ETV Bharat / sports

ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಮುಖ್ಯ ಕೋಚ್ ಸ್ಥಾನ ಕೊನೆಗೊಳಿಸಿದ ರಾಹುಲ್ ದ್ರಾವಿಡ್ - Dravid Ends His Career - DRAVID ENDS HIS CAREER

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 2024ರ T20 ವಿಶ್ವಕಪ್ ಗೆಲುವಿನೊಂದಿಗೆ ತಮ್ಮ ಅವಧಿಯನ್ನು ಕೊನೆಗೊಳಿಸಿದ್ದಾರೆ. ದ್ರಾವಿಡ್ ಕೋಚ್​​ ಹುದ್ದೆಗೆ ಮರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಟೀಂ ಇಂಡಿಯಾಗೆ ಹೊಸ ಮುಖ್ಯ ಕೋಚ್ ಬರಲಿದ್ದಾರೆ. ನಿಖಿಲ್ ಬಾಪಟ್ ಬರಹ ಇಲ್ಲಿದೆ

BlankHead Coach Rahul Dravid Ends His Career On A High As India Win T20 World Cup 2024
ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಮುಖ್ಯ ಕೋಚ್ ಸ್ಥಾನ ಕೊನೆಗೊಳಿಸಿದ ರಾಹುಲ್ ದ್ರಾವಿಡ್ (ANI Photos)
author img

By ETV Bharat Karnataka Team

Published : Jun 30, 2024, 1:21 AM IST

Updated : Jun 30, 2024, 2:13 AM IST

ಬಾರ್ಬಡೋಸ್/ಹೈದರಾಬಾದ್: ಮೆನ್​ ಇನ್​​ ಬ್ಲೂ ಪಡೆಯ ಮಾಜಿ ಬ್ಯಾಟರ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ 2024ರ ಮುಕ್ತಾಯದೊಂದಿಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಹೊರ ನಡೆದಿದ್ದು, ತಮ್ಮ ವೃತ್ತಿಜೀವನವನ್ನು ಗೆಲುವಿನ ಗೌರವ ಹಾಗೂ ಸಂತಸದೊಂದಿಗೆ ಕೊನೆಗೊಳಿಸಿದ್ದಾರೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಸಾಧನೆ ಮಾಡಿದೆ. ಟೆಸ್ಟ್ ಸ್ಪೆಷಲಿಸ್ಟ್ ಹಾಗೂ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ದ್ರಾವಿಡ್‌ ಒಬ್ಬ ಕ್ರಿಕೆಟ್​ ದಂತಕಥೆಯೂ ಹೌದು.

ಭಾರತದ ಮಾಜಿ ಆಲ್‌ರೌಂಡರ್ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ದ್ರಾವಿಡ್​ ಕೋಚ್​​​​ ಆಗಿ ನಿಯುಕ್ತಿಗೊಂಡಿದ್ದರು.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಭಾರತ U-19 ತಂಡದ ಮುಖ್ಯಸ್ಥರಾಗಿದ್ದ ದ್ರಾವಿಡ್ ನಂತರ ಹಿರಿಯ ತಂಡದ ಮುಖ್ಯ ತರಬೇತಿದಾರರಾಗಿ ಅತ್ಯದ್ಬುತವಾದ ಪಾತ್ರವನ್ನು ವಹಿಸಿಕೊಂಡರು. ICC ODI 2023 ರ ವಿಶ್ವಕಪ್ ನಂತರ ಅವರ ಮೊದಲ ಅವಧಿ ಕೊನೆಗೊಂಡಿತ್ತು. ವಿಶ್ವಕಪ್​​​​​​​​​​​​​​​ ನಲ್ಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ರೋಹಿತ್​ ಪಡೆ ಅವಿಸ್ಮರಣೀಯ ಸೋಲು ಕಂಡಿತ್ತು. ಈ ಸೋಲಿನ ಹೊರತಾಗಿಯೂ BCCI ರಾಹುಲ್​ ದ್ರಾವಿಡ್​ ಅವರನ್ನು T20 ವಿಶ್ವಕಪ್ 2024 ರ ಅಂತ್ಯದವರೆಗೆ ಕೋಚ್​ ಆಗಿಯೇ ಮುಂದುವರೆಸಿತ್ತು. ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಮಾರ್ಗದರ್ಶನದಲ್ಲೇ ಭಾರತವು ಮೂರು ಸ್ವರೂಪಗಳಲ್ಲಿ - T20s, ODIs ಮತ್ತು ಟೆಸ್ಟ್‌ಗಳಲ್ಲಿ ಗಣನೀಯ ಯಶಸ್ಸನ್ನು ಸಾಧಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಪ್ರಮುಖ ಐಸಿಸಿ ಟ್ರೋಪಿಗಳನ್ನು ಹೊರತು ಪಡಿಸಿ ಬಹುತೇಕ ಸರಣಿಗಳಲ್ಲಿ ಭಾರತ ತಂಡ ಅದ್ಬುತ ಪ್ರದರ್ಶನವನ್ನೇ ನೀಡಿದೆ.

ಬಹುತೇಕ ಆಟಗಾರರು ರಾಹುಲ್ ದ್ರಾವಿಡ್ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದಾರೆ. ಅವರ ಆಟದ ದಿನಗಳಲ್ಲಿ 'ಜಮ್ಮಿ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 'ದಿ ವಾಲ್'ಗಾಗಿ ಐಸಿಸಿ ಟ್ರೋಫಿಯನ್ನು ಗೆಲ್ಲಲು ಉತ್ಸುಕರಾಗಿದ್ದರು. ಆಟಗಾರನಾಗಿ ಅವರ ಸಂಪೂರ್ಣ ವೃತ್ತಿಜೀವನದಲ್ಲಿ, ರಾಹುಲ್ ದ್ರಾವಿಡ್ ಯಾವುದೇ ICC ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರ ನಾಯಕತ್ವದಲ್ಲಿ ಭಾರತವು 2007 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ICC ODI ವಿಶ್ವಕಪ್‌ನಿಂದ ಮೊದಲ ಸುತ್ತಿನಲ್ಲಿಯೇ ಹೊರಬಿದ್ದು ಭಾರಿ ಅವಮಾನ ಎದುರಿಸಿತ್ತು.

2018 ರಲ್ಲಿ U-19 ವಿಶ್ವಕಪ್​​​​​ ನಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡವು ಪ್ರಶಸ್ತಿ ಗೆದ್ದಾಗ U-19 ಮುಖ್ಯ ಕೋಚ್ ಆಗಿ ದ್ರಾವಿಡ್ ಮಾರ್ಗದರ್ಶನ ಮಾಡಿದ್ದರು. ಬೆಂಗಳೂರಿಗರಾದ ದ್ರಾವಿಡ್‌ ಮಾರ್ಗದರ್ಶನದಲ್ಲೇ ODI ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ತವಕದಲ್ಲಿ ಭಾರತೀಯ ತಂಡದ ಆಟಗಾರರು ಉತ್ಸುಕರಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಟಿ20 ವಿಶ್ವಕಪ್​ 2024ರಲ್ಲಿ ಟೀಂ ಗೆಲುವಿನೊಂದಿಗೆ ತಮ್ಮ ಕೋಚ್​ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ದೇಶೀಯ ಸರ್ಕ್ಯೂಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ದ್ರಾವಿಡ್‌ಗೆ ಟಿ20 ವಿಶ್ವಕಪ್ ಗೆಲುವು ದೊಡ್ಡ ಗೌರವ ಸಿಕ್ಕಿದಂತಾಗಿದೆ.

ಇದನ್ನು ಓದಿ:ಐಸಿಸಿ ಟ್ರೋಪಿ ಬರ ನೀಗಿಸಿಕೊಂಡ ಟೀಂ ಇಂಡಿಯಾ: ಕೊಹ್ಲಿ ಪಂದ್ಯ ಪುರುಷ, ಬುಮ್ರಾಗೆ ಸರಣಿ ಶ್ರೇಷ್ಠ ಪುರಸ್ಕಾರ - INDIA WIN T20 World Cup 2024

ಈ ಸಲವೂ ಭಾರತ ವಿಶ್ವಕಪ್​​ ಗೆಲ್ಲದಿದ್ರೆ ರೋಹಿತ್​ ಶರ್ಮಾ ಸಮುದ್ರಕ್ಕೆ ಹಾರ್ತಾರೆ: ಸೌರವ್​ ಗಂಗೂಲಿ - IND VS SOUTH AFRICA FINAL

Last Updated : Jun 30, 2024, 2:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.