ETV Bharat / sports

ಒಲಿಂಪಿಕ್​ನಲ್ಲಿ ಭಾಗವಹಿಸಿದ ಬ್ಯಾಡ್ಮಿಂಟ್​ನಗಳ ಮೇಲೆ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?: ಇಷ್ಟು ವ್ಯಯಿಸಿದರೂ ಪದಕ ಮಾತ್ರ ಶೂನ್ಯ! - How much money govt spend badminton

author img

By ETV Bharat Sports Team

Published : Aug 13, 2024, 1:43 PM IST

ಪ್ಯಾರಿಸ್​ ಒಲಿಂಪಿಕ್ಸ್​ನ ಬ್ಯಾಡ್ಮಿಂಟನ್​ ಕ್ರೀಡೆಯಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ಮೇಲೆ ಕೇಂದ್ರ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಮತ್ತು ಯಾವ ಆಟಗಾರರಿಗೆ ತರಬೇತಿಗಾಗಿ ಎಷ್ಟು ವ್ಯಯಿಸಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತ ಬ್ಯಾಡ್ಮಿಂಟನ್​ಗಳು
ಭಾರತ ಬ್ಯಾಡ್ಮಿಂಟನ್​ಗಳು (IANS Photos)

ಹೈದರಾಬಾದ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತ ಪದಕ ಗೆಲ್ಲಬಹುದಾಗಿದ್ದ ಈವೆಂಟ್‌ಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದಾಗಿತ್ತು. ಕಾರಣ 2012 ಲಂಡನ್​ ಒಲಿಂಪಿಕ್ಸ್​ನಿಂದ 2016 ರಿಯೊ ಮತ್ತು 2020 ಟೋಕಿಯೊ ಒಲಿಂಪಿಕ್ಸ್‌ ವರೆಗೆ ನಡೆದ ಬ್ಯಾಡ್ಮಿಂಟನ್​ ಈವೆಂಟ್​ಗಳಲ್ಲಿ ಭಾರತ ಸತತ ಪದಕ ಗೆದ್ದುಕೊಂಡಿತ್ತು. ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರೆ, ಪಿವಿ ಸಿಂಧು ರಿಯೊದಲ್ಲಿ ಬೆಳ್ಳಿ ಮತ್ತು ಟೋಕಿಯೊದಲ್ಲಿ ಕಂಚಿನ ಪದಕಗಳೊಂದಿಗೆ ಮಿಂಚಿದ್ದರು.

ಈ ಹಿನ್ನೆಲೆ ಈ ಬಾರಿಯ ಒಲಿಂಪಿಕ್ಸ್​ನಲ್ಲೂ ಭಾರತ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳು ಗೆಲ್ಲಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಕಳೆದ ಎರಡು ಒಲಿಂಪಿಕ್​ ಸೀಸನ್​ನಲ್ಲಿ ಪದಕ ಗೆದ್ದಿದ್ದ ಸ್ಟಾರ್​ ಬ್ಯಾಡ್ಮಿಂಟನ್​ ತಾರೆ ಸಿಂಧು ಈ ಬಾರಿ ಮೂರನೇ ಪದಕ ಗೆದ್ದು ಹ್ಯಾಟ್ರಿಕ್​ ಗೆಲುವು ಸಾಧಿಸಲಿದ್ದಾರೆ ಎಂದು ಹೆಚ್ಚಿನ ನಿರೀಕ್ಷೆಗಳು ಹುಟ್ಟುಕೊಂಡಿದ್ದವು ಆದ್ರೆ ಇದು ಸಾಧ್ಯವಾಗಲಿಲ್ಲ. ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವಿಶ್ವದ 9ನೇ ಶ್ರೇಯಾಂಕಿತೆ, ಚೀನಾದ ಆಟಗಾರ್ತಿ ಹೀ ಬಿಂಗ್‌ಜಿಯಾವೊ ವಿರುದ್ಧ ನೇರ ಸೆಟ್​ಗಳಿಂದ ಸೋಲು ಕಂಡ ಸಿಂಧು ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದರು.

ಬಳಿಕ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯಸೇನ್​ ಕೂಡ ಅದ್ಬುತ ಫಾರ್ಮ್​ನಲ್ಲಿದ್ದರೂ ಅಂತಿಮವಾಗಿ ಸೋಲನುಭವಿಸಿ ಯಾವುದೇ ಪದಕವಿಲ್ಲದೇ ಬರಿಗೈಯಿಂದ ಹಿಂತಿರುಗಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಮೇಲೂ ಪದಕ ನಿರೀಕ್ಷೆಗಳಿದ್ದರು ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. ಕಳೆದು ಮೂರು ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ನಲ್ಲಿ ಪದಕ ಪಡೆದಿದ್ದ ಭಾರತ ಬ್ಯಾಡ್ಮಿಂಟನ್​ ತಾರೆಗಳು ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಹಾಗಂತ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸೂಕ್ತವಾದ ತರಬೇತಿ ನೀಡಿಲ್ಲ ಎಂದೇನಿಲ್ಲ. ಒಲಿಂಪಿಕ್ಸ್​ ತಯಾರಿಗಾಗಿ ಕೇಂದ್ರ ಸರ್ಕಾರ ಈ ಬ್ಯಾಡ್ಮಿಂಟನ್​ಗಳ ಮೇಲೆ ಹೆಚ್ಚಿನ ಹಣವನ್ನೂ ವ್ಯಯಿಸಿದೆ. ಆದ್ರೂ ಪದಕ ಗೆಲ್ಲುಲ್ಲಿ ಎಡವಿದ್ದಾರೆ.

ಬ್ಯಾಡ್ಮಿಂಟನ್​ಗಳಿಗೆ ಖರ್ಚಾದ ಹಣ ಎಷ್ಟು?: ಈ ಬಾರಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಬ್ಯಾಡ್ಮಿಂಟನ್‌ಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ. ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಒಟ್ಟು 117 ಕ್ರೀಡಾಪಟುಗಳಿಗಾಗಿ 470 ಕೋಟಿ ರೂ. ವ್ಯಯಿಸಲಾಗಿದ್ದು ಅದರಲ್ಲಿ ಬ್ಯಾಡ್ಮಿಂಟನ್​ ಕ್ರೀಡಾಪಟುಗಳಿಗೇ 72.03 ಕೋಟಿ ರೂ. ಖರ್ಚು ಮಾಡಿದೆ. ಆದರೇ ಯಾವೋಬ್ಬ ಬ್ಯಾಡ್ಮಿಂಟನ್‌ ತಾರೆಗಳು ಪದಕವಿಲ್ಲದೇ ಬರಿಗೈಯಲ್ಲಿ ಹಿಂತಿರುಗಿ ನಿರಾಸೆ ಮೂಡಿಸಿದ್ದಾರೆ. ಇದನ್ನೂ ಹೊರತು ಪಡಿಸಿದರೇ ಅಥ್ಲೆಟಿಕ್ಸ್​ಗಾಗಿ ಬರೋಬ್ಬರಿ ರೂ. 96.08 ಕೋಟಿ ವ್ಯಯಿಸಿದೆ.

ಇದನ್ನೂ ಓದಿ: ಕೋರ್ಟ್​ ಮುಂದೆ ತನ್ನ ದೇಹ ತೂಕ ಹೆಚ್ಚಿದ್ದರ ಕಾರಣ ವಿವರಿಸಿದ ಕುಸ್ತಿಪಟು ವಿನೇಶ್​ ಫೋಗಟ್​ - Vinesh Phogat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.