ನವದೆಹಲಿ: 2024ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ(ಡಬ್ಲ್ಯೂಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸ್ಟಾರ್ ಆಲ್‌ರೌಂಡರ್ ಹೀದರ್ ನೈಟ್ ಹೊರನಡೆದಿದ್ದಾರೆ. ಈ ಬಗ್ಗೆ ಹೀದರ್ ನೈಟ್ ಯಾವುದೇ ಸೂಕ್ತ ಕಾರಣ ನೀಡಿಲ್ಲ. ಬದಲಿ ಆಟಗಾರ್ತಿಯಾಗಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲರ್ಕ್ ಅವರನ್ನು ಕರೆತಂದಿರುವ ಬಗ್ಗೆ ಆರ್ಸಿಬಿ ತಿಳಿಸಿದೆ.
ಭಾರತದಲ್ಲಿ ಫೆಬ್ರವರಿ 23ರಿಂದ ಮಾರ್ಚ್ 17ವರೆಗೆ ಡಬ್ಲ್ಯೂಪಿಎಲ್ನ ಎರಡನೇ ಆವೃತ್ತಿ ನಡೆಯಲಿದೆ. ಈ ಆವೃತ್ತಿಯಲ್ಲಿ ನೈಟ್, ಆರ್ಸಿಬಿ ತಂಡ ಪ್ರತಿನಿಧಿಸಬೇಕಿತ್ತು. ಆದರೆ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಇಂಗ್ಲೆಂಡ್ ತಂಡದ ನಾಯಕಿ ನೈಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾರ್ಚ್ 19ರಿಂದ ಏಪ್ರಿಲ್ 7ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
-
Sad to announce I’m withdrawing from the @wplt20 this year, but it’s the right thing for me to be available for the whole England tour of NZ. All the best @RCBTweets and @mandhana_smriti for the coming season 👊🏼 pic.twitter.com/5wW7GEhydp
— Heather Knight (@Heatherknight55) January 27, 2024 " class="align-text-top noRightClick twitterSection" data="
">Sad to announce I’m withdrawing from the @wplt20 this year, but it’s the right thing for me to be available for the whole England tour of NZ. All the best @RCBTweets and @mandhana_smriti for the coming season 👊🏼 pic.twitter.com/5wW7GEhydp
— Heather Knight (@Heatherknight55) January 27, 2024Sad to announce I’m withdrawing from the @wplt20 this year, but it’s the right thing for me to be available for the whole England tour of NZ. All the best @RCBTweets and @mandhana_smriti for the coming season 👊🏼 pic.twitter.com/5wW7GEhydp
— Heather Knight (@Heatherknight55) January 27, 2024
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಬರೆದುಕೊಂಡಿರುವ ನೈಟ್, 'ನಾನು ಈ ವರ್ಷ ಡಬ್ಲ್ಯೂಪಿಎಲ್ನಿಂದ ಹೊರಗುಳಿಯುತ್ತಿರುವ ವಿಷಯವನ್ನು ತಿಳಿಸಲು ದುಃಖವಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಹೋಗುವುದು ನನಗೆ ಸರಿಯಾದ ವಿಷಯ ಎನ್ನಿಸುತ್ತದೆ. ಒಳ್ಳೆಯದಾಗಲಿ ಆರ್ಸಿಬಿ ಮತ್ತು ನಾಯಕಿ ಸ್ಮೃತಿ ಮಂಧಾನ' ಎಂದಿದ್ದಾರೆ.
ಆರ್ಸಿಬಿ ಆಯ್ಕೆ ಮಾಡಿರುವ ಬದಲಿ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಅವರು ಡಬ್ಲ್ಯೂಪಿಎಲ್ನ ಎರಡನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಮಧ್ಯಮ ವೇಗದ ಬೌಲಿಂಗ್ ಮತ್ತು ಬಲಗೈ ಬ್ಯಾಟರ್ ಡಿ ಕ್ಲರ್ಕ್ 30 ಏಕದಿನ ಮತ್ತು 46 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ.
ಮೂಲಗಳ ಪ್ರಕಾರ, ಡಬ್ಲ್ಯೂಪಿಎಲ್‌ನಲ್ಲಿ ಆಡುವ ಇಂಗ್ಲೆಂಡ್ ಆಟಗಾರ್ತಿಯರು ಲೀಗ್ ಮುಗಿಯುವವರೆಗೂ ಭಾರತದಲ್ಲಿದ್ದರೆ, ನ್ಯೂಜಿಲೆಂಡ್ ವಿರುದ್ಧ ನಡೆಯುವ ಮೊದಲ ಮೂರು ಟಿ20 ಪಂದ್ಯಗಳಿಗೆ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಮುಂದಿನ ವಾರ ಮಹಿಳಾ ಇಂಗ್ಲೆಂಡ್ ತಂಡವನ್ನು ಇಸಿಬಿ ಪ್ರಕಟಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Ind vs Eng 1st Test: 420ಕ್ಕೆ ಇಂಗ್ಲೆಂಡ್ ಆಲೌಟ್; ಭಾರತದ ಗೆಲುವಿಗೆ ಬೇಕು 231 ರನ್