ETV Bharat / sports

ಬಿಸಿಸಿಐ: ಟೆಸ್ಟ್ ಪಂದ್ಯ ಆಡಲು ಹೆಚ್ಚುವರಿ 45 ಲಕ್ಷ, ಟೆಸ್ಟ್​ ಕ್ರಿಕೆಟ್​ ಇನ್ಸೆಂಟೀವ್​ ಸ್ಕೀಮ್​ ಘೋಷಿಸಿದ ಜೈ ಶಾ - Test Cricket Incentive Scheme

ಟೆಸ್ಟ್‌ನಲ್ಲಿ ಆಟಗಾರರಲ್ಲಿ ಆಸಕ್ತಿ ಹೆಚ್ಚಿಸಲು ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಆಟಗಾರರು ಕೆಂಪು ಬಾಲ್​ ಕ್ರಿಕೆಟ್​ಗೆ ಹೆಚ್ಚು ಒಲವು ತೋರಲು 'ಟೆಸ್ಟ್ ಕ್ರಿಕೆಟ್ ಇನ್ಸೆಂಟೀವ್​ ಸ್ಕೀಮ್​' ಅನ್ನು ಬಿಸಿಸಿಐ ಪ್ರಕಟಿಸಿದೆ.

India won the series over England  BCCI secretary Jay Shah  BCCI announces  red ball game
ಟೆಸ್ಟ್ ಪಂದ್ಯ ಆಡಲು ಹೆಚ್ಚುವರಿ 45 ಲಕ್ಷ ರೂ, ಇನ್ಸೆಂಟೀವ್​ ಸ್ಕೀಮ್​ ಘೋಷಿಸಿದ ಜೈಶಾ
author img

By ANI

Published : Mar 9, 2024, 6:08 PM IST

ಮುಂಬೈ, ಮಹಾರಾಷ್ಟ್ರ: ಟೆಸ್ಟ್ ಕ್ರಿಕೆಟ್ ಅನ್ನು ಮತ್ತಷ್ಟು ವಿಸ್ತರಿಸಲು ಬಿಸಿಸಿಐ ಕ್ರಮ ಕೈಗೊಂಡಿದೆ. ಟಿ-20 ಲೀಗ್‌ಗಳತ್ತ ಒಲವು ತೋರುವ ಕ್ರಿಕೆಟಿಗರನ್ನು ನಿರುತ್ಸಾಹಗೊಳಿಸಲು ಬಿಸಿಸಿಐ ಇತ್ತೀಚೆಗೆ 'ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆ' ಪರಿಚಯಿಸಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯಿಸಿದ್ದಾರೆ.

ಇದಕ್ಕಾಗಿ 40 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿರುವುದನ್ನು ಬಿಸಿಸಿಐ ಬಹಿರಂಗ ಪಡಿಸಿದೆ. ಈಗ ಗುತ್ತಿಗೆ ಆಟಗಾರರು ಪಡೆಯುವ ಶುಲ್ಕದ ಹೊರತಾಗಿ ಪ್ರತಿ ಟೆಸ್ಟ್ ಪಂದ್ಯಕ್ಕೂ ಹೆಚ್ಚುವರಿ ಪ್ರೋತ್ಸಾಹಧನ ಪಡೆಯಲಿದ್ದಾರೆ. ಪ್ರಸ್ತುತ, ಪುರುಷರ ಕ್ರಿಕೆಟ್ ತಂಡಕ್ಕೂ ಇದೇ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಯ್​ ಶಾ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಕ ಯೋಜನೆ ಘೋಷಿಸಲು ಸಂತೋಷವಾಗಿದೆ. ಟೆಸ್ಟ್ ಕ್ರಿಕೆಟ್ ಆಟಗಾರರಿಗೆ ಆರ್ಥಿಕ ನೆರವು ನೀಡಲು ನಾವು ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಈ ಯೋಜನೆ 2022 - 23 ಸೀಸನ್​ ಜಾರಿಗೆ ಬರಲಿದೆ. ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಹೆಚ್ಚುವರಿ ಭತ್ಯೆಗಳನ್ನು ನೀಡಲಾಗುತ್ತದೆ. ಇದು ಕನಿಷ್ಠ 15 ಲಕ್ಷ ರೂಪಾಯಿವರೆಗೆ ಇರುತ್ತದೆ ಎಂದು ಜಯ್​ ಶಾ ಹೇಳಿದರು. ಬಿಸಿಸಿಐ ಕಾರ್ಯದರ್ಶಿ ಮಾಡಿರುವ ಪೋಸ್ಟ್ ಪ್ರಕಾರ, ಅವರು ಒಂದು ಸೀಸನ್​ನಲ್ಲಿ ಕನಿಷ್ಠ 50 ಪ್ರತಿಶತ ಪಂದ್ಯಗಳನ್ನು ಆಡಬೇಕು. ಮೀಸಲು ಪೀಠಕ್ಕೆ ಸೀಮಿತವಾಗಿದ್ದರೂ, ತಂಡಕ್ಕೆ ಆಯ್ಕೆ ಸಾಕಷ್ಟು ಉತ್ತಮವಾಗಿದೆ. ಅದಕ್ಕಿಂತ ಕಡಿಮೆ ಆಟವಾಡಿದರೆ ಹೆಚ್ಚುವರಿ ಭತ್ಯೆ ಸಿಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಉದಾಹರಣೆಗೆ ಒಂದು ಋತುವಿನಲ್ಲಿ 9 ಟೆಸ್ಟ್ ಪಂದ್ಯಗಳು ನಡೆಯುತ್ತವೆ ಎಂದಿಟ್ಟುಕೊಳ್ಳೋಣ. ಯಾವುದೇ ಆಟಗಾರ 4ಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಭಾಗವಹಿಸಿದರೆ ಆ ಆಟಗಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡಲಾಗುವುದಿಲ್ಲ. ಅದೇ ಶೇ.50ಕ್ಕಿಂತ ಹೆಚ್ಚಾದರೆ 5 - 6 ಟೆಸ್ಟ್ ಆಡಿದರೆ ಪ್ರತಿ ಪಂದ್ಯಕ್ಕೆ ಕನಿಷ್ಠ 15 ಲಕ್ಷ ರೂಪಾಯಿ ನೀಡಲಾಗುವುದು. 5-6 ಪಂದ್ಯಗಳನ್ನಾಡಿ ಅಂತಿಮ ತಂಡದಲ್ಲಿದ್ದರೆ ಅವರಿಗೆ 30 ಲಕ್ಷ ರೂಪಾಯಿವರೆಗೂ ಪ್ರೋತ್ಸಾಹಧನ ನೀಡಲಾಗುವುದು. ಅವರು 7 (ಶೇ. 75) ಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನು ಆಡಿದರೆ ಮತ್ತು ಅಂತಿಮ ತಂಡದಲ್ಲಿದ್ದರೆ ಅಂತಹ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಅಷ್ಟೇ ಅಲ್ಲ 7 ಪಂದ್ಯಗಳನ್ನಾಡಿದ ಆಟಗಾರರು ಅವರು ರಿಜರ್ವಬೆಂಚ್​ಗೂ ಸೀಮಿತವಾಗಿದ್ದರೂ ಸಹ 22.5 ಲಕ್ಷ ರೂಪಾಯಿ ನೀಡಲಾಗುವುದು.

ಓದಿ: ಕೇವಲ ಶತಕ ಗಳಿಸುವುದಷ್ಟೇ ಅಲ್ಲ, 20 ವಿಕೆಟ್​ಗಳನ್ನು ಕಬಳಿಸುವುದು ಮುಖ್ಯವೇ: ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.