ETV Bharat / sports

2ನೇ ಟೆಸ್ಟ್: ರೋಹಿತ್​ ಶರ್ಮಾ - ಸಿರಾಜ್​ ಸ್ಟನ್ನಿಂಗ್​ ಕ್ಯಾಚ್​ಗೆ ಅಭಿಮಾನಿಗಳು ಫಿದಾ; ವಿಡಿಯೋ ವೈರಲ್​​ - Rohit Siraj stunning Catch - ROHIT SIRAJ STUNNING CATCH

Rohit and Siraj Stunning Catches: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಸ್ಟನ್ನಿಂಗ್​ ಕ್ಯಾಚ್‌ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ರೋಹಿತ್​ ಶರ್ಮಾ ಮತ್ತು ಸಿರಾಜ್​
ರೋಹಿತ್​ ಶರ್ಮಾ ಮತ್ತು ಸಿರಾಜ್​ (AFP AND AP)
author img

By ETV Bharat Sports Team

Published : Sep 30, 2024, 4:23 PM IST

ಕಾನ್ಪುರ್​ (ಉತ್ತರ ಪ್ರದೇಶ): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್​ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನ ಕೇವಲ 35 ಓವರ್‌ಗಳ ಪಂದ್ಯ ನಡೆಸಲು ಮಾತ್ರ ಸಾಧ್ಯವಾಗಿತ್ತು. ಇದಾದ ಬಳಿಕ ಎರಡು ಮತ್ತು ಮೂರನೇ ದಿನದಾಟ ಮಳೆಗೆ ಆಹುತಿಯಾಗಿತ್ತು. ಇಂದು ನಾಲ್ಕನೇ ದಿನದಾಟ ನಡೆಯುತ್ತಿದ್ದು ಬಾಂಗ್ಲಾದೇಶದ ಮೊದಲ ಇನಿಂಗ್ಸ್​ನಲ್ಲಿ ಕೇವಲ 233 ರನ್‌ಗಳಿಸಲಷ್ಟೇ ಸೀಮಿತವಾಗಿದೆ. ಭಾರತೀಯ ಬೌಲರ್​ಗಳ ದಾಳಿಗೆ ಸಿಲುಕಿದ ಬಾಂಗ್ಲಾ ಪಡೆ ಪೆವಿಲಿಯನ್​ ಪರೇಡ್​ ಮಾಡಿತು. ಇನ್ನು ಈ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಮತ್ತು ಮೊಹ್ಮದ್​ ಸಿರಾಜ್ ಸ್ಟನ್ನಿಂಗ್​​ ಕ್ಯಾಚ್​ ಹಿಡಿಯುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

ಹೌದು, 50ನೇ ಓವರ್​ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್​ ಮಾಡುತ್ತಿದ್ದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಲಿಟನ್ ದಾಸ್ ಮಿಡ್ ಆಫ್‌ನಿಂದ ಚೆಂಡನ್ನು ಬೌಂಡರಿಗೆ ಬಾರಿಸಲು ಬಲವಾಗಿ ಹೊಡೆದರು. ಚೆಂಡು ಮಿಡ್-ಆಫ್ ಫೀಲ್ಡರ್ ಅನ್ನು ದಾಟಿ ಬೌಂಡರಿ ಹೋಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅಲ್ಲೆ ಫಿಲ್ಡಿಂಗ್​ಗೆ ನಿಂತಿದ್ದ ನಾಯಕ ರೋಹಿತ್ ಶರ್ಮಾ ಮೇಲಕ್ಕೆ ಜಿಗಿದು ಅಚ್ಚರಿಯ ಕ್ಯಾಚ್ ಪಡೆದು ಲಿಟನ್ ಅವರಿಗೆ ಪೆವಿಲಿಯನ್​ ದಾರಿ ತೋರಿಸಿದ್ದಾರೆ.

ಸಿರಾಜ್ ಸ್ಟನ್ನಿಂಗ್​ ಕ್ಯಾಚ್​: ನಾಯಕ ರೋಹಿತ್ ಹಿಡಿದ ಅದ್ಭುತ ಕ್ಯಾಚ್ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಕೂಡ ಸ್ಟನ್ನಿಂಗ್​ ಕ್ಯಾಚ್ ಪಡೆದು ಎದುರಾಳಿ ತಂಡಕ್ಕೆ ಅಚ್ಚರಿ ಮೂಡಿಸಿದರು. 56ನೇ ಓವರ್‌ನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬೌಲಿಂಗ್​ ಮಾಡಿದರು. ಈ ವೇಳೆ ಶಕೀಬ್​ ಅಲ್​ ಹಸನ್​ ಅವರ ಬ್ಯಾಟ್​ಗೆ ತಗುಲಿ ಚೆಂಡು ಗಾಳಿಯಲ್ಲಿ ಎತ್ತರಕ್ಕೆ ಹಾರಿತ್ತು. ಮಿಡ್-ಆಫ್‌ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಸಿರಾಜ್, ಹಿಂದೆ ಡೈವ್ ಮಾಡಿ ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು. ಕಷ್ಟಕರವಾದ ಕ್ಯಾಚ್​ ಹಿಡಿದು ಎಲ್ಲರನ್ನು ಅಚ್ಚರಿ ಮೂಡಿಸಿದರು.

ಮೊದಲ ಇನ್ನಿಂಗ್ಸ್​: ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​ನಲ್ಲಿ 233 ರನ್​ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶ ಪರ ಮೊಮಿನ್ - ಉಲ್ - ಹಕ್ 107 ರನ್‌ಗಳ ಅಜೇಯ ಆಟವಾಡಿದರು. ಉಳಿದ ಬ್ಯಾಟರ್​ಗಳು ಎರಡಂಕಿಗಷ್ಟೇ ಸೀಮಿತವಾದರು. ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ ಗರಿಷ್ಠ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್​ ಪಡೆದರು.​

ಇದನ್ನೂ ಓದಿ: ರೋಹಿತ್ ​ - ಯಶಸ್ವಿ ಬಿರುಸಿನ ಬ್ಯಾಟಿಂಗ್​: ಕೇವಲ 3 ಓವರ್​ನಲ್ಲೇ ವಿಶ್ವದಾಖಲೆ ಬರೆದ ಟೀಂ ಇಂಡಿಯಾ! - Team India New Record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.