ಪ್ಯಾರಿಸ್(ಫ್ರಾನ್ಸ್): ಗ್ರೇಟ್ ಬ್ರಿಟನ್‌ನ ಹೆನ್ರಿ ಫೀಲ್ಡ್‌ಮ್ಯಾನ್ ಅವರು ರೋಯಿಂಗ್ನ ಕಾಕ್ಸ್‌ವೈನ್ ( ರೋಯಿಂಗ್ ಮಾರ್ಗದರ್ಶಕ) ಆಗಿ ಪುರುಷ ಮತ್ತು ಮಹಿಳೆ ಎರಡೂ ವಿಭಾಗಗಳಲ್ಲಿ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಗ್ರೇಟ್ ಬ್ರಿಟನ್ ಮಹಿಳೆ ಮತ್ತು ಪುರುಷರ 8 ಸದಸ್ಯರ ರೋಯಿಂಗ್ ತಂಡದ ಮಾರ್ಗದರ್ಶಕರಾಗಿದ್ದರು. ಹೆನ್ರಿ ಮಾರ್ಗದರ್ಶನದಲ್ಲಿ ಎರಡೂ ತಂಡಗಳು ಕಂಚು ಪದಕ ಗೆದ್ದುಕೊಂಡಿವೆ.
ಫೀಲ್ಡ್‌ಮ್ಯಾನ್ 3 ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು ಎಂಬುದು ಗಮನಾರ್ಹ. 2016ರ ಒಲಿಂಪಿಕ್ಸ್ ನಂತರ ವರ್ಲ್ಡ್ ರೋಯಿಂಗ್ ನಿಯಮ ಬದಲಾವಣೆ ಬ್ರಿಟಿಷ್ ಅಥ್ಲೀಟ್‌ಗೆ ಈ ದಾಖಲೆ ಬರೆಯಲು ಸಾಧ್ಯವಾಗಿಸಿದೆ. ಹೊಸ ನಿಯಮದ ಪ್ರಕಾರ, ರೋಯಿಂಗ್ ಮಾರ್ಗದರ್ಶಕ ಮಹಿಳಾ ಮತ್ತು ಪುರುಷ ಸ್ಪರ್ಧೆಯ ಎರಡೂ ತಂಡಗಳಲ್ಲಿ ಭಾಗವಹಿಸಬಹುದು.
ರೋಯಿಂಗ್ನ ಗುಂಪು ಸ್ಪರ್ಧೆಯಲ್ಲಿ ಕಾಕ್ಸ್‌ವೈನ್ (ಮಾರ್ಗದರ್ಶಕ)ನನ್ನು ದೋಣಿಯ ಹಿಂಭಾಗದಲ್ಲಿ ಕೂರಿಸಲಾಗುತ್ತದೆ. ತಮ್ಮ ತಂಡದವರಿಗೆ ಮಾರ್ಗದರ್ಶನ ಮಾಡುವುದು ಮತ್ತು ರೋವರ್‌ಗಳ ಶಕ್ತಿ ಮತ್ತು ಲಯ ಸಂಯೋಜಿಸುವುದು ಹಾಗು ಸ್ಟೀರಿಂಗ್ ಮಾಡುವುದು ಆತನ ಕೆಲಸ.
ಹೆನ್ರಿ ಒಲಿಂಪಿಕ್ಸ್ ಸಾಧನೆಗಳ ಹೊರತಾಗಿ, ಕಾಕ್ಸ್‌ವೈನ್ ಕನ್ಸಲ್ಟೆನ್ಸಿ ಎಂಬ ಸ್ವಂತ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಕಾಕ್ಸ್ವೈನ್ಗಳಿಗೆ ತರಬೇತಿ ನೀಡುತ್ತಾರೆ.
ಇದನ್ನೂ ಓದಿ: ಸೆಮಿಫೈನಲ್‌ಗೂ ಮುನ್ನ ಭಾರತ ಹಾಕಿ ತಂಡಕ್ಕೆ ಆಘಾತ: ಅಮಿತ್ ರೋಹಿದಾಸ್ ನಿಷೇಧ! - Paris olympics 2024