SMAT 2024: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಭಾಗವಾಗಿ ಇಂದು ನಡೆದ ಬರೋಡಾ ಮತ್ತು ಸಿಕ್ಕಿಂ ತಂಡಗಳ ನುಡವಿನ ಟಿ20 ಪಂದ್ಯದಲ್ಲಿ ಕೃನಾಲ್ ಪಾಂಡ್ಯ ನೇತೃತ್ವದ ಬರೋಡಾ ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬರೋಡಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. ಇದರೊಂದಿಗೆ ಒಟ್ಟಾರೆ ಟಿ20 ಸ್ವರೂಪದಲ್ಲಿ ಅತೀ ಹೆಚ್ಚು ಸ್ಕೋರ್ ದಾಖಲಿಸಿದ ತಂಡವಾಗಿ ಇತಿಹಾಸ ನಿರ್ಮಿಸಿತು.
ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಈ ದಾಖಲೆ ಜಿಂಬಾಬ್ವೆ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆ ಜಾಂಬಿಯಾ ವಿರುದ್ಧ 344 ರನ್ ಗಳಿಸಿತ್ತು. ಇದೀಗ ಬರೋಡಾ ಈ ದಾಖಲೆ ಮುರಿದು ಹಾಕಿದೆ. ಬರೋಡಾ ಪರ, ಭಾನು ಪಾನಿಯಾ ಕೇವಲ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 134 ರನ್ ಸಿಡಿಸಿದರು.
Record Alert 🚨
— BCCI Domestic (@BCCIdomestic) December 5, 2024
349 runs 😮, 37 sixes 🔥
Baroda have rewritten the history books in Indore! They smashed 349/5 against Sikkim, the highest total in T20 history, & set a new record for most sixes in an innings - 37 👏#SMAT | @IDFCFIRSTBank
Scorecard: https://t.co/otTAP0gZsD pic.twitter.com/ec1HL5kNOF
ಜೊತೆಗೆ, ಶಾಶ್ವತ್ ರಾವತ್ (16 ಎಸೆತಗಳಲ್ಲಿ 43), ಅಭಿಮನ್ಯು ಸಿಂಗ್ (17 ಎಸೆತಗಳಲ್ಲಿ 53), ಶಿವಾಲಿಕ್ ಶರ್ಮಾ (17 ಎಸೆತಗಳಲ್ಲಿ 55) ಮತ್ತು ವಿಷ್ಣು ಸೋಲಂಕಿ (16 ಎಸೆತಗಳಲ್ಲಿ 50) ಆಕ್ರಮಣಕಾರಿ ಆಟವಾಡಿದರು. ಸಿಕ್ಕಿಂ ಬೌಲರ್‌ಗಳಾದ ಪಲ್ಜೋರ್ ತಮಾಂಗ್ ಮತ್ತು ರೋಷನ್ ಕುಮಾರ್ ಎರಡು ವಿಕೆಟ್ ಪಡೆದರು. ತರುಣ್ ಶರ್ಮಾ ಒಂದು ವಿಕೆಟ್ ಉರುಳಿಸಿದರು.
ಈ ಬೃಹತ್ ಗುರಿ ಬೆನ್ನತ್ತಿದ್ದ ಸಿಕ್ಕಿಂ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 86 ರನ್ಗಳಿಗೆ ಸೀಮಿತವಾಯಿತು. ಇದರೊಂದಿಗೆ ಬರೋಡಾ 263 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸಿಕ್ಕಿಂ ಪರ, ರೋಬಿನ್ ಲಿಂಬೋ (20), ಪರ್ತ್ ಪಲಾವಟ್ (12), ಅಂಕುರ್ ಮಾಲಿಕ್ (18), ಲೀ ಯಂಗ್(10) ಬಿಟ್ಟರೆ ಉಳಿದ ಬ್ಯಾಟರ್ಗಳಾದ ಪ್ರಾಣೇಶ್ ಚೆಟ್ರಿ (1), ಆಶೀಶ್ (6), ತಮಾಂಗ್ (7), ರೋಶನ್ ಕುಮಾರ್ (6) ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದರು.
ಬರೋಡಾ ಪರ, ಅಶ್ವಿನ್ ಕುಮಾರ್, ಮಹೇಶ್ ತಲಾ 2 ವಿಕೆಟ್ ಪಡೆದರೇ, ಕೃನಾಲ್ ಪಾಂಡ್ಯಾ, ಅತಿತ್ ಶೇಠ್ ಅಭಿಮನ್ಯು ಸಿಂಗ್ ತಲಾ ಒಂದು ವಿಕೆಟ್ ಉರುಳಿಸಿದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ತಂಡವೊಂದು ಇನಿಂಗ್ಸ್‌ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು.
ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತಂಡಗಳು:
- ಬರೋಡಾ 349/5 ವಿರುದ್ಧ ಸಿಕ್ಕಿಂ - 2024
- ಜಿಂಬಾಬ್ವೆ 344/4 ವಿರುದ್ಧ ಜಾಂಬಿಯಾ - 2024
- ನೇಪಾಳ 314/3 ವಿರುದ್ಧ ಮಂಗೋಲಿಯಾ - 2023
- ಭಾರತ 297/6 ವಿರುದ್ಧ ಬಾಂಗ್ಲಾದೇಶ - 2024
ಇದನ್ನೂ ಓದಿ: 2ನೇ ಟೆಸ್ಟ್: ಟೀಂ ಇಂಡಿಯಾಗೆ ಮರಳಲಿರುವ ಪ್ರಮುಖ ಆಟಗಾರರು; ಕನ್ನಡಿಗ ಸೇರಿ ಇಬ್ಬರು ಔಟ್!