ಚೆನ್ನೈ(ತಮಿಳುನಾಡು): ಧೋನಿ ಅವರನ್ನು ಸೋಲಿಸಲು ನಮ್ಮ ತಂತ್ರಗಾರಿಕೆ ಅತ್ಯುತ್ತಮವಾಗಿರಬೇಕು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹೇಳಿದ್ದಾರೆ. ಇದೇ ವೇಳೆ, ''ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ'' ಎಂದು ಹೊಗಳಿದ್ದಾರೆ.
-
Game recognises game! 🤝@GautamGambhir talks about @MSDhoni's tactical genius, and why he's more determined than ever to win when he comes up against him and @Chennaiipl! 💪
— Star Sports (@StarSportsIndia) April 8, 2024
Will Gambhir + @ShreyasIyer15 triumph tactically over Dhoni + #RuturajGaikwad tonight? 👀
Tune in to… pic.twitter.com/kvxi5vinzC
ಚೆನ್ನೈನಲ್ಲಿ ಇಂದು (ಮಂಗಳವಾರ) ನಡೆಯಲಿರುವ ಸಿಎಸ್‌ಕೆ ಮತ್ತು ಕೆಕೆಆರ್ ಪಂದ್ಯಕ್ಕೂ ಮುನ್ನ ಮಾತನಾಡಿದ ಗೌತಮ್ ಗಂಭೀರ್, ''ನೈಟ್ ರೈಡರ್ಸ್ ನಾಯಕನಾಗಿದ್ದ ದಿನಗಳಲ್ಲಿ ಧೋನಿ ಹಾಗೂ ಸೂಪರ್ ಕಿಂಗ್ಸ್ ತಂಡದೊಂದಿನ ಪೈಪೋಟಿಯನ್ನು ನಾನು ಆನಂದಿಸಿದ್ದೇನೆ'' ಎಂದರು.
"ಐಪಿಎಲ್‌ನಲ್ಲಿ ಆಡುತ್ತಿದ್ದಾಗ ನಾನು ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೆ. ಧೋನಿ ಆಕರ್ಷಕ ಗೇಮ್ ಪ್ಲಾನ್ ಹೊಂದಿದ್ದರು ಎಂದು ನನಗೆ ತಿಳಿದಿತ್ತು. ಅವರು ತಂತ್ರಗಾರಿಕೆಯಲ್ಲಿ ತುಂಬಾ ಉತ್ತಮರು. ಸ್ಪಿನ್ನರ್‌ಗಳನ್ನು ಹೇಗೆ ನಿಯಂತ್ರಿಸಬೇಕು, ಅವರ ವಿರುದ್ಧ ಹೇಗೆ ಪ್ಲಾನ್ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು" ಎಂದು ಅವರು ಹೇಳಿದರು.
ಇದನ್ನೂ ಓದಿ: ಯಶ್, ಪಾಂಡ್ಯ ಮಾರಕ ದಾಳಿಗೆ ನಲುಗಿದ ಗುಜರಾತ್; ಲಖನೌ ವಿರುದ್ಧ 33 ರನ್ ಸೋಲು - LSG beat Gujurat Titans