ETV Bharat / sports

ಬಾಂಗ್ಲಾ, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಬದಲಾವಣೆ: ಹೋಸ ವೇಳಾಪಟ್ಟಿ ಹೀಗಿದೆ - BCCI Release Revised Schedule

author img

By ETV Bharat Karnataka Team

Published : Aug 14, 2024, 10:43 PM IST

ಭಾರತವು 2024-25ನೇ ಅಂತಾರಾಷ್ಟ್ರೀಯ ದೇಶೀಯ ಸೀಸನ್​ನಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೇಶೀಯ ಋತುವಿನ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

INDIA VS BANGLADESH  INDIAN TEAM REVISED SCHEDULE  INDIAN CRICKET TEAM  INDIA VS ENGLAND
ಬಾಂಗ್ಲಾದೇಶ, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಬದಲಾವಣೆ ಮಾಡಿದ ಬಿಸಿಸಿಐ (IANS PHOTO)

ನವದೆಹಲಿ: ಮುಂಬರುವ 2024-25ರ ದೇಶೀಯ ಸೀಸನ್‌ಗಾಗಿ ಟೀಂ ಇಂಡಿಯಾದ ವೇಳಾಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಬದಲಾವಣೆ ಮಾಡಿದೆ. ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧವೂ ಸರಣಿ ಆಡಲಿದೆ. ಬಿಸಿಸಿಐ ತನ್ನ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಹೊಸ ಪಟ್ಟಿ ಬಿಡುಗಡೆಗೊಳಿಸಿದೆ.

ಭಾರತ-ಬಾಂಗ್ಲಾ ಸರಣಿ: ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವು ಆರಂಭದಲ್ಲಿ 6 ಅಕ್ಟೋಬರ್ 2024ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಡ್ರೆಸ್ಸಿಂಗ್ ರೂಮ್ ಕಾಮಗಾರಿ ಕಾರಣ ಈಗ ಗ್ವಾಲಿಯರ್‌ನಲ್ಲಿ ನಡೆಯಲಿದೆ. ಈ ಪಂದ್ಯ ನಗರದ ಹೊಸ ಕ್ರೀಡಾಂಗಣವಾದ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು 2010ರ ನಂತರ ಈ ಕ್ರೀಡಾಂಗಣದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. 2010ರಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಐತಿಹಾಸಿಕ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಮೈದಾನದಲ್ಲಿ ಮೊದಲ ದ್ವಿಶತಕ ಸಿಡಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಬದಲಾವಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟಿ 20ಗಳ ಸ್ಥಳಗಳನ್ನು ವಿನಿಮಯ ಮಾಡಿಕೊಳ್ಳುವುದಾಗಿ ಮಂಡಳಿಯು ಪ್ರಕಟಿಸಿದೆ. ಮೊದಲಿಗೆ ಮೊದಲ ಟಿ20ಐಗೆ ಆತಿಥ್ಯ ವಹಿಸಬೇಕಿದ್ದ ಚೆನ್ನೈ ಇದೀಗ ಎರಡನೇ ಟಿ20ಐಗೆ ಆತಿಥ್ಯ ವಹಿಸಲಿದ್ದು, ಈ ಹಿಂದೆ ಘೋಷಿಸಿದಂತೆ ಎರಡನೇ ಟಿ20ಐ ಬದಲಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೊದಲ ಪಂದ್ಯವನ್ನು ಆಯೋಜಿಸಲಿದೆ. ಜನವರಿ 22ರಂದು ಮೊದಲ ಟಿ20 ಮತ್ತು ಜನವರಿ 25ರಂದು ಎರಡನೇ ಟಿ20 ದಿನಾಂಕಗಳು ಒಂದೇ ಆಗಿರುತ್ತವೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ಮತ್ತು ಬಾಂಗ್ಲಾದೇಶ ಸರಣಿಯ ನೂತನ ವೇಳಾಪಟ್ಟಿ..

ಸಂಖ್ಯೆದಿನಾಂಕಪಂದ್ಯಫಾರ್ಮೆಟ್​ಸಮಯಸ್ಥಳ
1ಸೆಪ್ಟೆಂಬರ್ 19 ರಿಂದ 23 ರವರೆಗೆಭಾರತ vs ಬಾಂಗ್ಲಾದೇಶ ಟೆಸ್ಟ್9.30 ಬೆಳಗ್ಗೆಚಿದಂಬರಂ ಸ್ಟೇಡಿಯಂ, ಚೆನ್ನೈ
2ಸೆ. 27 ರಿಂದ ಅಕ್ಟೋಬರ್ 01 ರವರೆಗೆ ಭಾರತ vs ಬಾಂಗ್ಲಾದೇಶ ಟೆಸ್ಟ್9.30 ಬೆಳಗ್ಗೆಗ್ರೀನ್ ಪಾರ್ಕ್, ಕಾನ್ಪುರ
3ಅಕ್ಟೋಬರ್ 06 ಭಾರತ vs ಬಾಂಗ್ಲಾದೇಶ ಟಿ20ಸಂಜೆ 7.30ಕ್ಕೆ

ಶ್ರೀಮಂತ್ ಮಾಧವರಾವ್ ಸಿಂಧಿಯಾ

ಕ್ರಿಕೆಟ್ ಸ್ಟೇಡಿಯಂ, ಗ್ವಾಲಿಯರ್‌

4ಅಕ್ಟೋಬರ್ 09 ಭಾರತ vs ಬಾಂಗ್ಲಾದೇಶ ಟಿ20ಸಂಜೆ 7.30ಕ್ಕೆಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
5ಅಕ್ಟೋಬರ್ 12ಭಾರತ vs ಬಾಂಗ್ಲಾದೇಶ ಟಿ20ಸಂಜೆ 7.30ಕ್ಕೆ

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ

ಕ್ರೀಡಾಂಗಣ, ಹೈದರಾಬಾದ್

ಭಾರತ ಮತ್ತು ಇಂಗ್ಲೆಂಡ್​ ಸರಣಿ ನೂತನ ವೇಳಾಪಟ್ಟಿ..

ದಿನಾಂಕಪಂದ್ಯಸಮಯಫಾರ್ಮೆಟ್​ಸ್ಥಳ
22 ಜನವರಿಭಾರತ vs ಇಂಗ್ಲೆಂಡ್ಸಂಜೆ 7ಕ್ಕೆ ಟಿ20ಕೋಲ್ಕತ್ತಾ
25 ಜನವರಿಭಾರತ vs ಇಂಗ್ಲೆಂಡ್ಸಂಜೆ 7ಕ್ಕೆ ಟಿ20ಚೆನ್ನೈ
28 ಜನವರಿಭಾರತ vs ಇಂಗ್ಲೆಂಡ್ಸಂಜೆ 7ಕ್ಕೆ ಟಿ20ರಾಜ್​ಕೋಟ್
31 ಜನವರಿಭಾರತ vs ಇಂಗ್ಲೆಂಡ್ಸಂಜೆ 7ಕ್ಕೆ ಟಿ20ಪುಣೆ
02 ಫೆಬ್ರವರಿಭಾರತ vs ಇಂಗ್ಲೆಂಡ್ಸಂಜೆ 7ಕ್ಕೆ ಟಿ20ಮುಂಬೈ
06 ಫೆಬ್ರವರಿಭಾರತ vs ಇಂಗ್ಲೆಂಡ್ಮಧ್ಯಾಹ್ನ 1:30ಕ್ಕೆಏಕದಿನನಾಗ್ಪುರ
09 ಫೆಬ್ರವರಿಭಾರತ vs ಇಂಗ್ಲೆಂಡ್ಮಧ್ಯಾಹ್ನ 1:30ಕ್ಕೆಏಕದಿನಕಟಕ್
12 ಫೆಬ್ರವರಿಭಾರತ vs ಇಂಗ್ಲೆಂಡ್ಮಧ್ಯಾಹ್ನ 1:30ಕ್ಕೆಏಕದಿನಅಹಮದಾಬಾದ್

ಇದನ್ನೂ ಓದಿ: ಬ್ರಿಟನ್ ಗಾಯಕಿ ಜೊತೆಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಇನ್‌ಸ್ಟಾ ಪೋಸ್ಟ್‌ಗಳು ಭಾರೀ ವೈರಲ್ - Hardik Pandya British Singer dating

ETV Bharat Logo

Copyright © 2024 Ushodaya Enterprises Pvt. Ltd., All Rights Reserved.