ETV Bharat / sports

ಮಹಿಳಾ ಪ್ರೀಮಿಯರ್ ಲೀಗ್‌: ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಡಿಪಿ ವರ್ಲ್ಡ್ ಟೈಟಲ್ ಸ್ಪಾನ್ಸರ್​​ಶಿಪ್ - Womens Premier League

ಮಹಿಳಾ ಪ್ರೀಮಿಯರ್ ಲೀಗ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್ ಸ್ಪಾನ್ಸರ್​​ಶಿಪ್​ ಘೋಷಣೆ ಮಾಡಿದೆ.

dp-world-announces-title-sponsorship-with-delhi-capitals-womens-team
ಮಹಿಳಾ ಪ್ರೀಮಿಯರ್ ಲೀಗ್‌: ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಡಿಪಿ ವರ್ಲ್ಡ್ ಟೈಟಲ್ ಸ್ಪಾನ್ಸರ್​​ಶಿಪ್
author img

By ETV Bharat Karnataka Team

Published : Feb 16, 2024, 9:59 PM IST

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡಿಪಿ ವರ್ಲ್ಡ್ ದೀರ್ಘಾವಧಿಯ ಟೈಟಲ್ ಸ್ಪಾನ್ಸರ್​​ಶಿಪ್​ ಘೋಷಿಸಿದೆ. ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಪೂರೈಕೆ ಚೈನ್ ಸೊಲ್ಯೂಷನ್ ಪೂರೈಕೆದಾರರಾದ ಡಿಪಿ ವರ್ಲ್ಡ್ 2024 ರಿಂದ ದೆಹಲಿ ಕ್ಯಾಪಿಟಲ್ಸ್‌ನ ಮಹಿಳಾ ತಂಡದ ಶೀರ್ಷಿಕೆ ಪಾಲುದಾರಿಕೆ ಹೊಂದಿದೆ. ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಡೆಲ್ಲಿ ಫ್ರ್ಯಾಂಚೈಸಿಯೊಂದಿಗೆ ತನ್ನ ಪಾಲುದಾರಿಕೆ ಬಗ್ಗೆ ಡಿಪಿ ವರ್ಲ್ಡ್ ಘೋಷಣೆ ಮಾಡಿದೆ.

dp-world-announces-title-sponsorship-with-delhi-capitals
ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಡಿಪಿ ವರ್ಲ್ಡ್ ಟೈಟಲ್ ಸ್ಪಾನ್ಸರ್​​ಶಿಪ್

ಭಾರತದಲ್ಲಿ ಕ್ರಿಕೆಟ್​​​ನ್ನು ಪೋಷಣೆ ಮತ್ತು ಉನ್ನತೀಕರಿಸಲು ವ್ಯಾಪಕ ಪ್ರಯತ್ನ ಹಾಗೂ ಕ್ರಮ ಕೈಗೊಳ್ಳಲಾಗಿದೆ. ಈ ಪಾಲುದಾರಿಕೆ ಮೂಲಕ ನಾವು ಕ್ರಿಕೆಟ್‌ನಲ್ಲಿ ಪ್ರತಿಭಾನ್ವೇಷಣೆಯನ್ನು ಮತ್ತಷ್ಟು ವಿಸ್ತರಿಸಲು ಹೂಡಿಕೆ ಮಾಡಲಾಗುತ್ತಿದೆ. ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್ ಪುರುಷರ ತಂಡದ ಜಾಗತಿಕ ಲಾಜಿಸ್ಟಿಕ್ಸ್ ಪಾಲುದಾರರಾಗಿದ್ದು, ಈಗ ಮಹಿಳಾ ತಂಡಕ್ಕೆ ಟೈಟಲ್ ಸ್ಪಾನ್ಸರ್​​ಶಿಪ್ ವಿಸ್ತರಿಸಲು ಹೆಮ್ಮೆಪಡುತ್ತೇವೆ ಎಂದು ಡಿಪಿ ವರ್ಲ್ಡ್ ತಿಳಿಸಿದೆ.

ಈ ಸಂದರ್ಭದಲ್ಲಿ ಡಿಪಿ ವರ್ಲ್ಡ್ ಸಬ್‌ಕಾಂಟಿನೆಂಟ್‌ನ ಲಾಜಿಸ್ಟಿಕ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿನಾಥ್ ಮಾತನಾಡಿ, "ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯನ್ನು ಅವರ ಮಹಿಳಾ ತಂಡಕ್ಕೆ ಟೈಟಲ್ ಸ್ಪಾನ್ಸರ್ ಆಗಿ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್​​ ಸಾಕಷ್ಟು ಪರಿವರ್ತನೆ ಹೊಂದಿದೆ. ಕ್ರಿಕೆಟ್ ಹಿಂದೆಂದಿಗಿಂತಲೂ ಹೆಚ್ಚು ಆಟಗಾರರು ಮತ್ತು ಅಭಿಮಾನಿಗಳನ್ನು ತಲುಪಿದೆ'' ಎಂದರು.

ಇದನ್ನೂ ಓದಿ: ಗುಜರಾತ್ ಜೈಂಟ್ಸ್ ‌ನಾಯಕಿಯಾಗಿ ಬೆತ್ ಮೂನಿ, ಉಪನಾಯಕಿಯಾಗಿ ಸ್ನೇಹ್ ರಾಣಾ ನೇಮಕ

''ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಆಕರ್ಷಕ ಆಟಗಾರರನ್ನು ಹೊಂದಿದ್ದು, ನಾವು ಕ್ರಿಕೆಟ್ ಮತ್ತು ಜಾಗತಿಕ ವ್ಯಾಪಾರ ಎರಡನ್ನೂ ಕ್ರಾಂತಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಡಿಪಿ ವರ್ಲ್ಡ್ 75 ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿರುವ ತನ್ನ ವಿಶ್ವದರ್ಜೆಯ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಸಾಮರ್ಥ್ಯಗಳ ಮೂಲಕ, ಭಾರತ ಸೇರಿದಂತೆ ಪ್ರಪಂಚದಾದ್ಯಂತ ವ್ಯಾಪಾರದ ತಡೆರಹಿತ ಚಲನೆಯನ್ನು ಖಚಿತಪಡಿಸುತ್ತದೆ" ಎಂದು ತಿಳಿಸಿದರು.

ಹೊಸ ಪಾಲುದಾರಿಕೆಯ ಕುರಿತು ಮಾತನಾಡಿದ ಡೆಲ್ಲಿ‌ ಕ್ಯಾಪಿಟಲ್ಸ್‌ನ ಮಧ್ಯಂತರ ಕಾರ್ಯನಿರ್ವಾಹಕ ಅಧಿಕಾರಿ ಸುಖ್ವಿಂದರ್ "ನಮ್ಮ ಮಹಿಳಾ ತಂಡದ ಟೈಟಲ್ ಸ್ಪಾನ್ಸರ್ ಆಗಿ ಡಿಪಿ ವರ್ಲ್ಡ್ ಅನ್ನು ಹೊಂದಿರುವುದಕ್ಕೆ ಉತ್ಸುಕರಾಗಿದ್ದೇವೆ. ಮಹಿಳಾ ಕ್ರಿಕೆಟ್ ಕಡೆಗೆ ಡಿಪಿ ವರ್ಲ್ಡ್‌ನ ಬದ್ಧತೆ ಶ್ಲಾಘನೀಯ, ನಮ್ಮ ಐಪಿಎಲ್ ತಂಡದೊಂದಿಗೆ ಯಶಸ್ವಿ ಇನ್ನಿಂಗ್ಸ್‌ನ ಬಳಿಕ ಈ ಸಹಯೋಗ ಮೂಡಿ ಬಂದಿದೆ. ಇದು ಎರಡೂ ತಂಡಗಳಿಗೆ ಒಂದು ಮೈಲಿಗಲ್ಲಿನ ಕ್ಷಣ'' ಎಂದರು.

ಇದನ್ನೂ ಓದಿ: IND Vs ENG 3ನೇ ಟೆಸ್ಟ್: ಬೆನ್ ಡಕೆಟ್​ ಸಿಡಿಲಬ್ಬರದ ಶತಕ; ಇಂಗ್ಲೆಂಡ್ 207/2 ರನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.