ETV Bharat / sports

ಪ್ಯಾರಿಸ್​ ಒಲಿಂಪಿಕ್ಸ್: ಅರ್ಜೆಂಟೀನಾ - ಭಾರತ ನಡುವಣ ಹಾಕಿ ಪಂದ್ಯ ಡ್ರಾನಲ್ಲಿ ಅಂತ್ಯ ​ - paris olympics 2024

author img

By ETV Bharat Karnataka Team

Published : Jul 29, 2024, 6:57 PM IST

ಪ್ಯಾರಿಸ್​ ಒಲಿಂಪಿಕ್ಸ್​ನ ಪೂಲ್ ಬಿ ಗುಂಪು ಹಂತದ ಹಾಕಿ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ (AP)

ಪ್ಯಾರಿಸ್​ (ಫ್ರಾನ್ಸ್​): ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024ರ ತನ್ನ ಪೂಲ್ ಬಿ ಗುಂಪು ಹಂತದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಟೀಂ ಇಂಡಿಯಾ ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿತು. ಅರ್ಜೆಂಟೀನಾ ಪರ ಲುಕಾಸ್ ಮಾರ್ಟಿನೆಜ್ (22ನೇ ನಿಮಿಷ) ಏಕೈಕ ಗೋಲು ಗಳಿಸಿದರು. ಇದೇ ವೇಳೆ ಪಂದ್ಯ ಮುಗಿಯಲು ಕೇವಲ 2 ನಿಮಿಷ ಬಾಕಿ ಇರುವಾಗ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್​ನಲ್ಲಿ ಗೋಲ್​ ದಾಖಲಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.

57 ನಿಮಿಷಗಳ ವರೆಗೂ ಅರ್ಜೆಂಟೀನಾ 1-0 ಅಂತರದಿಂದ ಮುನ್ನಡೆ ಸಾಧಿಸಿತ್ತು. 58ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಗೋಲು ದಾಖಲಿಸಿದರು. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಕೊನೆಯ 2 ನಿಮಿಷ ಬಾಕಿ ಇರುವಾಗಲೇ ಗೋಲು ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಈ ಬಾರಿಯೂ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-2 ಅಂತರದಿಂದ ರೋಚಕ ಜಯ ಸಾಧಿಸಿತ್ತು. ಎಫ್‌ಐಎಚ್ ವಿಶ್ವ ಶ್ರೇಯಾಂಕದಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ಅರ್ಜೆಂಟೀನಾ ಆರನೇ ಸ್ಥಾನದಲ್ಲಿದೆ. ಅರ್ಜೆಂಟೀನಾ 22ನೇ ನಿಮಿಷದಲ್ಲಿಯೇ ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು. ಭಾರತೀಯ ಆಟಗಾರರು ಸತತ ಪ್ರಯತ್ನ ನಡೆಸಿದರೂ ಅರ್ಜೆಂಟೀನಾ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. 10 ಬಾರಿ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕರೂ ಕೇವಲ ಒಂದರಲ್ಲಿ ಮಾತ್ರ ಗೋಲು ಗಳಿಸಲು ಸಾಧ್ಯವಾಗಿದೆ.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ಹಲವು ಅವಕಾಶಗಳನ್ನು ಪಡೆದುಕೊಂಡಿದ್ದವು. ಆದರೆ, ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಇದರಿಂದಾಗಿ ಮೊದಲ ಕ್ವಾರ್ಟರ್ ಗೋಲು ರಹಿತವಾಗಿ ಉಳಿಯಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಹಲವು ಉತ್ತಮ ಅವಕಾಶಗಳನ್ನು ಸೃಷ್ಟಿಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ 22ನೇ ನಿಮಿಷದಲ್ಲಿ ಲುಕಾಸ್ ಮಾರ್ಟಿನೆಜ್ ಬಾರಿಸಿದ ಅದ್ಭುತ ಗೋಲಿನಿಂದ ಅರ್ಜೆಂಟೀನಾ ವಿರಾಮದ ವೇಳೆಗೆ ಭಾರತದ ವಿರುದ್ಧ 1-0 ಮುನ್ನಡೆ ಸಾಧಿಸಿತು.

ಮೂರನೇ ಕ್ವಾರ್ಟರ್: ಪಂದ್ಯದ ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿಯಾಗಿತ್ತು. 33ನೇ ನಿಮಿಷದಲ್ಲಿ ಭಾರತದ ಸುಖಜೀತ್ ಅದ್ಭುತ ಶಾಟ್ ಮಾಡಿದರು. ಆದರೆ ಅರ್ಜೆಂಟೀನಾದ ಗೋಲ್‌ಕೀಪರ್ ರಕ್ಷಣೆಯಿಂದಾಗಿ ಗೋಲು ಅವಕಾಶ ತಪ್ಪಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಹಲವಾರು ಪ್ರತಿದಾಳಿಗಳನ್ನು ಮಾಡಿದರು. ಆದರೆ, ಅರ್ಜೆಂಟೀನಾದ ರಕ್ಷಣೆಯನ್ನು ಭೇದಿಸುವಲ್ಲಿ ವಿಫಲರಾದರು. ಅರ್ಜೆಂಟೀನಾಗೆ 38ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು, ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.

ನ್ಯೂಜಿಲೆಂಡ್ ಮತ್ತು ಅರ್ಜೆಂಟೀನಾ ಹೊರತುಪಡಿಸಿ, ಟೀಮ್ ಇಂಡಿಯಾದ ಗುಂಪಿನಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ಐರ್ಲೆಂಡ್​ನಂತಹ ತಂಡಗಳು ಸೇರಿವೆ. ಸದ್ಯ ಭಾರತ 2 ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅರ್ಜೆಂಟೀನಾ ನಾಲ್ಕನೇ ಸ್ಥಾನದಲ್ಲಿದೆ. ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ. ಗುಂಪಿನಲ್ಲಿ ಅಗ್ರ - 4 ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪಲಿವೆ.

ಇದನ್ನೂ ಓದಿ: ಬ್ಯಾಡ್ಮಿಂಟನ್: ಜಪಾನ್​ ವಿರುದ್ಧ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪಗೆ ಸೋಲು - Paris olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.