ETV Bharat / sports

ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ ಕಾರ್ಲೋಸ್ ಅಲ್ಕರಾಜ್ - French Open - FRENCH OPEN

FRENCH OPEN TITLE: ಪ್ಯಾರಿಸ್‌ನ ಕೋರ್ಟ್ ಫಿಲಿಪ್ - ಚಾಟ್ರಿಯರ್‌ನಲ್ಲಿ ಭಾನುವಾರ ನಡೆದ ಫೈನಲ್​ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು, ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸುವ ಮೂಲಕ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

Carlos Alcaraz  Alexander Zverev  FRENCH OPEN TITLE  ಫ್ರೆಂಚ್ ಓಪನ್
ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ ಕಾರ್ಲೋಸ್ ಅಲ್ಕರಾಜ್ (ANI)
author img

By ETV Bharat Karnataka Team

Published : Jun 10, 2024, 7:44 AM IST

ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್‌ನ ಕೋರ್ಟ್ ಫಿಲಿಪ್ - ಚಾಟ್ರಿಯರ್‌ನಲ್ಲಿ ಭಾನುವಾರ ನಡೆದ ಫೈನಲ್​ನಲ್ಲಿ ಟೆನ್ನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅತ್ಯುತ್ತಮ ಪ್ರದರ್ಶನ ನೀಡಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಅಸಾಧಾರಣ ಗೆಲುವು ದಾಖಲಿಸಿದರು. ಈ ಮೂಲಕ ಕಾರ್ಲೋಸ್ ಅಲ್ಕರಾಜ್ ಅವರು, ಚೊಚ್ಚಲ ಫ್ರೆಂಚ್ ಓಪನ್ 2024 ಪುರುಷರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮೂರನೇ ಶ್ರೇಯಾಂಕದ ಆಟಗಾರ ಜ್ವೆರೆವ್ ಅವರನ್ನು 6-3, 2-6, 5-7, 6-1, 6-2 ಐದು ಸೆಟ್​ಗಳಲ್ಲಿ ಭರ್ಜರಿ ಆಟವಾಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದರು. ನಾಲ್ಕು ಗಂಟೆ, 19 ನಿಮಿಷಗಳವರೆಗೆ ಫೈನಲ್​ ಪಂದ್ಯ ನಡೆಯಿತು. 2022 ಯುಎಸ್ ಓಪನ್‌ನಲ್ಲಿ ಹಾರ್ಡ್ ಕೋರ್ಟ್‌ಗಳಲ್ಲಿ ಮತ್ತು 2023ರ ವಿಂಬಲ್ಡನ್​ನ ಹುಲ್ಲಿನ ಅಂಕಣಗಳ ಮೇಲೆ ಅವರು ವಿಜಯ ದಾಖಲಿಸಿದ್ದರು. ಇದೀಗ 21 ವರ್ಷದ ಅಲ್ಕರಾಜ್ ಪ್ಯಾರಿಸ್​ನ ಕೆಂಪು ಮಣ್ಣಿನ ಅಂಕಣದಲ್ಲಿ ವಿಜಯ ಗಳಿಸಿದ್ದಾರೆ. ಮೂರು ಪ್ರತ್ಯೇಕ ಅಂಕಣಗಳಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂದು ಹೆಗ್ಗಳಿಕೆಗೆ ಅಲ್ಕರಾಜ್​ ಪಾತ್ರರಾಗಿದ್ದಾರೆ.

ಸೆಮಿಫೈನಲ್‌ನಲ್ಲಿ ಜಾನಿಕ್ ಸಿನ್ನರ್ ವಿರುದ್ಧದ ಅವರ ಪ್ರದರ್ಶನದಂತೆಯೇ, ಅಲ್ಕಾರಾಜ್ ಅವರು ಎರಡು ಸೆಟ್‌ಗಳನ್ನು ಹಿನ್ನಡೆಯಲ್ಲಿದ್ದಾಗ ಜ್ವೆರೆವ್‌ ವಿರುದ್ಧ ಜಯಿಸಲು ಕಾಮ್ ಆದ​ ಆಟವನ್ನೇ ಆಡಿದರು. ಬಲಗೈ ಗಾಯದ ಕಾರಣದಿಂದಾಗಿ ಅವರು ಮೂರು ವಾರಗಳವರೆಗೆ ಆಟದಿಂದ ಹೊರಗುಳಿಬೇಕಾಗಿತ್ತು. ಆದರೆ, ಭರ್ಜರಿ ಕಂಬ್ಯಾಕ್​ ಮಾಡಿದ ಅಲ್ಕಾರಾಜ್ ಅಂತಿಮ 15 ಪಂದ್ಯಗಳಲ್ಲಿ 12ರಲ್ಲಿ ಗೆಲುವು ದಾಖಲಿಸಿದ್ದಾರೆ. ಅಲ್ಕರಾಜ್ ಅವರು, ಗ್ರ್ಯಾಂಡ್ ಸ್ಲಾಮ್ ಪಂದ್ಯಗಳಲ್ಲಿ 52-10 ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಮಹಿಳಾ ಆಟಗಾರ್ತಿ ಇಗಾ ಸ್ವಿಯಾಟೆಕ್​ನಿಂದ ಫ್ರೆಂಚ್‌ ಓಪನ್​ನಲ್ಲಿ ಹ್ಯಾಟ್ರಿಕ್ ಸಾಧನೆ: ಪ್ಯಾರಿಸ್​ನ ಕೆಂಪು ಮಣ್ಣಿನ ಅಂಕಣದಲ್ಲಿ ಸೋಲಿಲ್ಲದ ರಾಣಿಯಂತೆ ಮೆರೆಯುತ್ತಿರುವ ಪೋಲ್ಯಾಂಡ್​ನ ಇಗಾ ಸ್ವಿಯಾಟೆಕ್​ ಅವರು ಸತತ 3ನೇ ಬಾರಿ ಫ್ರೆಂಚ್​ ಓಪನ್​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ಇಲ್ಲಿ ನಡೆದ ಫೈನಲ್​ನಲ್ಲಿ ಇಟಲಿಯ ಜಾಸ್ಮಿನ್​ ಪಾವ್ಲೀನಿ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಕೇವಲ 1 ಗಂಟೆ, 8 ನಿಮಿಷಗಳಲ್ಲಿ ಆಟ ಕೊನೆಗೊಂಡಿತು.

23 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕದ ಆಟಗಾರ್ತಿ ಇಗಾ ಸ್ವಿಯಾಟೆಕ್, ಕಳೆದ 5 ವರ್ಷಗಳಲ್ಲಿ ಗೆದ್ದ ನಾಲ್ಕನೇ ಗ್ರ್ಯಾನ್​ಸ್ಲಾಮ್​ ಪ್ರಶಸ್ತಿ ಇದಾಗಿದೆ. ರೋಲೆಂಡ್​ ಗ್ಯಾರೋಸ್​ನಲ್ಲಿ ಸೋಲೇ ಕಾಣದಂತೆ ಮುನ್ನುಗ್ಗುತ್ತಿರುವ ಇಗಾ ಅವರು, ಕೆಂಪು ಮಣ್ಣಿನ ಅಂಕಣದಲ್ಲಿ 21-0 ಗೆಲುವಿನ ಅಂತರವನ್ನು ಕಾಯ್ದುಕೊಂಡರು. ವೃತ್ತಿ ಜೀವನದಲ್ಲಿ 35-2 ರ ಸ್ಟ್ರೈಕ್​ರೇಟ್​ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ: ಫ್ರೆಂಚ್ ಓಪನ್: ಅರೆವಾಲೊ-ಪಾವಿಕ್ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ - French Open

ETV Bharat Logo

Copyright © 2025 Ushodaya Enterprises Pvt. Ltd., All Rights Reserved.