ETV Bharat / sports

ಟಿ20 ವಿಶ್ವಕಪ್‌: ಸಾಲ್ಟ್​, ಬೈರ್​ಸ್ಟೋ ಅಬ್ಬರ; ವಿಂಡೀಸ್​ ವಿರುದ್ಧ ಇಂಗ್ಲೆಂಡ್​ಗೆ ಅಮೋಘ ಗೆಲುವು - England Defeats West Indies - ENGLAND DEFEATS WEST INDIES

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ - 8 ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಇಂಗ್ಲೆಂಡ್​ ಅಬ್ಬರದ ಜಯ ಗಳಿಸಿದೆ.

England beat West Indies
ವೆಸ್ಟ್ ಇಂಡೀಸ್‌, ಇಂಗ್ಲೆಂಡ್ ತಂಡಗಳು (Photos: AP)
author img

By ANI

Published : Jun 20, 2024, 10:18 AM IST

ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ): ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ - 8 ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಅಮೋಘ 8 ವಿಕೆಟ್​ಗಳ​ ಗೆಲುವು ದಾಖಲಿಸಿದೆ. ಬೃಹತ್​ ಮೊತ್ತ ಬೆನ್ನಟ್ಟಿದ ಆಂಗ್ಲರಿಗೆ ಫಿಲ್​ ಸಾಲ್ಟ್​ ಅಬ್ಬರದ ಅರ್ಧಶತಕ ಸಿಡಿಸಿ ಗೆಲುವನ್ನು ಸುಲಭವಾಗಿಸಿದರು.

ವಿಂಡೀಸ್​ ನೀಡಿದ 181 ರನ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ಫಿಲ್​ ಸಾಲ್ಟ್​ (87) ಹಾಗೂ ನಾಯಕ ಜೋಸ್​ ಬಟ್ಲರ್​ (25) 67 ರನ್​ ಸೇರಿಸಿದರು. ಈ ಹಂತದಲ್ಲಿ ರೋಸ್ಟನ್​ ಚೇಸ್​ ಬೌಲಿಂಗ್​ನಲ್ಲಿ ಬಟ್ಲರ್​ ಎಲ್​ಬಿ ಬಲೆಗೆ ಬಿದ್ದರು. ಬಳಿಕ ಬಂದ ಮೋಯಿನ್​ ಅಲಿ ಎರಡು ಬೌಂಡರಿ ಸಹಿತ 13 ರನ್​ ಬಾರಿಸಿ ರಸೆಲ್​ ಬೌಲಿಂಗ್​ನಲ್ಲಿ ಚಾರ್ಲ್ಸ್​ಗೆ ಕ್ಯಾಚಿತ್ತು ಹೊರನಡೆದರು. 10.1 ಓವರ್​ಗಳಲ್ಲಿ ಇಂಗ್ಲೆಂಡ್​ 84 ರನ್​ಗೆ 2 ವಿಕೆಟ್​ ಕಳೆದುಕೊಂಡಿತ್ತು.

ಇದಾದ ಬಳಿಕ ಒಂದಾದ ಫಿಲ್​ ಸಾಲ್ಟ್​ ಹಾಗೂ ಜಾನಿ ಬೈರ್​​ಸ್ಟೋ ವಿಂಡೀಸ್ ಬೌಲಿಂಗ್​​ ದಾಳಿಯನ್ನು ಧೂಳಿಪಟ ಮಾಡಿದರು. ಮುಂದಿನ 7.2 ಓವರ್​ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಅರ್ಧಶತಕದ ಬಳಿಕ ಅಬ್ಬರಿಸಿದ ಸಾಲ್ಟ್​ 47 ಎಸೆತಗಳಲ್ಲಿ ಅಜೇಯ 87 ರನ್​ ಬಾರಿಸಿದರೆ, ಬೈರ್​ಸ್ಟೋ 26 ಬಾಲ್​ಗೆ 48 ರನ್​ ಚಚ್ಚಿದರು. ಈ ಜೋಡಿ ಅಜೇಯ 97 ರನ್​ ಜೊತೆಯಾಟವಾಡಿ ವಿಂಡೀಸ್​ಗೆ 17.3 ಓವರ್​ಗಳಲ್ಲೇ ಸೋಲುಣಿಸಿತು. ಈ ಜಯದೊಂದಿಗೆ ಹಾಲಿ ಚಾಂಪಿಯನ್ನರು ಸೂಪರ್​-8 ಹಂತದಲ್ಲಿ ಭರ್ಜರಿ ಆರಂಭ ಪಡೆದರು.

ವೆಸ್ಟ್​ ಇಂಡೀಸ್​ ಬ್ಯಾಟಿಂಗ್​: ಇದಕ್ಕೂ ಮುನ್ನ ಟಾಸ್​ ಗೆದ್ದ ಇಂಗ್ಲೆಂಡ್​ ನಾಯಕ ಜೋಸ್ ಬಟ್ಲರ್​ ವಿಂಡೀಸ್​ಗೆ ಬ್ಯಾಟಿಂಗ್​ ನೀಡಿದರು. ಕೆರಿಬಿಯನ್ನರು ಭರ್ಜರಿ ಆರಂಭ ಪಡೆದರು. ಬ್ರೆಂಡನ್​ ಕಿಂಗ್ (23)​ ಹಾಗೂ ಜಾನ್ಸನ್​ ಚಾರ್ಲ್ಸ್​ (38) ಮೊದಲ ವಿಕೆಟ್​ಗೆ 11.1 ಓವರ್​ಗಳಲ್ಲಿ 94 ರನ್​ ಜೊತೆಯಾಟವಾಡಿದರು. ಈ ವೇಳೆ, ಚಾರ್ಲ್ಸ್​ ಸ್ಪಿನ್ನರ್​ ಮೋಯಿನ್​ ಅಲಿ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡರು. ಬಳಿಕ ಬಂದ ನಿಕೋಲಸ್​ ಪೂರನ್ (36, 32 ಎಸೆತ)​ ನಿಧಾನಗತಿಯ ಆಟವಾಡಿದರು. ಈ ನಡುವೆ ಕಿಂಗ್​ ಗಾಯಗೊಂಡು ನಿವೃತ್ತರಾದರು.

ಬಳಿಕ ಕ್ರೀಸ್​ಗಿಳಿದ ನಾಯಕ ರೊವಮನ್​ ಪೊವೆಲ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ, 17 ಬಾಲ್​ಗೆ 36 ರನ್​ (5 ಸಿಕ್ಸರ್​) ಸಿಡಿಸಿ ಔಟಾದರು. ತದನಂತರ ಆಕ್ರಮಣಕಾರಿ ಆಟಗಾರ ರಸೆಲ್​ ಕೇವಲ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಶೆರ್ಫೇನ್ ರುದರ್ಫೋರ್ಡ್ 15 ಎಸೆತಗಳಲ್ಲಿ 28 ರನ್​ ಬಾರಿಸಿ ವಿಂಡೀಸ್​ ಮೊತ್ತವನ್ನು ಹಿಗ್ಗಿಸಿದರು. ನಿಗದಿತ 20 ಓವರ್​ಗಳಲ್ಲಿ ವೆಸ್ಟ್​ ಇಂಡೀಸ್​ 4 ವಿಕೆಟ್​ಗೆ 180 ರನ್​ ಪೇರಿಸಿತು. ಇಂಗ್ಲೆಂಡ್​ ಪರ ಜೋಫ್ರಾ ಆರ್ಚರ್​, ಆದಿಲ್​ ರಶೀದ್​, ಮೋಯಿನ್​ ಅಲಿ ಹಾಗೂ ಲಿವಿಂಗ್​ಸ್ಟೋನ್​ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಟಿ-20 ವಿಶ್ವಕಪ್ ಸೂಪರ್​-8: ಅಮೆರಿಕ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ - South Africa Beats USA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.