ETV Bharat / sports

ಭಾರತದ ಮಾಜಿ ಕ್ರಿಕೆಟ್​ ಆಟಗಾರ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ - Anshuman Gaekwad passed away

author img

By ETV Bharat Sports Team

Published : Aug 1, 2024, 10:16 AM IST

ದತ್ತಾಜಿರಾವ್ ಗಾಯಕ್ವಾಡ್ ಪುತ್ರ, ಭಾರತದ ಮಾಜಿ ಕ್ರಿಕೆಟ್​ ಆಟಗಾರ ಅಂಶುಮನ್ ಗಾಯಕ್ವಾಡ್ ಬ್ಲಡ್​ ಕ್ಯಾನ್ಸರ್​ ವಿರುದ್ಧ ಹೋರಾಡಿ ಕೊನೆಗೆ ಇಹಲೋಕ ತ್ಯಜಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟ್​ ಆಟಗಾರ ಅಂಶುಮಾನ್ ಗಾಯಕ್ವಾಡ್
ಭಾರತದ ಮಾಜಿ ಕ್ರಿಕೆಟ್​ ಆಟಗಾರ ಅಂಶುಮಾನ್ ಗಾಯಕ್ವಾಡ್ (ETV Bharat)

ಹೈದರಾಬಾದ್: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟ್​ ಆಟಗಾರ, ಕೋಚ್​ ಆಗಿದ್ದ ಅಂಶುಮನ್​ ಗಾಯಕ್ವಾಡ್ ಜುಲೈ 31 ಬುಧವಾರ (ನಿನ್ನೆ) ನಿಧನರಾಗಿದ್ದಾರೆ. ಬರೋಡಾ ಕ್ರಿಕೆಟ್ ಅಸೋಸಿಯೇಷನ್ ​​(BCA) ಹಿರಿಯ ಅಧಿಕಾರಿ ನಿಧನದ ವಿಚಾರವನ್ನು ಈಟಿವ್​ ಭಾರತ್‌ಗೆ ಖಚಿತ ಪಡಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿರುವ ಅಂಶುಮನ್ ಗಾಯಕ್ವಾಡ್ ಅವರ ಅಂತ್ಯಕ್ರಿಯೆಯು ಇಂದು ಬೆಳಗ್ಗೆ ನಡೆಯಲಿದೆ.

71 ವರ್ಷ ತುಂಬಿದ್ದ ಅಂಶುಮಾನ್ ಗಾಯಕ್ವಾಡ್ ದಿವಂಗತ ದತ್ತಾಜಿರಾವ್ ಗಾಯಕ್ವಾಡ್ ಅವರ ಪುತ್ರ. ಭಾರತಕ್ಕಾಗಿ ಅಂಶುಮನ್​​​​​​​ 40 ಟೆಸ್ಟ್‌ಗಳಲ್ಲಿ ಆಡಿದ್ದು, ಒಟ್ಟು 1985 ರನ್​​ ಗಳಿಸಿದ್ದರು. 15 ODI ಪಂದ್ಯಗಳಲ್ಲಿ 269 ರನ್​ ಗಳಿಸಿದ್ದರು. 269 ಪಸ್ಟ್​ ಕ್ಲಾಸ್​ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12,136 ರನ್​ ಬಾರಿಸಿದ್ದರು. 225 ಅವರ ಅತ್ಯಧಿಕ ಸ್ಕೋರ್.

ಗಾಯಕ್ವಾಡ್ ಭಾರತ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತು ನವದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್‌ನಲ್ಲಿ ಸ್ಟಾರ್ ಸ್ಪಿನ್ನರ್ 10 ವಿಕೆಟ್ ಪಡೆದಾಗ, ಗಾಯಕ್ವಾಡ್ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದರು. ಮಾಜಿ ಬ್ಯಾಟರ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಮಾಜಿ ಮಹಿಳಾ ಕ್ರಿಕೆಟಿಗ ಶಾಂತಾ ರಂಗಸ್ವಾಮಿ ಅವರೊಂದಿಗೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಣೆ ಮಾಡಿದ್ದರು.

ಬಿಸಿಸಿಐ'ಯಿಂದ 1 ಕೋಟಿ ನೆರವು: ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಸೇರಿದಂತೆ ಅವರ ಮಾಜಿ ಸಹ ಆಟಗಾರರು ಅಂಶುಮನ್ ಗಾಯಕ್ವಾಡ್ ಅವರಿಗೆ ಆರ್ಥಿಕ ನೆರವು ನೀಡುವಂತೆ ಮಂಡಳಿಗೆ ಮನವಿ ಮಾಡಿದ್ದರು, ನಂತರ ಬಿಸಿಸಿಐ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿತ್ತು. ಕ್ರಿಕೆಟ್ ಸಮುದಾಯದಲ್ಲಿ ಗೌರವಾನ್ವಿತರಾಗಿದ್ದ ಗಾಯಕ್ವಾಡ್ ಅವರಿಗೆ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ.

ತರಬೇತುದಾರನಾಗಿ ಅಂಶುಮನ್ ಜೀವನ: 1982ರಲ್ಲಿ ಕ್ರಿಕೆಟ್​​ಗೆ ನಿವೃತ್ತಿ ಹೊಂದಿದ ನಂತರ, ಗಾಯಕ್ವಾಡ್ ಅವರು 1997 ರಿಂದ 1999 ರವರೆಗೆ ಮತ್ತು 2000 ರಿಂದ 2001 ರವರೆಗೆ ಎರಡು ಅವಧಿಗೆ ಭಾರತೀಯ ತಂಡವನ್ನು ಮುನ್ನಡೆಸಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತವು 2000 ಚಾಂಪಿಯನ್ಸ್ ಟ್ರೋಫಿ ರನ್ನರ್ - ಅಪ್ ಆಗಿ ಹೊರಹೊಮ್ಮಿತ್ತು. 1990ರ ದಶಕದಲ್ಲಿ, ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷ ಮತ್ತು ರಾಷ್ಟ್ರೀಯ ಆಯ್ಕೆಗಾರ ಸ್ಥಾನಗಳನ್ನು ಸಹ ಪಡೆದಿದ್ದರು. 2018 ರಲ್ಲಿ, ಬಿಸಿಸಿಐ ಅಂಶುಮನ್ ಅವರ ಸಾಧನೆ ಗುರುತಿಸಿ 'ಕರ್ನಲ್ ಸಿ ಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತ್ತು.

ಇದನ್ನೂ ಓದಿ: IPLನಲ್ಲಿ ಮೆಗಾ ಹರಾಜು, ಇಂಪ್ಯಾಕ್ಟ್​ ಪ್ಲೇಯರ್ ನಿಯಮ ಬೇಕಾ, ಬೇಡ್ವಾ?: BCCI ಸಭೆಯಲ್ಲಿ ಫ್ರಾಂಚೈಸಿಗಳ ಬಿಸಿ-ಬಿಸಿ ಚರ್ಚೆ - BCCI Meeting on IPL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.