ETV Bharat / sports

2007 ರಿಂದ 2022 ರವರೆಗಿನ ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾಗವಹಿಸಿದ ಆಟಗಾರರು ಎಷ್ಟು? - T20 world cup - T20 WORLD CUP

2007 ರಿಂದ 2022 ರವರೆಗೆ 8 ಟಿ20 ವಿಶ್ವಕಪ್​​ ಆವೃತ್ತಿಗಳು ನಡೆದಿವೆ. ಇದರಲ್ಲಿ ಇಬ್ಬರು ಆಟಗಾರರು ಮಾತ್ರ ಎಲ್ಲ ಸೀಸನ್​ಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಒಬ್ಬರು ನಮ್ಮ ಭಾರತೀಯ ಎಂಬುದು ಹೆಮ್ಮೆ. ಇಲ್ಲಿದೆ ಅದರ ಪೂರ್ಣ ಮಾಹಿತಿ.

ಟಿ20 ವಿಶ್ವಕಪ್
ಟಿ20 ವಿಶ್ವಕಪ್ (ETV Bharat)
author img

By ETV Bharat Karnataka Team

Published : May 30, 2024, 8:15 PM IST

ನವದೆಹಲಿ: ಟಿ20 ಕ್ರಿಕೆಟ್​ ಯುವಕರ ಆಟ. ಇಲ್ಲಿ ಅತಿ ಕಡಿಮೆ ಎಸೆತದಲ್ಲಿ ಅತಿ ಹೆಚ್ಚು ರನ್​ ಕಲೆ ಹಾಕುವ ಕಿಲಾಡಿ ಬೇಕು. ಹೆಚ್ಚಾಗಿ ಹಿರಿಯ ಕ್ರಿಕೆಟಿಗರು ಈ ಚುಟುಕು ಮಾದರಿಗೆ ಹೊಂದಿಕೊಳ್ಳುವುದು ಕಷ್ಟ. ಹೀಗಿದ್ದರೂ, 2007 ರಿಂದ ಆರಂಭವಾಗಿರುವ ಮೊದಲ ಟಿ20 ವಿಶ್ವಕಪ್​ನಿಂದ ಹಿಡಿದು ಇಲ್ಲಿಯವರೆಗೂ ಎಲ್ಲ ಆವೃತ್ತಿಗಳಲ್ಲಿ ಆಡಿದ ಆಟಗಾರರು ಯಾರು ಎಂಬುದು ಕುತೂಹಲದ ಸಂಗತಿ.

ಐಸಿಸಿ ಆಯೋಜಿಸುವ ಟಿ20 ವಿಶ್ವಕಪ್​​ ಈವರೆಗೂ 8 ಸೀಸನ್​​ ಕಂಡಿವೆ. 2024 ರ ಆವೃತ್ತಿ 9ನೇಯದ್ದಾಗಿದೆ. 17 ವರ್ಷಗಳಲ್ಲಿ ಅದೆಷ್ಟೋ ಆಟಗಾರರು ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. ಆದರೆ, ಇಬ್ಬರು ಆಟಗಾರರು ಮಾತ್ರ ಎಲ್ಲ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಭಾರತದ ಆಟಗಾರ ಕೂಡ ಒಬ್ಬರು ಎಂಬುದು ವಿಶೇಷ.

ನಿಜ. 9ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಆಡುವ ಮೂಲಕ ಎಲ್ಲ ಆವೃತ್ತಿಗಳಲ್ಲಿ ಪಾಲ್ಗೊಂಡ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದ ಆಲ್​​ರೌಂಡರ್​ ಶಕೀಬ್​ ಅಲ್​ ಹಸನ್​ ಅವರೂ ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಇಬ್ಬರು ಆಟಗಾರರು ಮಾತ್ರ ಐಸಿಸಿ ಎಲ್ಲ ಟಿ20 ವಿಶ್ವಕಪ್​ನಲ್ಲಿ ಆಡಿದ್ದಾರೆ. ರೋಹಿತ್ ಮತ್ತು ಶಕೀಬ್ ಇದುವರೆಗೆ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದಾರೆ. ಈಗ ಅವರು 9ನೇ ಋತುವಿನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ಕ್ರಿಕೆಟಿಗರು 2007 ರಿಂದ 2022 ರವರೆಗಿನ ಪ್ರತಿ ಟಿ20 ವಿಶ್ವಕಪ್​ನಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ರೋಹಿತ್, ಶಕೀಬ್ ಪ್ರದರ್ಶನ ಹೇಗಿದೆ?: ಭಾರತ ತಂಡದ ನಾಯಕ ರೋಹಿತ್ ಶರ್ಮಾ 2007 ರಿಂದ 2022ರವರೆಗೆ ನಡೆದ 8 ಸೀಸನ್​ ಟಿ20 ವಿಶ್ವಕಪ್‌ನಲ್ಲಿ 39 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಒಟ್ಟು 963 ರನ್ ಪೇರಿಸಿದ್ದಾರೆ. ಇದುವರೆಗೆ 91 ಬೌಂಡರಿ ಮತ್ತು 35 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ರೋಹಿತ್ ಅವರ ಸರಾಸರಿ 34.39 ಮತ್ತು ಸ್ಟ್ರೈಕ್ ರೇಟ್ 127.88 ಆಗಿದೆ.

ಶಕೀಬ್ ಅಲ್ ಹಸನ್ 8 ವಿಶ್ವಕಪ್‌ನಲ್ಲಿ 36 ಪಂದ್ಯಗಳನ್ನು ಆಡಿದ್ದು, 3 ಅರ್ಧಶತಕದೊಂದಿಗೆ 742 ರನ್ ಗಳಿಸಿದ್ದಾರೆ. ಶಕೀಬ್ ತಮ್ಮ ಬ್ಯಾಟ್‌ನಿಂದ 62 ಬೌಂಡರಿ ಮತ್ತು 23 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರ ರನ್​ ಸರಾಸರಿ 23.93 ಮತ್ತು ಸ್ಟ್ರೈಕ್ ರೇಟ್ 122.44. ಆಗಿದೆ. ಇನ್ನೂ ಬೌಲಿಂಗ್​ನಲ್ಲೂ ಮಿಂಚಿರುವ ಅವರು, 47 ವಿಕೆಟ್ ಕಬಳಿಸಿದ್ದಾರೆ. ಚುಟುಕು ಮಾದರಿಯ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಅವರದ್ದಾಗಿದೆ.

ಇನ್ನೂ, ಜೂನ್ 2 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ 9ನೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಇದನ್ನೂ ಓದಿ: ನ್ಯೂಯಾರ್ಕ್‌ಗೆ ಬಂದಿಳಿದ ರಿಂಕು ಸಿಂಗ್; 15 ಸದಸ್ಯರ ಬಳಗದಿಂದ ಕೈಬಿಟ್ಟಿದ್ದಕ್ಕೆ ಹಲವರ ಬೇಸರ - T20 World Cup 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.