ETV Bharat / sports

ಕೊಹ್ಲಿ, ರೋಹಿತ್​​, ಜಡೇಜಾ, ಅಶ್ವಿನ್​ ವಿರುದ್ಧ ಬಿಸಿಸಿಐ ಗಂಭೀರ ಕ್ರಮದ ಮುನ್ಸೂಚನೆ: ಆಸ್ಟ್ರೇಲಿಯಾ ಪ್ರವಾಸದಲ್ಲೂ ಫೇಲ್​ ಆದ್ರೆ! - BCCI

ಭಾರತ ತಂಡದ ಹಿರಿಯ ಕ್ರಿಕೆಟಿಗರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಹಾಗು ಆರ್.ಅಶ್ವಿನ್​ ಕಳಪೆ ಪ್ರದರ್ಶನದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ.

ರೋಹಿತ್​, ​ಕೊಹ್ಲಿ, ಜಡೇಜಾ, ಅಶ್ವಿನ್​
ರೋಹಿತ್ ಶರ್ಮಾ​, ವಿರಾಟ್ ​ಕೊಹ್ಲಿ, ರವೀಂದ್ರ ಜಡೇಜಾ, ಆರ್.ಅಶ್ವಿನ್​ (AP)
author img

By ETV Bharat Sports Team

Published : Nov 4, 2024, 9:41 AM IST

ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್​ ಸರಣಿಯನ್ನು ಭಾರತ ಕೈಚೆಲ್ಲಿದೆ. 3 ಪಂದ್ಯಗಳಲ್ಲಿ ಹೀನಾಯವಾಗಿ ವೈಟ್‌ವಾಶ್‌​ ಆಗಿ ಕೆಟ್ಟದಾಖಲೆ ಬರೆದಿದೆ. ಇದರ ಬೆನ್ನಲ್ಲೇ ತಂಡದ ನಾಲ್ವರು ಹಿರಿಯ ಆಟಗಾರರ ವಿರುದ್ಧ ಗಂಭೀರ ಕ್ರಮಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತಿಸಿದೆ ಎಂದು ತಿಳಿದು ಬಂದಿದೆ.

ಹೌದು, ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲನುಭವಿಸಿದ ಬಳಿಕ ಬಿಸಿಸಿಐ ಅಸಮಾಧಾನಗೊಂಡಿದೆ. ನ್ಯೂಜಿಲೆಂಡ್​ (ಕಿವೀಸ್) ವಿರುದ್ಧದ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ಭವಿಷ್ಯದ ದೃಷ್ಟಿಯಿಂದ ಟೆಸ್ಟ್​ ತಂಡದಲ್ಲಿ ಸೂಕ್ತ ಬದಲಾವಣೆ ಬಯಸಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಡೇಜಾ ಮತ್ತು ಅಶ್ವಿನ್ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎಂದು ವರದಿಯಾಗಿದೆ.

ಕಿವೀಸ್​ ವಿರುದ್ಧ ಮೂರು ಪಂದ್ಯಗಳನ್ನು ಸೋಲುತ್ತಿದ್ದಂತೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ ಹಾದಿ ಮತ್ತಷ್ಟು ಜಟಿಲವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 4-0 ಅಂತರದಿಂದ ಗೆದ್ದರೆ ಮಾತ್ರ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಫೈನಲ್ ತಲುಪಲಿದೆ. ಆದಾಗ್ಯೂ, ಈ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಿರುವುದರಿಂದ ಸ್ಕ್ವಾಡ್‌ನಲ್ಲಿ ಯಾವುದೇ ಬದಲಾವಣೆಗಳು ಆಗದೇ ಇರಬಹುದು. ಒಂದು ವೇಳೆ ಈ ಸರಣಿಯಲ್ಲಿ ಟೀಂ ಇಂಡಿಯಾ ಸೋತು ಡಬ್ಲ್ಯುಟಿಸಿ ಫೈನಲ್ ತಲುಪದಿದ್ದರೆ ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸಕ್ಕೆ ತಂಡದಿಂದ ಈ ನಾಲ್ವರು ಹಿರಿಯರನ್ನು ಕೈ ಬಿಡುವ ಚಿಂತನೆ ಇದೆ ಎಂದು ಬಿಸಿಸಿಐ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟೀಂ ಇಂಡಿಯಾ ಮೂರನೇ ಬಾರಿಗೆ WTC ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳನ್ನು ಗೆಲ್ಲಲೇಬೇಕು. ಆದರೆ ಬಲಿಷ್ಠ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಸೋಲಿಸುವುದು ಭಾರತಕ್ಕೆ ಸುಲಭವಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತು.

ಬಾರ್ಡರ್​ ಗವಾಸ್ಕರ್​ ಟ್ರೋಫಿ ವೇಳಾಪಟ್ಟಿ:

  • ಮೊದಲ ಟೆಸ್ಟ್: ನವೆಂಬರ್ 22ರಿಂದ 26ರವರೆಗೆ - ಪರ್ತ್
  • ಎರಡನೇ ಟೆಸ್ಟ್: ಡಿಸೆಂಬರ್ 6ರಿಂದ 10ರವರೆಗೆ- ಕ್ಯಾನ್ಬೆರಾ
  • ಮೂರನೇ ಟೆಸ್ಟ್: ಡಿಸೆಂಬರ್ 14ರಿಂದ 18ರವರೆಗೆ - ಬ್ರಿಸ್ಬೇನ್
  • ನಾಲ್ಕನೇ ಟೆಸ್ಟ್: ಡಿಸೆಂಬರ್ 26ರಿಂದ 30ರವರೆಗೆ - ಮೆಲ್ಬೋರ್ನ್
  • ಐದನೇ ಟೆಸ್ಟ್: ಜನವರಿ 3ರಿಂದ 7ರವರೆಗೆ - ಸಿಡ್ನಿ

ಇದನ್ನೂ ಓದಿ: ಕೆ.ಎಲ್‌.ರಾಹುಲ್​ಗೆ ಒಂದು ಲೆಕ್ಕ, ರೋಹಿತ್ ಶರ್ಮಾ​, ವಿರಾಟ್ ಕೊಹ್ಲಿ​ಗೆ ಒಂದು ಲೆಕ್ಕನಾ?: ಅಭಿಮಾನಿಗಳು ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.