ETV Bharat / sports

ಟಿ20ಯಲ್ಲಿ 5ನೇ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್​ ಶರ್ಮಾರನ್ನು ಸರಿಗಟ್ಟಿದ್ದಾರೆ.

Etv Bharatglenn-maxwell-equals-rohit-sharmas-record-of-smashing-five-hundreds-in-t20is
ಟಿ20ಯಲ್ಲಿ 5ನೇ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್!
author img

By ETV Bharat Karnataka Team

Published : Feb 11, 2024, 7:32 PM IST

ಅಡಿಲೇಡ್ (ಆಸ್ಟ್ರೇಲಿಯಾ): ವೆಸ್ಟ್ ಇಂಡೀಸ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 55 ಎಸೆತಗಳಲ್ಲಿ 120 ರನ್ ಸಿಡಿಸಿದ್ದಾರೆ. ಈ ಮೂಲಕ ಮ್ಯಾಕ್ಸ್‌ವೆಲ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್​ ಶರ್ಮಾರನ್ನು ಸರಿಗಟ್ಟಿದ್ದಾರೆ. ಅವರು ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿ ಅಜೇಯ 120 ರನ್ ಗಳಿಸಿದರು.

ಇದು ಅಂತಾರಾಷ್ಟ್ರೀಯ ಟಿ20ಯಲ್ಲಿನ ಅವರ ಐದನೇ ಶತಕವಾಗಿದೆ. ಇದು ಮ್ಯಾಕ್ಸ್‌ವೆಲ್ ಆಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಎರಡನೇ ಶತಕವಾಗಿದೆ. 35 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಇನ್ನಿಂಗ್ಸ್‌ನಲ್ಲಿ ಸ್ವೀಪ್‌ಗಳು, ರಿವರ್ಸ್ ಸ್ವೀಪ್‌ಗಳು ಮತ್ತು ಮಿಡ್-ವಿಕೆಟ್ ಬೌಂಡರಿಗಳನ್ನು ಬಾರಿಸಿದರು.

ಅಡಿಲೇಡ್​ನ ಓವಲ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ, ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 241 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು.

ಇನ್ನು ಗೆಲ್ಲಲೇಬೇಕಾದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಏಳು ಓವರ್‌ಗಳ ಒಳಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಆಸರೆಯಾದರು. ಟಿಮ್ ಡೇವಿಡ್ 14 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಆಕ್ರಮಣಕಾರಿ ಆಟವಾಡಿದರು. ಮ್ಯಾಕ್ಸ್‌ವೆಲ್‌ ಅವರ ಭರ್ಜರಿ ಶತಕ ಮತ್ತು ಕೆಳ ಕ್ರಮಾಂಕದಲ್ಲಿನ ಟಿಮ್‌ ಡೇವಿಡ್‌ ಅವರ ಅಮೋಘ ಆಟ ಆಸ್ಟ್ರೇಲಿಯಾ ತಂಡ ಬೃಹತ್‌ ಮೊತ್ತ ದಾಖಲಿಸಲು ನೆರವಾಯಿತು.

T20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು:

1. ರೋಹಿತ್ ಶರ್ಮಾ - 151 ಪಂದ್ಯಗಳಲ್ಲಿ 5 ಶತಕ

2. ಗ್ಲೆನ್ ಮ್ಯಾಕ್ಸ್‌ವೆಲ್ - 103 ಪಂದ್ಯಗಳಲ್ಲಿ 5 ಶತಕ

3. ಸೂರ್ಯಕುಮಾರ್ ಯಾದವ್ - 60 ಪಂದ್ಯಗಳಲ್ಲಿ 4 ಶತಕ

4. ಸಬಾವೂನ್ ಡೇವಿಜಿ - 31 ಪಂದ್ಯಗಳಲ್ಲಿ 3 ಶತಕ

ಇದನ್ನೂ ಓದಿ: ಅಂಡರ್ 19 ವಿಶ್ವಕಪ್ ಫೈನಲ್​: ಭಾರತದ ವಿರುದ್ಧ ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.