ETV Bharat / sports

ಟಿ20 ವಿಶ್ವಕಪ್ ಪದಕಕ್ಕೆ ವಿರಾಟ್ ಕೊಹ್ಲಿ ಅರ್ಹರು: ಯುವರಾಜ್ ಸಿಂಗ್ - Yuvraj Singh hails Virat Kohli

ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ರನ್ ಮಷಿನ್​ ವಿರಾಟ್​ ಕೊಹ್ಲಿ ಅವರ ಆಟದ ವೈಖರಿಯನ್ನು ಕೊಂಡಾಡಿದ್ದಾರೆ.

YUVRAJ SINGH HAILS VIRAT KOHLI
ವಿರಾಟ್ ಕೊಹ್ಲಿ ಮತ್ತು ಯುವಿರಾಜ್ ಸಿಂಗ್ (IANS)
author img

By ANI

Published : May 9, 2024, 4:17 PM IST

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ "ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್" ಎಂದು ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಶ್ಲಾಘಿಸಿದ್ದಾರೆ. ಐಸಿಸಿ ಜೊತೆಗಿನ ಚಾಟ್‌ನಲ್ಲಿ ಮಾತನಾಡುತ್ತ, ಕೊಹ್ಲಿ ಬಗೆಗಿನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಕಪ್ ಗೆಲ್ಲುವ ಅರ್ಹತೆ ಇರುವ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಹೆಚ್ಚು ರನ್ ಗಳಿಸುವ ಮೂಲಕ 2023ರ ವಿಶ್ವಕಪ್​ನಲ್ಲಿ ದಾಖಲೆ​ ಬರೆದಿರುವ ಚೇಸಿಂಗ್​ ಮಾಸ್ಟರ್,​ ಟಿ20 ವಿಶ್ವಕಪ್ ಟ್ರೋಫಿಯತ್ತ ದೃಷ್ಟಿ ನೆಟ್ಟಿದ್ದಾರೆ. ಎಲ್ಲ ಮಾದರಿಯಲ್ಲಿ ಫಿಟ್​ ಆಗಿದ್ದು, ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಪದಕವನ್ನು ಎತ್ತಿ ಹಿಡಿಯುವ ಆಟಗಾರರಲ್ಲಿ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

ಅವರ ಕೆಲವು ಸ್ಮರಣೀಯ ಹೊಡೆತಗಳಿಗೆ ಬರುವ ಟಿ20 ವಿಶ್ವಕಪ್ ಸಾಕ್ಷಿಯಾಗುವುದರಲ್ಲಿ ಅನುಮಾನ ಇಲ್ಲ. ಎರಡು ವರ್ಷಗಳ ಹಿಂದೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 90,000 ಪ್ರೇಕ್ಷಕರನ್ನು ದಂಗುಬಡಿಸಿದ್ದನ್ನು ನಾವು ಯಾರು ಮರೆಯುವಂತಿಲ್ಲ. ಒತ್ತಡವನ್ನು ಎದುರಿಸುವುದು ಅವರಿಗೆ ಹೇಳಿಕೊಡಬೇಕಿಲ್ಲ. ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಭಾರತಕ್ಕೆ ಅಂದು ಕೇವಲ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 82* ರನ್ ಗಳಿಸಿದ್ದು ಇನ್ನೂ ನಮ್ಮೆಲ್ಲರ ಕಣ್ಣ ಮುಂದಿದೆ. ಪ್ರತಿ ಪಂದ್ಯದಲ್ಲಿ ತಮ್ಮ ತಂಡಕ್ಕೆ ಕೊಡುಗೆ ಎಷ್ಟು ಕೊಡಬೇಕು ಅನ್ನೋದು ಅವರಿಗೆ ಗೊತ್ತಿದೆ. ಒಂದು ಹಂತದವರೆಗೂ ಕ್ರೀಸ್​ನಲ್ಲಿದ್ದರೆ ಗೆಲುವು ಕಷ್ಟವೇ ಅಲ್ಲ. ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಅವರು ಅದನ್ನು ಮಾಡಿ ತೋರಿಸಿದ್ದಾರೆ. ಯಾವ ಬೌಲರ್​ಗೆ ಯಾವ ಪ್ರಮಾಣದಲ್ಲಿ ಬ್ಯಾಟ್​ ಬೀಸಬೇಕು ಅನ್ನೋದು ಸಹ ಅವರಿಗೆ ಗೊತ್ತು. ಕಳೆದ 10 ವರ್ಷಗಳಿಂದ ಅದೇ ಫಾರ್ಮ್​ ಉಳಿಸಿಕೊಂಡಿದ್ದಾರೆ ಎಂದು ಯುವರಾಜ್ ಸಿಂಗ್ ರನ್ ಮಷಿನ್​ ವಿರಾಟ್​ ಕೊಹ್ಲಿ ಅವರ ಆಟದ ವೈಖರಿಯನ್ನು ಕೊಂಡಾಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ICC ಪುರುಷರ T20 ವಿಶ್ವಕಪ್‌ಗಾಗಿ ಇತ್ತೀಚೆಗೆಷ್ಟೇ ಭಾರತದ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ರೋಹಿತ್​ ಶರ್ಮಾಗೆ ನಾಯಕತ್ವ ನೀಡಲಾಗಿದೆ. ಹಲವು ಸರಣಿಗಳಿಗೆ ಕ್ಯಾಪ್ಟನ್​ ಆಗಿದ್ದ ಹಾರ್ದಿಕ್​ ಪಾಂಡ್ಯ ಉಪ ನಾಯಕರಾಗಿದ್ದಾರೆ. ಯುವ ಆಟಗಾರ, ಡ್ಯಾಶಿಂಗ್​ ಓಪನರ್​ ಯಶಸ್ವಿ ಜೈಸ್ವಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟಿ20 ನಂಬರ್​ 1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​​ ಸ್ಥಾನ ಅಬಾಧಿತವಾಗಿದೆ. ಮೊದಲ ಸಲ ವಿಶ್ವಕಪ್​ ಆಡುತ್ತಿರುವ ಶಿವಂ ದುಬೆ, ಅಕ್ಷರ್​ ಪಟೇಲ್​, ರವೀಂದ್ರ ಜಡೇಜಾ ಇರಲಿದ್ದಾರೆ. 'ಕುಲ್ಚಾ' ಜೋಡಿ ಖ್ಯಾತಿಯ ಕುಲದೀಪ್​ ಯಾದವ್​, ಯಜುವೇಂದ್ರ ಚಹಲ್​ ಮತ್ತೆ ಒಂದಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ವೇಗದ ಪಡೆಯ ನೇತೃತ್ವ ವಹಿಸಿದರೆ, ಮೊಹಮದ್​ ಸಿರಾಜ್​, ಅರ್ಷದೀಪ್​ ಸಿಂಗ್​ ಸಾಥ್​ ನೀಡಲಿದ್ದಾರೆ. ತಂಡದ ಸೆನ್ಸೇಷನರ್​ಗಳಾದ ಶುಭ್​ಮನ್​ ಗಿಲ್​, ರಿಂಕು ಸಿಂಗ್​ ಮೀಸಲು ತಂಡದಲ್ಲಿದ್ದಾರೆ. ಭಾರತವು ಜೂನ್ 5 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ T20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದ್ದು, ಜೂನ್ 9 ರಂದು ಅದೇ ಸ್ಥಳದಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ: ಸ್ಯಾಮ್ಸನ್‌, ಚಹಲ್, ದುಬೆಗೆ ಛಾನ್ಸ್‌; ಕೆ.ಎಲ್‌.ರಾಹುಲ್ ಮಿಸ್‌ - T20 World Cup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.