ಚಂಡೀಗಢ: ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಪದಕ ವಿಜೇತರಂತೆ ಗೌರವಿಸಲಾಗುವುದು ಎಂದು ಹರಿಯಾಣ ಸಿಎಂ ನಯಾಬ್ ಸೈನಿ ಘೋಷಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಿಎಂ, 'ಹರಿಯಾಣದ ಕೆಚ್ಚೆದೆಯ ಮಗಳು ವಿನೇಶ್ ಫೋಗಟ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಆಡಲು ಸಾಧ್ಯವಾಗದೇ ಇರಬಹುದು. ಆದರೆ ಫೋಗಟ್ ನಮಗೆಲ್ಲ ಚಾಂಪಿಯನ್ ಆಗಿದ್ದಾರೆ. ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ನಿರ್ಧರಿಸಲಾಗಿದೆ. ಸರ್ಕಾರ ಒಲಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಎಲ್ಲಾ ಗೌರವ ಮತ್ತು ಸೌಲಭ್ಯಗಳನ್ನು ನೀಡಲಿದೆ' ಎಂದು ಬರೆದುಕೊಡಿದ್ದಾರೆ.
हरियाणा की हमारी बहादुर बेटी विनेश फौगाट ने ज़बरदस्त प्रदर्शन करके ओलंपिक में फाइनल में प्रवेश किया था। किन्हीं भी कारणों से वो भले ही ओलंपिक का फाइनल नहीं खेल पाई हो लेकिन हम सबके लिए वो एक चैंपियन है।
— Nayab Saini (@NayabSainiBJP) August 8, 2024
हमारी सरकार ने ये फैसला किया है कि विनेश फौगाट का स्वागत और अभिनंदन एक…
ಸರ್ಕಾರದ ಈ ನಿರ್ಧಾರದಿಂದ ವಿನೇಶ್ ಅವರ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಸಂತಸಗೊಂಡಿದ್ದಾರೆ. ವಿನೇಶ್ ಬೆಳ್ಳಿ ಪದಕ ವಿಜೇತ ಎಂಬುದಾಗಿ ಪರಿಗಣಿಸಿದ ಸರ್ಕಾರಕ್ಕೆ ಧನ್ಯವಾದಗಳು. ಇದು ಭವಿಷ್ಯದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿದೆ ಎಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಮಹಿಳಾ ಕುಸ್ತಿ ಪಂದ್ಯ 50 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ 100 ಗ್ರಾಂ ನಷ್ಟು ಅಧಿಕ ತೂಕ ಕಂಡು ಬಂದ ಕಾರಣ ಪಂದ್ಯದಿಂದ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ವಿನೇಶ್ ಕುಸ್ತಿ ಕ್ರೀಡೆಗೂ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ 'ಎಕ್ಸ್' ಖಾತೆಯಲ್ಲಿ ವಿನೇಶ್, 'ಅಮ್ಮಾ, ಕುಸ್ತಿ ನನ್ನನ್ನು ಸೋಲಿಸಿತು. ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಎಲ್ಲವೂ ನುಚ್ಚುನೂರಾಗಿವೆ. ಈಗ ನನ್ನಲ್ಲಿ ಹೆಚ್ಚು ಶಕ್ತಿ ಇಲ್ಲ. 2001ರಿಂದ 2024ರ ಸುದೀರ್ಘ ಕುಸ್ತಿ ಪ್ರಯಾಣಕ್ಕೆ ವಿದಾಯ. ನಿಮ್ಮೆಲ್ಲರಿಗೂ ಋಣಿ' ಎಂದು ಬರೆದು ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ ಪುರುಷರ ಕುಸ್ತಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್ - Paris Olympics Wrestling