ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಜುಲೈನಲ್ಲಿ ಬೇರ್ಪಟ್ಟಿದ್ದಾರೆ. ಈ ಮಧ್ಯೆಯೇ, ಹಾರ್ದಿಕ್ ಪಾಂಡ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ಈ ಜೋಡಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಿನ್ನೆಲೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ಹಾರ್ದಿಕ್ ಬೇರೊಬ್ಬ ಹುಡುಗಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅವರು ಬ್ರಿಟಿಷ್ ಗಾಯಕಿ ಮತ್ತು ಟಿವಿ ನಟಿ ಜಾಸ್ಮಿನ್ ವಾಲಿಯಾ. ಇಬ್ಬರೂ ಒಟ್ಟಿಗೇ ವಿಹಾರಕ್ಕೆ ತೆರಳಿದ್ದರು ಎಂಬ ಪ್ರಚಾರವೂ ಜೋರಾಗಿದೆ. ಕೆಲವು ಗಂಟೆಗಳ ಹಿಂದೆ, ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಗ್ರೀಸ್‌ನ ಹೋಟೆಲ್ ಈಜುಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ತೆಗೆದ ವಿಡಿಯೋ ಅದು. ಇದಕ್ಕೂ ನಾಲ್ಕು ದಿನಗಳ ಹಿಂದೆ ಜಾಸ್ಮಿನ್ ವಾಲಿಯಾ ಕೂಡ ಅದೇ ಸ್ಥಳದಲ್ಲಿ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರಿಬ್ಬರು ಭೇಟಿಯಾಗಲು ರಜೆಯ ಮೇಲೆ ತೆರಳಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿವೆ.
ಇಬ್ಬರು ಪರಸ್ಪರ ತಮ್ಮ ಪೋಸ್ಟ್‌ಗಳಿಗೆ ಲೈಕ್ ಮಾಡುವುದು ಕೂಡ ಕಂಡುಬಂದಿದೆ. ಪಾಂಡ್ಯ ಅವರು ಈ ಹಿಂದೆ ಜಾಸ್ಮಿನ್ ಅವರ ಹಲವು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿದ್ದಾರೆ. ಈ ಕ್ರಮದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದೀಗ ಅವರ ಪೋಸ್ಟ್‌ಗಳು ವೈರಲ್ ಆಗಿದೆ.
ಜಾಸ್ಮಿನ್ ವಾಲಿಯಾ ಯಾರು?: ಇಂಗ್ಲೆಂಡ್‌ನ ಎಸೆಕ್ಸ್‌ನ ಜಾಸ್ಮಿನ್ ವಾಲಿಯಾ ಮೊದಲು ಟಿವಿ ಸರಣಿಯಲ್ಲಿ ನಟಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಭಿಮಾನಿಗಳಿಗೆ ಹತ್ತಿರವಾದರು. ಅವರು 2014ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಮತ್ತು ಹಲವಾರು ಆಲ್ಬಂಗಳನ್ನು ಮಾಡಿದ್ದಾರೆ. ಆಕೆಯ 'ಬಾಮ್ ಡಿಗಿ' ಹಾಡು ಬಾಲಿವುಡ್ ಚಲನಚಿತ್ರದಲ್ಲಿ ರೀಮೇಕ್ ಆಗಿತ್ತು. ಜಾಸ್ಮಿನ್ ಬಾಲಿವುಡ್‌ನ ಅಸಿಮ್ ರಿಯಾಜ್ ಅವರೊಂದಿಗೆ ಸಂಗೀತ ವಿಡಿಯೋವನ್ನು ಮಾಡಿದ್ದಾರೆ. ಅವರು ಇನ್‌ಸ್ಟಾದಲ್ಲಿ 6.4 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಬೇರೆಯಾದ ಪಾಂಡ್ಯ- ನತಾಶಾ: ಡಿಸೆಂಬರ್ 31, 2019 ರಂದು, ಪಾಂಡ್ಯ ಅವರು ಸರ್ಬಿಯಾದ ನಟಿ ನತಾಶಾ (ನಟಾಸಾ ಸ್ಟಾಂಕೋವಿಕ್) ಅವರೊಂದಿಗೆ ದುಬೈನಲ್ಲಿ ತಮ್ಮ ಕೈಗೆ ಉಂಗುರವನ್ನು ಹಾಕುವ ಮೂಲಕ ಮತ್ತು ವಿನೂತನ ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು. ಬಳಿಕ ಎರಡೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಆಕೆಯ ವಿವಾಹ ನೋಂದಣಿ ಮಾಡಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಬ್ಬರೂ 2023ರಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ವಿವಾಹವಾಗಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅವರು ಕಳೆದ ಜುಲೈ 18 ರಂದು ಬೇರ್ಪಟ್ಟಿರುವ ಕುರಿತು ಘೋಷಣೆ ಮಾಡಿದ್ದರು. ಅದಕ್ಕೂ ಮುನ್ನ, ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಸೆರ್ಬಿಯಾಕ್ಕೆ ತೆರಳಿದ್ದರು.
ಇದನ್ನೂ ಓದಿ: ಎಡಗೈ ಬಳಕೆದಾರರ ದಿನದಂದೇ 'ಎಡಗೈಯೇ ಅಪಘಾತಕ್ಕೆ ಕಾರಣ' ಪೋಸ್ಟರ್ ಬಿಡುಗಡೆ - Edagaiye Apaghatakke Karana