ಮೈಸೂರು: ಚೀನಾದ ಚೆಂಗ್ಡುನಲ್ಲಿ ಆಗಸ್ಟ್ 20ರಿಂದ 25ರವರೆಗೆ ನಡೆಯಲಿರುವ 17 ಮತ್ತು 15 ವರ್ಷದೊಳಗಿನ ಏಷ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2024ಕ್ಕೆ ಮೈಸೂರಿನ ಸ್ಪೋರ್ಟ್ಸ್ ಪಾರ್ಕ್‌ನ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ.
ಬಾಲಕಿಯರ ಡಬಲ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ದಿಯಾ ಅವರೊಂದಿಗೆ ಹರಿಯಾಣದ ಬರುಣಿ ಪಾರ್ಶ್ವಾಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೊಡಗು ಜಿಲ್ಲೆಯವರಾದ ದಿಯಾ, ಮೈಸೂರು ಸ್ಪೋರ್ಟ್ಸ್ ಪಾರ್ಕ್ನಲ್ಲಿ ಅರುಣ್ ಪೆಮ್ಮಯ್ಯ ಮತ್ತು ಬಿ.ಪಿ.ಭೀಮಯ್ಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: ಆಡಿದ್ದು 25 ಒಲಿಂಪಿಕ್, ಪದಕ ಮಾತ್ರ 0: ಈ ರಾಷ್ಟ್ರಗಳಿಗೆ ಮೆಡಲ್ ಮರೀಚಿಕೆ! - Paris Olympic 2024