ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ ಮಧುರ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಚೀನಾದ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್ ಶುಕ್ರವಾರ ಒಲಿಂಪಿಕ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ತನ್ನ ಗೆಳತಿ ಹುವಾಂಗ್ ಯಾಕಿಯಾಂಗ್ಗೆ ವೇದಿಕೆ ಮೇಲೆಯೇ ಪ್ರೇಮನಿವೇದನೆ ಮಾಡಿ ರಿಂಗ್ ತೊಡಿಸಿದ್ದಾರೆ. ಚಿನ್ನ ಗೆದ್ದ ಖುಷಿಯಲ್ಲಿದ್ದ ಷಟ್ಲರ್ಗೆ ಗೆಳೆಯನ ಲವ್ ಪ್ರಪೋಸಲ್ ಡಬಲ್ ಖುಷಿ ತಂದಿದೆ.
ಮಿಶ್ರ ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್‌ನಲ್ಲಿ ಹುವಾಂಗ್ ಯಾಕಿಯಾಂಗ್ ಅವರು ದಕ್ಷಿಣ ಕೊರಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸಿದ ನಂತರ ಝೆಂಗ್ ಸಿವೆಯ್ ಅವರೊಂದಿಗೆ ಚಿನ್ನದ ಪದಕ ಪಡೆದರು. ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಗೆಳೆಯ ಲಿಯು ಪೋಡಿಯಂಗೆ ಆಗಮಿಸಿ ನೆರೆದಿದ್ದ ಜನರ ಮುಂದೆಯೇ ಹೂಗುಚ್ಛ ನೀಡಿದ ಬಳಿಕ ಮಂಡಿಯೂರಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು. ಸಂತಸ ಮತ್ತು ಆಶ್ಚರ್ಯದಲ್ಲಿ ಹುವಾಂಗ್ ಇದಕ್ಕೆ ಒಪ್ಪಿಗೆ ಸೂಚಿಸಿದರು.
" i’ll love you forever! will you marry me?"
— Li Zexin (@XH_Lee23) August 2, 2024
"yes! i do!"
omg!!! romance at the olympics!!!❤️❤️❤️
huang yaqiong just had her "dream come true", winning a badminton mixed doubles gold medal🥇with her teammate zheng siwei
then her boyfriend liu yuchen proposed! 🎉🎉🎉 pic.twitter.com/JxMIipF7ij
ಬಳಿಕ ಲಿಯು ಉಂಗುರ ತೊಡಿಸಿ ತಬ್ಬಿಕೊಂಡರು. ಖುಷಿಯಲ್ಲಿ ಹುವಾಂಗ್ ಯಾಕಿಯಾಂಗ್ ಆನಂದಭಾಷ್ಪ ಸುರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದ ಎಲ್ಲ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಅಥ್ಲಿಟ್ಸ್ ಜೋಡಿಗೆ ಶುಭಾಶಯ ಕೋರಿದರು.
Bruh this is some movie scene pic.twitter.com/BAK1DpT3SR
— Shu 姿萱👩💻 translating (@shitouyuqi) August 2, 2024
ಚಿನ್ನದ ಪದಕ ವಿಜೇತ ಷಟ್ಲರ್: ಚೀನಾದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್ ಮಿಶ್ರ ಡಬಲ್ಸ್ ಆಟಗಾರ್ತಿ ಹುವಾಂಗ್ ಯಾಕಿಯಾಂಗ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಹುವಾಂಗ್ ಯಾಕಿಯೊಂಗ್ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸುವ ಮೂಲಕ ಝೆಂಗ್ ಸಿವೆಯ್ ಅವರೊಂದಿಗೆ ಚಿನ್ನದ ಪದಕದ ಗೆಲುವು ಸಾಧಿಸಿದ್ದಾರೆ. ಲಿಯು ಅವರ ಪ್ರೇಮ ನಿವೇದನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಆರ್ಚರಿ: ಕ್ವಾರ್ಟರ್ ಫೈನಲ್ಗೆ ತಲುಪಿದ ದೀಪಿಕಾ, ಭಜನ್ ಕೌರ್ ಔಟ್ - paris olympics 2024