ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಮೂಹೂರ್ತ ಫಿಕ್ಸ್​: ಯಾವಾಗ, ಎಲ್ಲಿ ನಡೆಯಲಿದೆ ಗೊತ್ತಾ? - World Test Championship Final - WORLD TEST CHAMPIONSHIP FINAL

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್ ಪಂದ್ಯದ ದಿನಾಂಕವನ್ನು ಐಸಿಸಿ ಪ್ರಕಟಿಸಿದೆ. ಯಾವಾಗ ಮತ್ತು ಎಲ್ಲಿ ಅಂತಿಮ ಪಂದ್ಯ ನಡೆಯಲಿದೆ, ಪ್ರಸ್ತುತದ ಅಂಕಪಟ್ಟಿ ಕುರಿತು ಸಂಪೂರ್ಣ ವಿವರ ಇಲ್ಲಿದೆ. ​

ರೋಹಿತ್​ ಶರ್ಮಾ ಮತ್ತು  ಪ್ಯಾಟ್​ ಕಮಿನ್ಸ್​
ರೋಹಿತ್​ ಶರ್ಮಾ ಮತ್ತು ಪ್ಯಾಟ್​ ಕಮಿನ್ಸ್​ ((IANS))
author img

By ETV Bharat Sports Team

Published : Sep 3, 2024, 5:53 PM IST

ಹೈದರಾಬಾದ್: 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದ ದಿನಾಂಕವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ. ಮೂರನೇ ಆವೃತ್ತಿಯ ಫೈನಲ್ ಪಂದ್ಯ ಮುಂದಿನ ವರ್ಷ ಜೂನ್ 11 ರಿಂದ 15ರ ವರೆಗೆ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಕ್ರಿಕೆಟ್​ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾರ್ಡ್ಸ್​ ಮೈದಾನ ಆತಿಥ್ಯ ವಹಿಸಲಿದೆ. ಅಲ್ಲದೇ ಈ ಹೈಪ್ರೊಫೈಲ್ ಪಂದ್ಯಕ್ಕಾಗಿ ಮೀಸಲು ದಿನವನ್ನು ಸಹ ಇರಿಸಲಾಗಿದೆ.

ಈ ಹಿಂದೆ ಕೆನ್ಸಿಂಗ್ಟನ್ ಓವಲ್​ನಲ್ಲಿ 2021 ಮತ್ತು 2023ರ ಫೈನಲ್‌ ಪಂದ್ಯವನ್ನು ಆಯೋಜಿಸಲಾಗಿತ್ತು. ಮುಂದಿನ ವರ್ಷ ಜೂನ್​ನಲ್ಲಿ ನಡೆಯಲಿರುವ ಫೈನಲ್​ ಪಂದ್ಯವು ಮಳೆ ಅಥವಾ ಇನ್ನಿತರ ಕಾರಣಗಳಿಂದಾಗಿ ಪಂದ್ಯ ರದ್ದಾದರೇ ಜೂನ್​ 16ಕ್ಕೆ ಮೀಸಲು ದಿನವನ್ನು ಇರಿಸಲಾಗಿದೆ. ಅಂಕಪಟ್ಟಿಯಲ್ಲಿನ ಅಗ್ರ ಎರಡು ತಂಡಗಳು ಫೈನಲ್​ಗೆ ಪ್ರವೇಶ ಪಡೆಯಲಿವೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ಸ್ ಟೇಬಲ್ ನೋಡುವುದಾದರೆ, ಪ್ರಸ್ತುತ ಟೀಂ ಇಂಡಿಯಾ 9 ಪಂದ್ಯಗಳನ್ನು ಆಡಿದ್ದು ಅದರಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ 68.52 ಶೇಕಡವಾರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಟೆಸ್ಟ್‌ ಪಂದ್ಯಗಳ ಪೈಕಿ 8 ಗೆಲುವು ದಾಖಲಿಸಿ 62.50 ಶೇಕಡವಾರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಇನ್ನೂ 10 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದ್ದು, ಬಾಂಗ್ಲಾದೇಶ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 3 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ನ್ಯೂಜಿಲೆಂಡ್​ ಮತ್ತು ಬಾಂಗ್ಲಾ ತಂಡಗಳನ್ನು ಕ್ಲೀನ್​ ಸ್ವೀಪ್​ ಮಾಡಿದರೆ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದಾಗಿದೆ.

ಟೀಂ ಇಂಡಿಯಾ 11 ವರ್ಷಗಳ ಬಳಿಕ ರೋಹಿತ್​ ಶರ್ಮಾ ಅವರ ನಾಯಕತ್ವದಲ್ಲಿ ಇತ್ತೀಚೆಗೆ ಟಿ20 ವಿಶ್ವಕಪ್​ ಗೆದ್ದುಕೊಂಡಿತ್ತು. ಇದೀಗ ಟೆಸ್ಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಲು ಸಕಲ ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮೊದಲು ಭಾರತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿತ್ತು ಮತ್ತು ಎರಡೂ ಬಾರಿ ಸೋಲನುಭವಿಸಿತ್ತು. ಮೊದಲು ನ್ಯೂಜಿಲೆಂಡ್ ವಿರುದ್ಧ ಸೋತರೆ ನಂತರ ಆಸ್ಟ್ರೇಲಿಯಾ ವಿರುದ್ದ ಪರಾಭವಗೊಂಡಿತ್ತು. ಇದೀಗ ಲಾರ್ಡ್ಸ್​​ನಲ್ಲಿ ಪ್ರಶಸ್ತಿ ಗೆಲ್ಲಲು ಕಸರತ್ತು ನಡೆಸಿದೆ.

ಇದನ್ನೂ ಓದಿ: 34ನೇ ವಸಂತಕ್ಕೆ ಕಾಲಿಟ್ಟ ​ಮೊಹಮ್ಮದ್​ ಶಮಿ: ಸೆನ್ಸೇಷನಲ್​ ವೇಗಿಯ ಈ ಐದು ದಾಖಲೆ ತಿಳಿಯಿರಿ - Mohammad Shami

ETV Bharat Logo

Copyright © 2025 Ushodaya Enterprises Pvt. Ltd., All Rights Reserved.