ETV Bharat / sports

ಯೂಟ್ಯೂಬ್​ ಚಾನೆಲ್‌ ಆರಂಭಿಸಿದ ಒಂದೇ ದಿನ ರೊನಾಲ್ಡೊ ಗಳಿಸಿದ ರೊಕ್ಕ ಎಷ್ಟು ಗೊತ್ತೇ? - Cristiano Ronaldo YouTube Earnings - CRISTIANO RONALDO YOUTUBE EARNINGS

ಪ್ರಸಿದ್ಧ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ತೆರೆದ ಒಂದೇ ದಿನದಲ್ಲಿ ಕೋಟ್ಯಂತರ ರೊಕ್ಕ ಸಂಪಾದಿಸಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ (AP Photos)
author img

By ETV Bharat Sports Team

Published : Aug 22, 2024, 7:36 PM IST

ಹೈದರಾಬಾದ್​: ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಯೂಟ್ಯೂಬ್ ಚಾನೆಲ್ ಅನ್ನು ರಚಿಸಿದ ಒಂದು ಗಂಟೆಯೊಳಗೆ ಅವರು ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 90 ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚಿನ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬರ್ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಇದಲ್ಲದೇ, ಕಳೆದ 24 ಗಂಟೆಯಲ್ಲಿ 15 ಮಿಲಿಯನ್‌ಗಿಂತಲೂ ಹೆಚ್ಚಿನ ಸಬ್​ಸ್ಕ್ರೈಬರ್ಸ್‌ ಪಡೆದಿದ್ದಾರೆ.

ಅನೇಕ ಯೂಟ್ಯೂಬರ್‌ಗಳು ವರ್ಷಗಳಿಂದ ಉತ್ತಮ ಕಂಟೆಂಟ್​ಗಳನ್ನು ನೀಡುತ್ತಿದ್ದರೂ ಅವರ ಚಾನೆಲ್‌ಗಳು ಇನ್ನೂ 10 ಮಿಲಿಯನ್ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ರೊನಾಲ್ಡೊ ಕೆಲವೇ ನಿಮಿಷಗಳಲ್ಲಿ ಈ ಸಾಧನೆ ಮಾಡಿದರು. ಅಲ್ಲದೇ ತಮ್ಮ ಚಾನೆಲ್​ನಲ್ಲಿ ಇದೂವರೆಗೆ 19 ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ಮೊದಲ ವೀಡಿಯೊ ಅಪ್ಲೋಡ್​ ಮಾಡುತ್ತಿದ್ದಂತೆ 13 ಗಂಟೆಗಳಲ್ಲಿ ಭಾರೀ ವೀಕ್ಷಣೆ ಪಡೆದಿದೆ. ಚಾನಲ್‌ಗೆ ಪ್ರತಿ ಗಂಟೆಗೂ ಲಕ್ಷಾಂತರ ಜನರು ಚಂದಾದಾರರಾಗುತ್ತಿದ್ದಾರೆ.

ಅವರ ವೀಡಿಯೊಗಳು ಇಲ್ಲಿಯವರೆಗೆ ಸುಮಾರು 60 ಮಿಲಿಯನ್ ವೀಕ್ಷಣೆ ಪಡೆದಿವೆ. ಥಿಂಕ್‌ಫಿಕ್‌ನ ವರದಿಯ ಪ್ರಕಾರ, ಪ್ರತಿ 1 ಮಿಲಿಯನ್ ವೀಕ್ಷಣೆಗಳಿಗೆ ಯೂಟ್ಯೂಬರ್ ಸುಮಾರು $6000 ​ ಗಳಿಸುತ್ತಿದ್ದಾರೆ. ಇದರಿಂದಾಗಿ ರೊನಾಲ್ಡೊ ಇಲ್ಲಿಯವರೆಗೆ ಯೂಟ್ಯೂಬ್‌ನಿಂದಲೇ ಸುಮಾರು 3,60,000 ಡಾಲರ್ ಬಾಚಿದ್ದಾರೆ. ಭಾರತೀಯ ರೂಪಾಯಿ ಪ್ರಕಾರ ಇದು 3 ಕೋಟಿ 2 ಲಕ್ಷ ಆಗುತ್ತದೆ.

ಇದನ್ನು ಹೊರತುಪಡಿಸಿಯೂ ರೊನಾಲ್ಡೊ ಒಟ್ಟು ಗಳಿಕೆಯಲ್ಲೂ ಮುಂದಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣ ಗಳಿಸಿದ ಮೊದಲ ಫುಟ್‌ಬಾಲಿಗ ಎನಿಸಿಕೊಂಡಿದ್ದಾರೆ. ವರದಿಗಳಂತೆ, ರೊನಾಲ್ಡೊ ನಿವ್ವಳ ಮೌಲ್ಯ $800 ಮಿಲಿಯನ್‌ನಿಂದ $950 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.