ETV Bharat / sports

'ಕೈ ಮುರಿದರೂ ಹಾಕಿ ಬಿಡಲಿಲ್ಲ': ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಯೆಂಡಾಲ ಸೌಂದರ್ಯ - ಯೆಂಡಾಲ ಸೌಂದರ್ಯ

ರಾಷ್ಟ್ರೀಯ ಹಾಕಿ ತಂಡದ ಮುಖ್ಯ ಕೋಚ್ ಯೆಂಡಾಲ ಸೌಂದರ್ಯ ಅವರು ತಮ್ಮ ಈವರೆಗಿನ ಕ್ರೀಡಾ ಹಾದಿಯ ಕುರಿತು 'ಈಟಿವಿ ಭಾರತ'ದ ಜೊತೆಗೆ ಮನದಾಳ ಮಾತುಗಳನ್ನು ಹಂಚಿಕೊಂಡಿದ್ದಾರೆ.

Yendala Soundarya  national hockey team coach  hockey  ಈಟಿವಿ ಭಾರತ  ಯೆಂಡಾಲ ಸೌಂದರ್ಯ  ರಾಷ್ಟ್ರೀಯ ಹಾಕಿ ತಂಡದ ಮುಖ್ಯ ಕೋಚ್
ಕೈ ಮುರಿದರೂ ಹಾಕಿ ಬಿಡಲಿಲ್ಲ: ರಾಷ್ಟ್ರೀಯ ಹಾಕಿ ತಂಡದ ಮುಖ್ಯ ಕೋಚ್ ಯೆಂಡಾಲ ಸೌಂದರ್ಯ ಮನದಾಳದ ಮಾತು...
author img

By ETV Bharat Karnataka Team

Published : Feb 2, 2024, 7:23 AM IST

ನಿಜಾಮಾಬಾದ್: ಹತ್ತು ಜನ ತಂಡದಲ್ಲಿದ್ದರೆ ಎಲ್ಲರೂ ಒಂದೇ ರೀತಿ ಇರಬಾರದು. ವಿಭಿನ್ನ ಸಂಪ್ರದಾಯ, ವಿಭಿನ್ನ ಸಂಸ್ಕೃತಿ, ಸಾಮರ್ಥ್ಯ, ದೌರ್ಬಲ್ಯಗಳೆಲ್ಲವನ್ನೂ ಒಟ್ಟುಗೂಡಿಸಿ ದೇಶಕ್ಕೆ ಯಶಸ್ಸು ತಂದುಕೊಡುವುದು ತರಬೇತುದಾರನ ಜವಾಬ್ದಾರಿ. ತೆಲುಗು ಮೂಲದ ಯೆಂಡಾಲ ಸೌಂದರ್ಯ ಅವರು ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಕೋಚ್ ಆಗಿ ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

''ಹಾಕಿ ಈಗ ಮನ್ನಣೆ ಪಡೆಯುತ್ತಿದೆ. ನಾನು ಆಟಕ್ಕೆ ಪ್ರವೇಶಿಸಿದಾಗ ಹುಡುಗಿಯರಿಗೆ ನಿಜವಾದ ಪ್ರೋತ್ಸಾಹ ಇರಲಿಲ್ಲ. ನಮ್ಮ ಮನೆಯಲ್ಲೂ ಕೂಡ ಅದೇ ಪರಿಸ್ಥಿತಿ ಇತ್ತು. ನನ್ನ ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಅಮ್ಮ ಬೀಡಿ ಕಟ್ಟುತ್ತಿದ್ದರು. ಈ ಕೆಲಸಗಳ ಮೂಲಕ ನಮ್ಮ ಮನೆ ಪರಿಸ್ಥಿತಿಯೂ ಅಷ್ಟಕ್ಕಷ್ಟೇ ಇತ್ತು. ಮೂರು ಮಕ್ಕಳಲ್ಲಿ ನಾನೇ ಹಿರಿಯಳು. ನಮ್ಮ ಊರು ನಿಜಾಮಾಬಾದ್‌ನ ಎಲ್ಲಮ್ಮಗುಟ್ಟ. ಶಾಲೆಯಲ್ಲಿ ಹಾಕಿ ಆಡುವುದನ್ನು ನಾನು ಇಷ್ಟಪಡುತ್ತಿದ್ದುದನ್ನು ಗಮನಿಸಿದ ತರಬೇತುದಾರರು ನನ್ನಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿದರು. ನನ್ನಲ್ಲಿರುವ ಹಾಕಿ ಕ್ರೀಡೆಯನ್ನು ಎಚ್ಚರಗೊಳ್ಳಲು ಪ್ರೇರೇಣೆ ನೀಡಿದರು".

"ಆದರೆ, ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾದರೆ ಉತ್ತಮ ಪೋಷಕಾಂಶಯುಕ್ತ ಆಹಾರ ಮತ್ತು ಶೂ ಸೇರಿದಂತೆ ಕ್ರೀಡಾ ಸಾಮಗ್ರಿ ಖರೀದಿಸಲು ಸಾಕಷ್ಟು ವೆಚ್ಚವಾಗುತ್ತದೆ. ಅದಕ್ಕಾಗಿಯೇ ಪೋಷಕರಿಗೂ ಈ ಆಟದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ನನ್ನ ಉತ್ಸಾಹವನ್ನು ಅಜ್ಜ ಪ್ರೋತ್ಸಾಹಿಸಿದರು. ಆಗಾಗ ಹಣ ಕೊಟ್ಟು ಸಹಾಯ ಮಾಡುತ್ತಿದ್ದರು. ಇದರಿಂದ ನನ್ನಲ್ಲಿರುವ ಹಾಕಿ ಕ್ರೀಡೆಗೆ ಚೈತನ್ಯ ಲಭಿಸಿತು".

''ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ(ಎಸ್‌ಎಐ) ಸ್ಥಾನ ಪಡೆದ ನಂತರ, ನನ್ನ ಕಷ್ಟಗಳಿಗೆ ಸ್ವಲ್ಪ ಪರಿಹಾರ ಸಿಕ್ಕಿತು. ಕೋಚ್​ಗಳ ಪ್ರೋತ್ಸಾಹದಿಂದ ಆಟದತ್ತ ಹೆಚ್ಚು ಗಮನ ಹರಿಸಿದೆ. 2006ರಲ್ಲಿ ರಾಜ್ಯ ತಂಡ ಮುನ್ನಡೆಸುವ ಅವಕಾಶ ಸಿಕ್ಕಿತು. ಅಲ್ಲಿ ಕಷ್ಟಪಟ್ಟು ಆಟವಾಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ. ಇದುವರೆಗೂ ತೆಲುಗು ರಾಜ್ಯಗಳಿಂದ ಯಾರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ. ಅದು ನನ್ನ ಮೊದಲ ಗೆಲುವು. ನನ್ನನ್ನು ನೋಡಿ ನನ್ನ ಚಿಕ್ಕಣ್ಣ ಸಾಗರ್ ಕೂಡ ಹಾಕಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ಪ್ರಸ್ತುತ ಜಿಲ್ಲಾ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ''.

100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಸೌಂದರ್ಯ: ''ರಾಷ್ಟ್ರೀಯ ತಂಡದಲ್ಲಿ ಮಿಂಚುವುದು ಸುಲಭವಲ್ಲ. ಅಲ್ಲಿ ಹಲವು ಸವಾಲುಗಳಿವೆ. ಉತ್ತರ ಭಾರತದ ಹುಡುಗಿಯರು ಮೇಲುಗೈ ಸಾಧಿಸುತ್ತಿದ್ದರು. ಮೊದಮೊದಲು ನನಗೆ ಹಿಂದಿ ಬರದ ಕಾರಣ ಹಲವು ಕಷ್ಟಗಳನ್ನು ಎದುರಿಸಿದ್ದೆ. ನಾನು ತಂಡದಲ್ಲಿದ್ದರೂ ಮೈದಾನಕ್ಕಿಳಿಯಲು ಅವಕಾಶ ಸಿಗಲಿಲ್ಲ. ಪ್ರಮುಖ ಆಟಗಾರರು ಗಾಯಗೊಂಡಾಗ ಮಾತ್ರ ನನಗೆ ಅವಕಾಶ ಲಭಿಸುತ್ತಿತ್ತು. ಅಂತಹ ಅವಕಾಶ ಬಂದಾಗ ನನ್ನ ಪ್ರತಿಭೆಯನ್ನು ತೋರಿಸುತ್ತಿದ್ದೆ. ಹಾಗಾಗಿ ನನ್ನಲ್ಲಿರುವ ಪ್ರತಿಭೆಯಿಂದ ತಂಡದ ಪ್ರಮುಖ ಸದಸ್ಯಳಾದೆ. ಆಟದ ಸಮಯದಲ್ಲಿ ನನ್ನ ತೋಳಿನ ಮೂಳೆ ಮುರಿದಿದ್ದರಿಂದ ಎರಡು ವರ್ಷಗಳ ಕಾಲ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆ ವೇಳೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹಿಂತಿರುಗಿ ಬಂದು ನನ್ನನ್ನು ನಾನು ಸಾಬೀತುಪಡಿಸಿಕೊಂಡು, ಉಪನಾಯಕ ಹಾಗೂ ನಾಯಕನ ಜವಾಬ್ದಾರಿ ನಿಭಾಯಿಸಿದೆ. ಒಲಿಂಪಿಕ್ಸ್ ಸೇರಿದಂತೆ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಪ್ರತಿನಿಧಿಸಿದೆ.''

ತಂಡದ ಮುಖ್ಯ ಕೋಚ್ ಆಗಿ ಆಯ್ಕೆ: ''2006ರಿಂದ 2016ರವರೆಗೆ ಹತ್ತು ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದೆ. ಬಳಿಕ ಕೋಚ್ ಆಗಿ ನೆಲೆ ನಿಲ್ಲುವ ಆಸೆಯಿಂದ 2022ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆಟಗಾರನಾಗಿ ಹತ್ತು ವರ್ಷಗಳ ಅನುಭವದ ನಂತರ ನನಗೆ ರಾಷ್ಟ್ರೀಯ ತಂಡಕ್ಕೆ ಸಹಾಯಕ ಕೋಚ್ ಆಗಲು ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ನಾವು ವಿದೇಶಿ ಕೋಚ್ ಹೊಂದಿದ್ದೇವೆ. ನಾನು ಸಹಾಯಕ ತರಬೇತುದಾರನಾಗಿ ಕೆಲಸ ಮಾಡಿದ್ದೇನೆ ಮತ್ತು ಇತ್ತೀಚೆಗೆ ಒಮಾನ್‌ನಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ನಮ್ಮ ದೇಶದ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದೇನೆ.''

ಮಣ್ಣಿನಿಂದ ಮಾಣಿಕ್ಯ ಹೊರತೆಗೆಯುವುದು ನನ್ನ ಕನಸು: ''ತೆಲುಗು ರಾಜ್ಯಗಳಿಂದ ಮೊದಲ ಬಾರಿಗೆ ಈ ಸ್ಥಾನಮಾನ ಮತ್ತು ಅವಕಾಶ ಸಿಕ್ಕಿರುವುದು ನನಗೆ ಖುಷಿ ತಂದಿದೆ. 2009ರಲ್ಲಿ ರೈಲ್ವೆ ಟಿಸಿಯಾಗಿ ಆಯ್ಕೆಯಾದೆ. ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೆ. ಮದುವೆಯ ನಂತರ ಸಿಕಂದರಾಬಾದ್‌ಗೆ ಬಂದೆ. ನನ್ನ ಪತಿ ರಮೇಶ್ ಐಟಿ ಉದ್ಯೋಗಿ. ನಮಗೊಂದು ಮಗುವಿದೆ. ಪೋಷಕರ ಆಲೋಚನಾ ಕ್ರಮದಲ್ಲಿ ಬದಲಾವಣೆಯಾಗಿದೆ. ಇದೀಗ ಹೆಣ್ಣು ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಲಭಿಸುತ್ತಿದೆ. ಮಣ್ಣಿನಿಂದ ಮಾಣಿಕ್ಯಗಳನ್ನು ಹೊರತೆಗೆಯುವುದು ನನ್ನ ಕನಸು'' ಎಂದು ಯೆಂಡಾಲ ಸೌಂದರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಟೀಂ ಇಂಡಿಯಾ ಬ್ಯಾಟರ್​ಗಳು ಉತ್ತಮ ​ಸ್ವೀಪ್ ಶಾಟ್​ಗಳನ್ನು ಆಡಬಲ್ಲರು: ಶ್ರೀಕರ್​ ​ಭರತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.