ETV Bharat / sports

2024-25ರ ಹೋಮ್​ ಸೀಸನ್​ನ ರಣಜಿ ಟ್ರೋಫಿ ಅ.11 ರಂದು ಪ್ರಾರಂಭ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ - RANJI TROPHY - RANJI TROPHY

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೇಶೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ಬಿಸಿಸಿಐ 2024-25ರ ಹೋಮ್​ ಸೀಸನ್​ನ ದೇಶೀಯ ವೇಳಾಪಟ್ಟಿ ಪ್ರಕಟಿಸಿದ್ದು, ರಣಜಿ ಟ್ರೋಫಿ ಅಕ್ಟೋಬರ್ 11 ರಿಂದ ಪ್ರಾರಂಭವಾಗಲಿದೆ.

DOMESTIC CRICKET  RANJI TROPHY  DOMESTIC FIXTURES FOR HOME SEASON  BCCI
ಸಂಗ್ರಹ ಚಿತ್ರ (Getty Images)
author img

By ETV Bharat Karnataka Team

Published : Jun 7, 2024, 10:27 AM IST

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-25ರ ಹೋಮ್​ ಸೀಸನ್​ನ ದೇಶೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಾಧ್ಯಮಗಳಿಗೆ ಪ್ರಕ್ರಿಯಿಸಿ, ''ಆಟಗಾರರ ಆರೋಗ್ಯಕ್ಕೆ ಆದ್ಯತೆ ನೀಡುವುದರೊಂದಿಗೆ ದೇಶೀಯ ಕ್ರಿಕೆಟ್‌ನ ಬಲವರ್ಧನೆಯನ್ನು ಗಮನದಲ್ಲಿಟ್ಟುಕೊಂಡು 2024-25ರ ಹೋಮ್​ ಸೀಸನ್​ನ ದೇಶೀಯ ಕ್ರಿಕೆಟ್ ಅನ್ನು ಬಹಳ ಎಚ್ಚರಿಕೆಯಿಂದ ಯೋಜಿಸಲಾಗಿದೆ'' ಎಂದು ತಿಳಿಸಿದರು.

ಈ ವೇಳಾಪಟ್ಟಿ ಪ್ರಕಾರ, ಪ್ರತಿಷ್ಠಿತ ದುಲೀಪ್ ಟ್ರೋಫಿಯನ್ನು ಒಳಗೊಂಡಿರುವ ರೆಡ್ ಬಾಲ್ ಕ್ರಿಕೆಟ್‌ನೊಂದಿಗೆ ಸೀಸನ್​ ಪ್ರಾರಂಭವಾಗುತ್ತದೆ. ಹಿರಿಯ ಪುರುಷರ ಆಯ್ಕೆ ಸಮಿತಿಯಿಂದ ಆಯ್ಕೆಯಾದ ನಾಲ್ಕು ತಂಡಗಳು ಅನಂತಪುರದಲ್ಲಿ ಸೆಪ್ಟೆಂಬರ್ 5ರಿಂದ ಪ್ರಾರಂಭವಾಗುವ ದುಲೀಪ್ ಟ್ರೋಫಿಯಲ್ಲಿ ಸ್ಪರ್ಧಿಸಲಿವೆ. ಇದಾದ ನಂತರ ಇರಾನಿ ಕಪ್ ಮತ್ತು ರಣಜಿ ಟ್ರೋಫಿ ನಡೆಯಲಿದ್ದು, ಇದರಲ್ಲಿ ಮೊದಲ ಐದು ಲೀಗ್ ಪಂದ್ಯಗಳು ನಡೆಯಲಿವೆ. ರಣಜಿ ಟ್ರೋಫಿ ಅಕ್ಟೋಬರ್ 11ರಂದು ಆರಂಭವಾಗಲಿದೆ ಎಂದರು.

ಆಟಗಾರರ ಆರೋಗ್ಯಕ್ಕೆ ಆದ್ಯತೆ: ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಬಗ್ಗೆ ವಿವರ ನೀಡಿದ್ದು, '' ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಬಳಿಕ ವಿಜಯ್ ಹಜಾರೆ ಟ್ರೋಫಿಯೊಂದಿಗೆ ವೈಟ್ ಬಾಲ್ ಪಂದ್ಯಾವಳಿಗಳು ಪ್ರಮುಖವಾಗಿರುತ್ತವೆ. ಇದರ ನಂತರ ರಣಜಿ ಟ್ರೋಫಿಯು ಅಂತಿಮ ಎರಡು ಲೀಗ್ ಪಂದ್ಯಗಳೊಂದಿಗೆ ಪುನರಾರಂಭಗೊಳ್ಳಲಿದೆ, ಇದು ನಾಕೌಟ್ ಹಂತಗಳಲ್ಲಿ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ, ಆಟಗಾರರ ಆರೋಗ್ಯಕ್ಕೆ ಆದ್ಯತೆ ನೀಡಲು, ಪಂದ್ಯಗಳ ನಡುವೆ ದೀರ್ಘ, ಮಧ್ಯಂತರ ವಿರಾಮವನ್ನು ಕೊಡಲಾಗಿದೆ. ಇದರಿಂದ ಚೇತರಿಕೆಗೆ ಸಾಕಷ್ಟು ಸಮಯವನ್ನು ನೀಡಬಹುದು ಮತ್ತು ನಿರಂತರ ಅತ್ಯುತ್ತಮ ಪ್ರದರ್ಶನವನ್ನು ಸಾಧಿಸಬಹುದು‘‘ ಎಂದು ಹೇಳಿದ್ದಾರೆ

ಇದರೊಂದಿಗೆ, ಎಲ್ಲಾ ಮಹಿಳಾ ಚಾಲೆಂಜರ್ ಪಂದ್ಯಾವಳಿಗಳು, ಏಕದಿನ, ಟಿ-20 ಮತ್ತು ಬಹು-ದಿನದ ಸ್ವರೂಪಗಳಲ್ಲಿ ರಾಷ್ಟ್ರೀಯ ಆಯ್ಕೆದಾರರು ಆಯ್ಕೆ ಮಾಡಿದ ತಂಡಗಳನ್ನು ಒಳಗೊಂಡಿರುತ್ತವೆ. ಇದಲ್ಲದೇ, ಸಿಕೆ ನಾಯ್ಡು ಟ್ರೋಫಿಯಲ್ಲಿ ಸಮತೋಲಿತ ಪ್ರದರ್ಶನವನ್ನು ಉತ್ತೇಜಿಸುವ ಉದ್ದೇಶದಿಂದ ಪರಿಷ್ಕೃತ ಅಂಕಗಳ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಇದು ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಕೌಶಲ್ಯಕ್ಕಾಗಿ ನೀಡಲಾಗುವ ಅಂಕಗಳು, ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಅಥವಾ ಸಂಪೂರ್ಣ ಗೆಲುವು ಸಾಧಿಸಲು ಅಂಕಗಳನ್ನು ಒಳಗೊಂಡಿರುತ್ತದೆ. ಹೊಸ ಅಂಕಗಳ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಋತುವಿನ ನಂತರ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಹೊಸ ನೀತಿಯಂತೆ ಸಿಕೆ ನಾಯ್ಡು ಟ್ರೋಫಿ ಪಂದ್ಯಗಳಿಗೆ ಟಾಸ್ ರದ್ದುಗೊಳಿಸಲಾಗುವುದು ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ. ಬದಲಿಗೆ ಭೇಟಿ ನೀಡುವ ತಂಡವು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವ ಹಕ್ಕನ್ನು ಹೊಂದಿರುತ್ತದೆ. ಹವಾಮಾನ ಸಂಬಂಧಿತ ಅಡಚಣೆಗಳಿಂದ ಪಂದ್ಯಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗಿದೆ. ರಣಜಿ ಟ್ರೋಫಿಯನ್ನು ಎಲೈಟ್ ಮತ್ತು ಪ್ಲೇಟ್ ಫಾರ್ಮ್ಯಾಟ್‌ಗಳು ಮತ್ತು ಹೋಮ್ ಮತ್ತು ಎವೇ ಫಾರ್ಮ್ಯಾಟ್‌ನಲ್ಲಿ ಆಡಲಾಗುತ್ತದೆ.

  • ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ದೇಶೀಯ ಟಿ20 ಸ್ಪರ್ಧೆಯು ನವೆಂಬರ್ 23ರಿಂದ ಪ್ರಾರಂಭವಾಗಲಿದ್ದು, ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿಶಾಖಪಟ್ಟಣಂ, ಇಂದೋರ್, ಮುಂಬೈ, ರಾಜ್‌ಕೋಟ್ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ನಾಕೌಟ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
  • ದೇಶೀಯ ಲಿಸ್ಟ್-ಎ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿ ಜೈಪುರ, ಅಹಮದಾಬಾದ್, ವೈಜಾಗ್, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ನಾಕ್‌ಔಟ್ ಪಂದ್ಯಗಳು ವಡೋದರಾದಲ್ಲಿ ನಡೆಯಲಿವೆ. ಹಾಲಿ ರಣಜಿ ಟ್ರೋಫಿ ಚಾಂಪಿಯನ್ಸ್ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವೆ ನಡೆಯುವ ಇರಾನಿ ಕಪ್ ಅಕ್ಟೋಬರ್ 1ರಿಂದ ಮುಂಬೈ ಅಥವಾ ಬೇರೆ ಸ್ಥಳದಲ್ಲಿ ನಡೆಯಲಿದೆ.
  • ದುಲೀಪ್ ಟ್ರೋಫಿ ಅನಂತಪುರದಲ್ಲಿ ನಡೆಯಲಿದೆ. ದೇಶೀಯ ದೈತ್ಯ ಮತ್ತು ಹಾಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡವು ಬರೋಡಾ, ಸರ್ವಿಸಸ್, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಮಹಾರಾಷ್ಟ್ರ, ಒಡಿಶಾ ಮತ್ತು ಮೇಘಾಲಯದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ವಿದರ್ಭ ಬಿ ಗುಂಪಿನಲ್ಲಿ ಸ್ಥಾನ ಪಡೆದರೆ, ಬಂಗಾಳ ಮತ್ತು ಮಧ್ಯಪ್ರದೇಶ ಸಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ತಮಿಳುನಾಡು ಮತ್ತು ದೆಹಲಿ ತಂಡಗಳು ಡಿ ಗುಂಪಿನಲ್ಲಿ ಸ್ಥಾನ ಪಡೆದರೆ, ಗೋವಾ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಪ್ಲೇಟ್ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಸೂಪರ್​ ಓವರ್​ನಲ್ಲಿ ಯುಎಸ್​ಗೆ ಐತಿಹಾಸಿಕ ಗೆಲುವು; ಪಾಕಿಸ್ತಾನಕ್ಕೆ ಮುಖಭಂಗ - USA Beats Pakistan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.