ರಾಜ್‌ಕೋಟ್, ಗುಜರಾತ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪುನರಾಗಮನ ಮಾಡಿದೆ. ಮೂರನೇ ದಿನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 319 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ ಈ ಇನ್ನಿಂಗ್ಸ್‌ನಲ್ಲಿ ಗರಿಷ್ಠ 4 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಬೆನ್ ಡಕೆಟ್ ಅವರು 153 ರನ್‌ಗಳ ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು.
ಭಾರತದ 445 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡವನ್ನು 319 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 126 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದ ಎರಡನೇ ದಿನದಂತ್ಯಕ್ಕೆ ಇಂಗ್ಲೆಂಡ್ ಮೊದಲ 2 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ಎರಡನೇ ದಿನದಾಟದ ಅಂತ್ಯದವರೆಗೂ ಬೆನ್ ಡಕೆಟ್ ಶತಕ ಗಳಿಸಿ ಕ್ರೀಸ್ನಲ್ಲಿ ನಿಂತಿದ್ದರು. ಮೂರನೇ ದಿನದಾಟದಲ್ಲಿ ಬುಮ್ರಾ ಮೊದಲ ವಿಕೆಟ್ ಪಡೆದರು.
ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆತವನ್ನು ಸ್ಲಿಪ್ ಓವರ್‌ನಲ್ಲಿ ಹೊಡೆದು ಔಟಾದ ಜೋ ರೂಟ್ 18 ರನ್ ಗಳಿಸಿದ್ದರು. ಬಳಿಕ ಬ್ಯಾಟಿಂಗ್ ಗೆ ಬಂದ ಜಾನಿ ಬೈರ್ ಸ್ಟೋ ರನ್ ಗಳಿಸದೇ ಕುಲದೀಪ್ ಯಾದವ್ಗೆ ಬಲಿಯಾದರು. ಇಂಗ್ಲೆಂಡ್‌ನ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು. ಕುಲದೀಪ್ ಯಾದವ್ ಎಸೆತದಲ್ಲಿ ಶಾಟ್ ಹೊಡೆಯಲು ಯತ್ನಿಸಿದ ಸೆಂಚುರಿಯನ್ ಬೆನ್ ಡಕೆಟ್ ಕೂಡ ಶುಬ್ಮನ್ ಗಿಲ;್ಗೆ ಕ್ಯಾಚ್ ನೀಡಿದರು. ಅವರು 153 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು.
ನಾಯಕ ಬೆನ್ ಸ್ಟೋಕ್ ಇನ್ನಿಂಗ್ಸ್ ಅನ್ನು ನಿಭಾಯಿಸಲು ಪ್ರಯತ್ನಿಸಿದರು, ಆದರೆ, ಅವರು ಇನ್ನಿಂಗ್ಸ್ ಅನ್ನು ಹೆಚ್ಚು ಹೊತ್ತು ನಿಭಾಯಿಸಲು ಸಾಧ್ಯವಾಗಲಿಲ್ಲ ಮತ್ತು 41 ರನ್‌ಗಳನ್ನು ಕಲೆ ಹಾಕಿ ಔಟಾದರು. ಆ ನಂತರ ವಿಕೆಟ್ ಕೀಪರ್ ಬೆನ್ ಫಾಕ್ಸ್ 13, ಟಾಮ್ ಹಾರ್ಟ್ಲಿ 9, ರೆಹಾನ್ ಅಹ್ಮದ್ 6, ಜೇಮ್ಸ್ ಆಂಡರ್ಸನ್ 1 ಮತ್ತು ಮಾರ್ಕ್ ವುಡ್ ಅಜೇಯ 4 ರನ್ ಗಳಿಸಿದರು.
ಮೊಹಮ್ಮದ್ ಸಿರಾಜ್ 4 ವಿಕೆಟ್‌ಗಳಲ್ಲದೆ, ಕುಲದೀಪ್ ಯಾದವ್ 2, ಜಸ್ಪ್ರೀತ್ ಬುಮ್ರಾ 1, ರವೀಂದ್ರ ಜಡೇಜಾ 2 ಮತ್ತು ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದರು. ಸದ್ಯ ಭಾರತ 126 ರನ್‌ಗಳ ಮುನ್ನಡೆಯೊಂದಿಗೆ ಆಡುತ್ತಿದೆ. ಈಗಾಗಲೇ ರೋಹಿತ್ ಶರ್ಮಾ 19 ರನ್ಗಳಲ್ಲಿ ರೂಟ್ ಎಸತೆಕ್ಕೆ ಬಲಿಯಾಗಿದ್ದಾರೆ. ಸದ್ಯ ಭಾರತ ತಂಡ 14 ಓವರ್ಗಳಿಗೆ 34 ರನ್ ಗಳಿಸಿ ನಾಯಕ ವಿಕೆಟ್ ಕಳೆದುಕೊಂಡಿದೆ.
ಎರಡನೇ ಇನಿಂಗ್ಸ್‌ನಲ್ಲಿ ಅಭಿಮಾನಿಗಳ ಕಣ್ಣು ಮತ್ತೆ ಸರ್ಫರಾಜ್ ಖಾನ್ ಮೇಲಿದೆ. ಹಿಂದಿನ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿ ರನ್ ಔಟ್ ಆಗಿದ್ದರು. ಯಶಸ್ವಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಔಟಾಗಿದ್ದು, ಸದ್ಯ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಭಿಮಾನಿಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.
ಓದಿ: ಕೌಟುಂಬಿಕ ಕಾರಣಕ್ಕಾಗಿ 3ನೇ ಟೆಸ್ಟ್ನಿಂದ ಹೊರಬಂದ ಸ್ಪಿನ್ನರ್ ಅಶ್ವಿನ್: ಬದಲಿ ಆಟಗಾರನ ಆಯ್ಕೆ ಇಲ್ಲ