ನವದೆಹಲಿ: ಜುಲೈನಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಮತ್ತು ಚುಟುಕು ಸರಣಿಗೆ ನೋಯ್ಡಾದ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಭಾರತದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮೋದನೆ ನೀಡಿದ್ದರಿಂದ ಕ್ರಿಕೆಟ್ ಲೋಕದಲ್ಲಿ ಇದೊಂದು ಹೊಸ ಅಧ್ಯಾಯ ಎಂದು ಬಿಂಬಿಸಲಾಗುತ್ತದೆ. ಏಕದಿನ ಸರಣಿಯು ಜುಲೈ 25 ರಿಂದ ಪ್ರಾರಂಭವಾಗಲಿದ್ದು, T20 ಪಂದ್ಯಗಳು ಆಗಸ್ಟ್ 2-6 ರವರೆಗೆ ನಡೆಯಲಿವೆ. ಜು. 22 ರಂದು ಭಾರತಕ್ಕೆ ಆಗಮಿಸಲಿರುವ ಬಾಂಗ್ಲಾ ತಂಡವು ಆ. 7 ರಂದು ಭಾರತದಿಂದ ತೆರಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸುದೀರ್ಘ ನಾಲ್ಕು ವರ್ಷಗಳ ನಂತರ, ಅಫ್ಘಾನಿಸ್ತಾನವು ಈ ಸರಣಿ ಆಡಲು ಗ್ರೇಟರ್ ನೋಯ್ಡಾದ ಶಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣಕ್ಕೆ ಆಗಮಿಸಲಿದೆ. ಚುಟುಕು ಪಂದ್ಯ ಸೇರಿದಂತೆ ಮೂರು ಏಕದಿನ ಸರಣಿಗಳಿಗೆ ಆತಿಥ್ಯ ವಹಿಸಲು ಬಿಸಿಸಿಐ ಅನುಮೋದನೆ ನೀಡಿದ್ದರಿಂದ ಉಭಯ ತಂಡಗಳು ಈಗಾಗಲೇ ತಯಾರಿ ಸಹ ಮಾಡಿಕೊಂಡಿದೆ. ಭಾರತಕ್ಕೆ ಆಗಮಿಸಲಿರುವ ಎರಡೂ ತಂಡಗಳು ಕೆಲವು ದಿನಗಳ ಕಾಲ ಅಭ್ಯಾಸ ನಡೆಸಲಿದ್ದು, ಅದಕ್ಕೆ ಕ್ರೀಡಾಂಗಣಗಳನ್ನು ಸಹ ಮೀಸಲು ಇಡಲಾಗಿದೆ.
ಬಿಸಿಸಿಐ ಅಫ್ಘಾನಿಸ್ತಾನಕ್ಕೆ ಗ್ರೇಟರ್ ನೋಯ್ಡಾ ಮತ್ತು ಕಾನ್ಪುರದಲ್ಲಿ ಎರಡು ಹೋಮ್ ಗ್ರೌಂಡ್‌ಗಳನ್ನು ಈಗಾಗಲೇ ಮಂಜೂರು ಸಹ ಮಾಡಿದೆ ಎಂಬ ಮಾಹಿತಿ ಇದೆ. 2015 ರಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಮ್ಮ ತವರು ಪಂದ್ಯಗಳಿಗೆ ಭಾರತೀಯ ಮೈದಾನಗಳನ್ನು ಬಳಸಲು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದವು. ಅದರಂತೆ ಅಫ್ಘಾನಿಸ್ತಾನ ತನ್ನ ತವರು ಪಂದ್ಯಗಳನ್ನು ಡೆಹ್ರಾಡೂನ್, ಲಖನೌ ಮತ್ತು ನೋಯ್ಡಾ ಕ್ರೀಡಾಂಗಣದಲ್ಲಿ ಆಡಿತ್ತು.
ಆದರೆ, ಗ್ರೇಟರ್ ನೋಯ್ಡಾ ಮೈದಾನದಲ್ಲಿ ಅಫ್ಘಾನಿಸ್ತಾನ ತಂಡ ಆಡುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2015 ರಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೋಯ್ಡಾದ ಶಾಹಿದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ತಮ್ಮ ತವರು ಪಂದ್ಯಗಳಿಗೆ ಭಾರತೀಯ ಮೈದಾನಗಳನ್ನು ಬಳಸಲು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದವು. ಅಂದಿನಿಂದ ಅಫ್ಘಾನಿಸ್ತಾನವು ಡೆಹ್ರಾಡೂನ್, ಲಖನೌ ಮತ್ತು ಗ್ರೇಟರ್ ನೋಯ್ಡಾದ ಏಕಾನಾ ಸ್ಟೇಡಿಯಂನಲ್ಲಿ ತಮ್ಮ ತವರು ಪಂದ್ಯಗಳನ್ನು ಆಡಿದೆ. 2017ರಲ್ಲಿ ಐರ್ಲೆಂಡ್ ವಿರುದ್ಧ ಆಡಿದ್ದ ಅಫ್ಘಾನಿಸ್ತಾನ, ಕೊನೆಯದಾಗಿ 2020ರಲ್ಲಿ ಇದೇ ಸ್ಥಳದಲ್ಲಿ ಕಣಕ್ಕಿಳಿದಿದ್ದರು. ನಾಲ್ಕು ವರ್ಷಗಳ ನಂತರ ಅಫ್ಘಾನಿಸ್ತಾನ ತಂಡಕ್ಕೆ ಗ್ರೇಟರ್ ನೋಯ್ಡಾದ ಶಾಹಿದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ.
ಸಂಭಾವ್ಯ ಸರಣಿಯ ವೇಳಾಪಟ್ಟಿ: ಭಾರತದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಆಡುವ ತವರು ಸರಣಿಯ ವೇಳಾಪಟ್ಟಿ ಹೀಗಿದೆ.
ದಿನಾಂಕ | ಪಂದ್ಯ (ಸಂಭಾವ್ಯ) |
25 ಜುಲೈ | 1ನೇ ಏಕದಿನ ಪಂದ್ಯ |
27 ಜುಲೈ | 2ನೇ ಏಕದಿನ ಪಂದ್ಯ |
30 ಜುಲೈ | 3ನೇ ಏಕದಿನ ಪಂದ್ಯ |
2 ಆಗಸ್ಟ್ | 1ನೇ ಟಿ20ಐ |
4 ಆಗಸ್ಟ್ | 2ನೇ ಟಿ20ಐ |
6 ಆಗಸ್ಟ್ | 3ನೇ ಟಿ20ಐ |
ಇದನ್ನೂ ಓದಿ: ಟಿ20 ವಿಶ್ವಕಪ್: ಜಯದ ಅಂಚಿನಲ್ಲಿ ಎಡವಿದ ಇಂಗ್ಲೆಂಡ್; ಗೆದ್ದು ಬೀಗಿದ ಹರಿಣಗಳು - South Africa Defeats England