಬ್ಯಾಟ್​ ಮಾಡಿದ ಆರಂಭಿಕ ಜೋಡಿಯಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಆಕ್ರಮಣಕಾರಿ ಆಟವಾಡಿದರು. ಮೊದಲ ವಿಕೆಟ್‌ಗೆ 55 ರನ್ ಗಳಿಸಿದರು. ಬಿಡುಬೀಸಾಗಿ ಬ್ಯಾಟ್​ ಮಾಡುತ್ತಿದ್ದ ಡಕೆಟ್​ (35)ರನ್ನು 12ನೇ ಓವರ್‌ನಲ್ಲಿ ಸ್ಪಿನ್​​ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪೆವಿಲಿಯನ್​ಗೆ ಅಟ್ಟಿದರು.

ಓಲಿ ಪೋಪ್​ (1) ಬಂದಷ್ಟೇ ವೇಗದಲ್ಲಿ ಜಡೇಜಾ ಬೌಲಿಂಗ್​ನಲ್ಲಿ ವಾಪಸ್​ ಆದರು. ಇದರ ಬೆನ್ನಲ್ಲೇ ಝಾಕ್ ಕ್ರಾಲಿ (20) ವಿಕೆಟ್​ ನೀಡಿದರು. ತಂಡದ ಶಕ್ತಿಯಾದ ಜೋ ರೂಟ್​ (29), ಜಾನಿ ಬೈರ್​ಸ್ಟೋವ್​ (37) ಇನಿಂಗ್ಸ್​ ಕಟ್ಟಲು ಆರಂಭಿಸಿದರು. ಇದಕ್ಕೆ ಅಕ್ಷರ್​ ಪಟೇಲ್​ ಅವಕಾಶ ನೀಡಲಿಲ್ಲ. ಹಿರಿಯ ಆಟಗಾರ ಬೈರ್​ಸ್ಟೋವ್​ ಅವರನ್ನು ಕ್ಲೀನ್​ಬೌಲ್ಡ್​ ಮಾಡಿದರು. ಎರಡೇ ಓವರ್​ ಅಂತರದಲ್ಲಿ ರೂಟ್​ ಕೂಡ ಜಡೇಜಾ ಬೌಲಿಂಗ್​ನಲ್ಲಿ ಔಟಾದರು.

ನಾಯಕ ಬೆನ್​ ಅರ್ಧಶತಕದಾಟ: ರವೀಂದ್ರ ಜಡೇಜಾ, ಅಶ್ವಿನ್​ ಮತ್ತು ಅಕ್ಷರ್​ ಪಟೇಲ್​ ಬೌಲಿಂಗ್​ ದಾಳಿಗೆ ಆಂಗ್ಲ ಬ್ಯಾಟರ್​ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು. ಇತ್ತ ನಾಯಕ ಬೆನ್​ ಸ್ಟೋಕ್ಸ್ ದೃಢವಾಗಿ ನಿಂತು ರನ್​ ಕಲೆಹಾಕಿದರು. ಬಾಲಂಗೋಚಿಗಳ ಜೊತೆ ಸೇರಿ 106 ರನ್​ ತಂಡದ ಮೊತ್ತಕ್ಕೆ ಸೇರಿಸಿದರು. 70 ರನ್​​ಗಳನ್ನು​ ಗಳಿಸಿ ಆಡುತ್ತಿದ್ದಾಗ ಬೂಮ್ರಾ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ತಂಡದ ಮೊದಲ ಇನಿಂಗ್ಸ್​ಗೆ ತೆರೆ ಬಿತ್ತು. ಇದರಿಂದ ಆಂಗ್ಲ ಪಡೆ 64.3 ಓವರ್​ಗಳಲ್ಲಿ 246 ರನ್​ ಗಳಿಸಿತು. ಭಾರತದ ಪರವಾಗಿ ಜಡೇಜಾ, ಅಶ್ವಿನ್​ ತಲಾ ಮೂರು, ಅಕ್ಷರ್​, ಬೂಮ್ರಾ ತಲಾ 2 ವಿಕೆಟ್​ ಕಿತ್ತರು.

'ಯಶಸ್ವಿ' ಇನಿಂಗ್ಸ್​ ಕಟ್ಟಿದ ಜೈಸ್ವಾಲ್​: ಮೊದಲ ಇನಿಂಗ್ಸ್​ ಆರಂಭಿಸಿದ ಭಾರತಕ್ಕೆ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಭರ್ಜರಿ ಆರಂಭ ನೀಡಿದರು. ಇಂಗ್ಲೆಂಡ್​ನ ಬೇಸ್​ಬಾಲ್​ ತಂತ್ರವನ್ನೇ ಬಳಸಿಕೊಂಡ ಆಟಗಾರ ಹೊಡಿಬಡಿ ಆಟವಾಡಿದರು. 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಇದೇ ವೇಳೆ, ನಾಯಕ ರೋಹಿತ್ ಶರ್ಮಾ (24) ಕೂಡ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 80 ರನ್ ಸೇರಿಸಿದರು.

ರೋಹಿತ್​ ಔಟಾದ ಬಳಿಕ ಜೈಸ್ವಾಲ್​ ಕೂಡಿಕೊಂಡ ಶುಭ್​ಮನ್​ ಗಿಲ್​ ನಿಧಾನಗತಿ ಬ್ಯಾಟಿಂಗ್​ ನಡೆಸಿದರು. ಜೈಸ್ವಾಲ್ 70 ಎಸೆತಗಳಲ್ಲಿ 76 ರನ್​ ಗಳಿಸಿದ್ದು, ಗಿಲ್​ 14 ರನ್​​ನಿಂದ ನಾಳೆ ವಿಕೆಟ್​ ಕಾದಿರಿಸಿಕೊಂಡಿದ್ದಾರೆ. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 39 ರನ್ ಸೇರಿಸಿದೆ. ಭಾರತ ಇನ್ನೂ 127 ರನ್‌ಗಳಿಂದ ಇಂಗ್ಲೆಂಡ್‌ಗಿಂತ ಹಿಂದಿದೆ. ಬೌಲಿಂಗ್​ನಲ್ಲಿ ಮಿಂಚಿದ ಭಾರತ ತಂಡದ ಬ್ಯಾಟಿಂಗ್​ನಲ್ಲೂ ಹಿಡಿತ ಸಾಧಿಸಿ ಮೊದಲ ದಿನದಾಟದಲ್ಲಿ ಪ್ರಾಬಲ್ಯ ಸಾಧಿಸಿತು.

ಇದನ್ನೂ ಓದಿ: ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್​ ಡಬಲ್ಸ್​ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.