ETV Bharat / sports

ಟೀಂ ಇಂಡಿಯಾ ಬ್ಯಾಟರ್​ಗಳು ಉತ್ತಮ ​ಸ್ವೀಪ್ ಶಾಟ್​ಗಳನ್ನು ಆಡಬಲ್ಲರು: ಶ್ರೀಕರ್​ ​ಭರತ್ - Ollie Pope

ಟೀಂ ಇಂಡಿಯಾ ಬ್ಯಾಟರ್​ಗಳು ಸ್ವೀಪ್​ ಶಾಟ್​ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶ್ರೀಕರ್​ ಭರತ್​ ಹೇಳಿದ್ದಾರೆ.

ಶ್ರೀಕರ್​ ​ಭರತ್
ಶ್ರೀಕರ್​ ​ಭರತ್
author img

By ETV Bharat Karnataka Team

Published : Feb 1, 2024, 11:02 PM IST

ವಿಶಾಖಪಟ್ಟಣಂ: ಟೀಂ ಇಂಡಿಯಾ ಬ್ಯಾಟರ್​ಗಳು ಉತ್ತಮ ಶಾಟ್ ಸ್ವೀಪ್ ​ ಆಡಬಲ್ಲರು. ರಿವರ್ಸ್ ಸ್ವೀಪ್‌ಗಳನ್ನೂ ಹೊಡೆಯಬಲ್ಲರು ಎಂದು ವಿಕೆಟ್‌ಕೀಪರ್ ಕಮ್​ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ. ಈಗಾಗಲೇ ಉಭಯ ತಂಡಗಳು ವೈಜಾಗ್​ಗೆ ತೆರಳಿ ಅಭ್ಯಾಸ ನಡೆಸಿವೆ. ಎರಡನೇ ಪಂದ್ಯ ಗೆಲ್ಲಲು ಭಾರತ ಕೆಲ ಯೋಜನೆಗಳನ್ನು ರೂಪಿಸಿದೆ. ಇದರ ನಡುವೆ ವಿಕೆಟ್​ ಕೀಪರ್​ ಶ್ರೀಕರ್​ ಭರತ್​ ಪೂರ್ವಭಾವಿ ಮಾಧ್ಯಮಗೋಷ್ಠಿಯಲ್ಲಿ ಸ್ವೀಪ್​ ಶಾಟ್​ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ವೀಪ್ ಶಾಟ್​ ಆಡಬಲ್ಲರು. ರಿವರ್ಸ್ ಸ್ವೀಪ್‌ಗಳನ್ನೂ ಹೊಡೆಯಬಲ್ಲರು ಎಂದು ಶ್ರೀಕರ್ ಭರತ್ ಹೇಳಿದ್ದಾರೆ.

ಭಾರತದ ಬ್ಯಾಟ್ಸ್‌ಮನ್‌ಗಳು ಏಕೆ ಪಂದ್ಯದಲ್ಲಿ ಸ್ವೀಪ್​ ಶಾಟ್​ಗಳನ್ನು ಆಡಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭರತ್, 'ಭಾರತದಲ್ಲಿ ನಾವು ಇಂತಹ ಪಿಚ್‌ಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಮಗೆ ಸ್ವೀಪ್, ರಿವರ್ಸ್ ಸ್ವೀಪ್ ಅಥವಾ ಪೆಡಲ್ ಶಾಟ್ ಅನ್ನು ಹೇಗೆ ಆಡಬೇಕು ಎಂದು ತಿಳಿದಿಲ್ಲ, ಆದರೆ ನಿರ್ದಿಷ್ಟ ಸಮಯಕ್ಕೆ ತಂಡದ ಪರಿಸ್ಥಿತಿಯನ್ನು ಪರಿಗಣಿಸಿ, ಬ್ಯಾಟ್ಸ್‌ಮನ್‌ಗಳಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮೊದಲ ಪಂದ್ಯಕ್ಕೂ ಮುನ್ನ ರಿವರ್ಸ್ ಸ್ವೀಪ್ ಶಾಟ್​ಗಳನ್ನು ಅಭ್ಯಾಸ ಮಾಡಿದ್ದೆವು ಎಂದೂ ಭರತ್ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್‌ನ ಗೆಲುವಿಗೆ ಎರಡು ರೀತಿಯ ವಿಶೇಷ ಹೊಡೆತಗಳು ಪ್ರಮುಖ ಕೊಡುಗೆ ನೀಡಿದ್ದವು. ಮೊದಲ ಶಾಟ್ ಸ್ವೀಪ್ ಮತ್ತು ಎರಡನೇ ಶಾಟ್ ರಿವರ್ಸ್ ಸ್ವೀಪ್ ಆಗಿತ್ತು. ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರಗಳ ಮುಂದೆ ನೆಲೆಯೂರಲು ಆಂಗ್ಲರು ಸ್ವೀಪ್​ ಹೊಡೆತಗಳನ್ನು ಆಡಿದ್ದರು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಆಂಗ್ಲರ ಪಡೆ ಹಿನ್ನಡೆ ಅನುಭವಿಸಿದ್ದರೂ ಭಾರತವನ್ನು 28 ರನ್‌ಗಳಿಂದ ಸೋಲಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಇದೀಗ ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯಲಿದ್ದು, ಇಂಗ್ಲೆಂಡ್ ಬ್ಯಾಟ್ಸ್ ಮನ್​ಗಳು ಮತ್ತೊಮ್ಮೆ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಮೂಲಕ ಬೌಲರ್​ಗಳ ಮುಂದೆ ನೆಲೆಯೂರಲು ಯೋಜನೆ ರೂಪಿಸುತ್ತಿದ್ದಾರೆ. ಅವರನ್ನು ತಡೆಯಲು ಟೀಮ್​ ಇಂಡಿಯಾ ಕೂಡ ಪ್ರತಿತಂತ್ರ ರೂಪಿಸಿದೆ ಎಂದು ಭಾರತದ ವಿಕೆಟ್ ಕೀಪರ್ ಶ್ರೀಕರ್ ಭರತ್ ಹೇಳಿದ್ದಾರೆ.

ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ; ಗೆಲುವಿನ ಆತ್ಮವಿಶ್ವಾಸದಲ್ಲಿ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.