ETV Bharat / sports

ಟೆಸ್ಟ್​ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ 2ನೇ ಆಟಗಾರ ಆಗ್ತಾರಾ ಜೇಮ್ಸ್​ ಆ್ಯಂಡರ್ಸನ್​? - JAMES ANDERSON - JAMES ANDERSON

ಇಂಗ್ಲೆಂಡ್​ನ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್​ಸನ್​ ಕ್ರಿಕೆಟ್​​ಗೆ ವಿದಾಯ ಹೇಳಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯ ಮೊದಲ ಟೆಸ್ಟ್​ ಪಂದ್ಯ ಅವರ ಕೊನೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಲು ಅವರಿಗೆ ಅವಕಾಶವಿದೆ.

ಜೇಮ್ಸ್​ ಆ್ಯಂಡರ್ಸನ್
ಜೇಮ್ಸ್​ ಆ್ಯಂಡರ್ಸನ್ (AP Photos)
author img

By ETV Bharat Karnataka Team

Published : Jul 9, 2024, 6:22 PM IST

ಲಂಡನ್ (ಇಂಗ್ಲೆಂಡ್): ಇಂಗ್ಲೆಂಡ್​ ಕ್ರಿಕೆಟ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್​ಸನ್​ ವೃತ್ತಿಜೀವನದ ಕೊನೆಯಲ್ಲಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಅವರಿಗೆ ಕೊನೆಯಾಗಲಿದೆ. ಹಿರಿಯ ಆಟಗಾರನಿಗೆ ಗೆಲುವಿನ ವಿದಾಯ ನೀಡಲು ಇಂಗ್ಲೆಂಡ್​ ತಂಡ ಯೋಜಿಸಿದ್ದರೆ, ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದಲ್ಲಿ ಮಹತ್ತರ ದಾಖಲೆ ಮಾಡುವ ಅವಕಾಶವೂ ಜೇಮ್ಸ್​ಗಿದೆ.

ಜುಲೈ 10 ರಿಂದ 3 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದೆ. ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಮೊದಲ ಪಂದ್ಯ ಜುಲೈ 10 ರಿಂದ 14 ರವರೆಗೆ ನಡೆಯಲಿದ್ದು, ಈ ಪಂದ್ಯದಲ್ಲಿ ಜೇಮ್ಸ್​ 9 ವಿಕೆಟ್​ ಉರುಳಿಸಿದಲ್ಲಿ ಟೆಸ್ಟ್​ ಕ್ರಿಕೆಟ್​​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಕಬಳಿಸಿದ ವಿಶ್ವದ ಮೊದಲ ವೇಗಿ ಮತ್ತು ಎರಡನೇ ಬೌಲರ್​ ಎನಿಸಿಕೊಳ್ಳಲಿದ್ದಾರೆ.

ಹೌದು, ಜೇಮ್ಸ್​ ಆ್ಯಂಡರ್​ಸನ್​​ ಈಗಾಗಲೇ ಟೆಸ್ಟ್​​ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್​ ಪಡೆದ 3ನೇ ಬೌಲರ್​ ಎನಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಮೆಟ್ಟಿಲು ಏರುವ ಅವಕಾಶವಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಹೆಚ್ಚಿನ ಮಹತ್ವವಿದೆ. ಜೇಮ್ಸ್ ಆಂಡರ್ಸನ್ ಅವರು ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ.

ಅಗ್ರ 2 ನೇ ಸ್ಥಾನಕ್ಕೇರುತ್ತಾರಾ ಜೇಮ್ಸ್​?: ವಿಂಡೀಸ್​ ವಿರುದ್ಧದ ಮೊದಲ ಪಂದ್ಯ ಜೇಮ್ಸ್​​ರ ಕೊನೆಯ ಪಂದ್ಯವಾಗಿರುವ ಕಾರಣ, 41ರ ಪ್ರಾಯದ ಆಟಗಾರನಿಗೆ ಪಂದ್ಯದಲ್ಲಿ ವಿಶಿಷ್ಟ ದಾಖಲೆಗಳನ್ನು ಮುರಿಯುವ ಅವಕಾಶವಿದೆ. ಇದು ಸಾಧ್ಯವಾದಲ್ಲಿ ವಿದಾಯದ ಪಂದ್ಯ ಅವಿಸ್ಮರಣೀಯವಾಗಲಿದೆ.

ಸದ್ಯ, ಆ್ಯಂಡರ್ಸನ್ 187 ಟೆಸ್ಟ್ ಪಂದ್ಯಗಳಿಂದ ಭರ್ತಿ 700 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್​ ಮಾಂತ್ರಿಕ ಶೇನ್​ವಾರ್ನ್​ 145 ಪಂದ್ಯಗಳಿಂದ 708 ವಿಕೆಟ್ ಪಡೆದಿದ್ದಾರೆ. ಅಂದರೆ, ಆ್ಯಂಡರ್​ಸನ್​ಗೆ ಈ ದಾಖಲೆ ಅಳಿಸಿ ಹಾಕಲು ಒಂಬತ್ತು ವಿಕೆಟ್‌ ಬೇಕು. ಇಷ್ಟು ವಿಕೆಟ್​ ಉರುಳಿಸಿದಲ್ಲಿ ಅವರು, ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಮೂಲಕ ಸ್ಮರಣೀಯ ವಿದಾಯ ಹೇಳಲಿದ್ದಾರೆ.

ಹಲವು ದಾಖಲೆಗಳು: ಇಂಗ್ಲೆಂಡ್​ನ ಬಲಗೈ ವೇಗಿ ಜೇಮ್ಸ್​, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 987 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್​​ನಲ್ಲಿ ಅತಿ ಯಶಸ್ವಿ ಬೌಲರ್​ ಆಗಿರುವ ಅವರು 700 ವಿಕೆಟ್​ ಸಾಧನೆ ಮಾಡಿದ್ದರೆ, ಏಕದಿನದಲ್ಲಿ 269 ವಿಕೆಟ್‌, ಟಿ20ಯಲ್ಲಿ 18 ಜನರನ್ನು ಪೆವಿಲಿಯನ್​ಗೆ ಕಳುಹಿಸಿದ್ದಾರೆ. ಹೀಗಾಗಿ ಕ್ರಿಕೆಟ್​​ನಲ್ಲಿ 1 ಸಾವಿರ ವಿಕೆಟ್​ ಸಾಧನೆ ಮಾಡಿದ ಮೂರನೇ ಬೌಲರ್​ ಎನಿಸಿಕೊಳ್ಳಲು ಇನ್ನೂ 13 ವಿಕೆಟ್​ ಬೇಕಿದೆ. ಇದು ಕಷ್ಟವೇ ಆದರೂ, ಕೊನೆಯ ಅವಕಾಶವಿದೆ. ಶ್ರೀಲಂಕಾದ ಸ್ಪಿನ್​​ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 1,347 ಅಂತಾರಾಷ್ಟ್ರೀಯ ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶೇನ್ ವಾರ್ನ್ 1001 ವಿಕೆಟ್​ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಆ್ಯಂಡರ್​​ಸನ್ ತಮ್ಮ ಕೊನೆಯ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದರೆ, ವೃತ್ತಿಜೀವನದಲ್ಲಿ 35 ಬಾರಿ ಈ ಸಾಧನೆ ಮಾಡಿದ ವಿಶ್ವದ ಜಂಟಿ ಆರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಸ್ ಮತ್ತು ಶ್ರೀಲಂಕಾ ಸ್ಪಿನ್ನರ್ ರಂಗನಾ ಹೆರಾತ್ 35 ಬಾರಿ ಐದು ವಿಕೆಟ್‌ಗಳನ್ನು ಪಡೆದಿರುವ ಬೌಲರ್​ಗಳಾಗಿದ್ದಾರೆ.

ಇದನ್ನೂ ಓದಿ: ಸೊನ್ನೆಗೆ ಔಟಾದಾಗ ನಕ್ಕಿದ್ದ ಯುವರಾಜ್​ ಸಿಂಗ್​: ಶತಕವೀರ ಅಭಿಷೇಕ್​ ಶರ್ಮಾ ಹೀಗೆ ಹೇಳಿದ್ಯಾಕೆ? - ABHISHEK SHARMA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.