ನವದೆಹಲಿ: ಪ್ಯಾರಿಸ್ ಒಲಿಂಪಿಕ್ನಲ್ಲಿನ ಕಹಿ ಘಟನೆ ಬಳಿಕ ಭಾರತಕ್ಕೆ ಇಂದು ವಾಪಸ್ ಆಗಿರುವ ಕುಸ್ತಿಪಟು ವಿನೇಶ್ ಪೋಗಟ್ ಅವರಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಈ ವೇಳೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
ಒಲಿಂಪಿಕ್ ಕ್ರೀಡಾಗ್ರಾಮ ತೊರೆದಿದ್ದರೂ ತಮ್ಮ ಅನರ್ಹತೆ ಕುರಿತ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದ ವಿನೇಶ್ ಅವರು, ಪ್ಯಾರಿಸ್ನಲ್ಲಿಯೇ ಇದ್ದರು. ಶನಿವಾರ ಅವರು ತವರಿಗೆ ಮರಳಿದ್ದಾರೆ. ಬಜರಂಗ್ ಪುನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ನೂರಾರು ಬೆಂಬಲಿಗರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
#WATCH | Indian wrestler Vinesh Phogat says, " i thank all the countrymen, i am very fortunate."
— ANI (@ANI) August 17, 2024
she received a warm welcome at delhi's igi airport after she arrived here from paris after participating in the #Olympics2024Paris. pic.twitter.com/6WDTk8dejO
ಭಾರೀ ಹಾರ, ತುರಾಯಿಗಳೊಂದಿಗೆ ಅವರನ್ನು ಸ್ವಾಗತಿಸಿದ ಬಳಿಕ ಓಪನ್ ಜೀಪ್ನಲ್ಲಿ ಸ್ವಗ್ರಾಮಕ್ಕೆ ಕರೆದುಕೊಂದು ಬರಲಾಗುತ್ತಿದೆ. ಈ ವೇಳೆ ತಮ್ಮ ಪರ ದೇಶಾದ್ಯಂತ ವ್ಯಕ್ತವಾದ ಬೆಂಬಲ ಕುರಿತು ವಿನೇಶ್ ಧನ್ಯವಾದ ಅರ್ಪಿಸಿದರು. ದೆಹಲಿ ವಿಮಾನ ನಿಲ್ದಾಣದಿಂದ ಹರಿಯಾಣದ ತಮ್ಮ ಗ್ರಾಮ ಬಲಾಲಿಗೆ ತೆರಳಲಿದ್ದಾರೆ.
ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರು ಒಲಿಂಪಿಕ್ನಿಂದ ಅನರ್ಹಗೊಂಡಿದ್ದರು. ಈ ಅನರ್ಹತೆ ಪ್ರಶ್ನಿಸಿ, ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಬುಧವಾರ ಅವರ ಅರ್ಜಿ ವಜಾಗೊಳಿಸಿತ್ತು. ಅನರ್ಹತೆ ಬೆನ್ನಲ್ಲೇ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ.
#WATCH | Delhi: People including relatives and family members of Indian wrestler Vinesh Phogat dance and celebrate outside Delhi airport
— ANI (@ANI) August 17, 2024
She will arrive here shortly after participating in the #Paris2024Olympic pic.twitter.com/sP2Ld7aKbV
ವಿನೇಶ್ ಪೋಗಟ್ ಜೊತೆ ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತ ಶೂಟರ್ ಗಗನ್ ಕೂಡ ಒಂದೇ ವಿಮಾನದಲ್ಲಿ ದೆಹಲಿಗೆ ಬಂದಿಳಿದರು. ವಿನೇಶ್ ಜೊತೆಗಿನ ಫೋಟೋ ಹಂಚಿಕೊಂಡಿರುವ ನಾರಂಗ್, ಅವರನ್ನು 'ಚಾಂಪಿಯನ್' ಎಂದು ಕರೆದಿದ್ದಾರೆ.
''ಕ್ರೀಡಾ ಗ್ರಾಮದಲ್ಲಿ ಮೊದಲ ದಿನದಿಂದಲೂ ಅವರು ಚಾಂಪಿಯನ್ ಆಗಿದ್ದರು. ಅವರು ಸದಾ ನಮ್ಮ ಚಾಂಪಿಯನ್ ಆಗಿರುತ್ತಾರೆ. ಲಕ್ಷಾಂತರ ಜನರ ಕನಸಿಗೆ ಸ್ಪೂರ್ತಿಯಾಗಲು ಒಲಿಂಪಿಕ್ ಪದಕವೇ ಅಗತ್ಯವಿಲ್ಲ. ವಿನೇಶ್, ನೀವು ಪೀಳಿಗೆಗೆ ಸ್ಪೂರ್ತಿಯಾಗಿದ್ದೀರಿ. ನಿಮ್ಮ ಛಲಕ್ಕೆ ವಂದನೆಗಳು'' ಎಂದು ಎಕ್ಸ್ನಲ್ಲಿ ನಾರಂಗ್ ಪೋಸ್ಟ್ ಮಾಡಿದ್ದಾರೆ.
She came as a champion on day 1 into the games village and she will always remain our champion .
— Gagan Narang (@gaGunNarang) August 17, 2024
Sometimes one doesn’t need an Olympic medal to inspire a billion dreams.. @vineshphogat you have inspired generations. .
Salute to your grit 🫡 pic.twitter.com/8m6zQVSS2L
''ವಿನೇಶ್ ದೇಶಕ್ಕೆ ಮರಳಿದ್ದಾರೆ. ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಜನರು ಆಗಮಿಸಿದ್ದಾರೆ. ನಮ್ಮ ಗ್ರಾಮದಲ್ಲೂ ಅವರನ್ನು ಸ್ವಾಗತಿಸಲು ಜನರು ಕಾದಿದ್ದಾರೆ. ಎಲ್ಲರೂ ವಿನೇಶ್ರನ್ನು ಭೇಟಿಯಾಗಿ, ಅವರಿಗೆ ಪ್ರೋತ್ಸಾಹ ನೀಡಲು ಉತ್ಸುಕರಾಗಿದ್ದಾರೆ'' ಎಂದು ವಿನೇಶ್ ಸಹೋದರ ಹರ್ವಿಂದರ್ ಪೋಗಟ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ದೇಹ ತೂಕ ಇಳಿಸಲು ಹೋಗಿ ಸಾವಿನ ಕದ ತಟ್ಟಿ ಬಂದ ವಿನೇಶ್ ಫೋಗಟ್!: ಕರಾಳ ರಾತ್ರಿಯ ಕಸರತ್ತು ವಿವರಿಸಿದ ಕೋಚ್