Kagiso Rabada 300 Wicket: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅಪರೂಪದ ಸಾಧನೆ ಮಾಡಿದರು. ಟೆಸ್ಟ್ ಸ್ವರೂಪದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ವೃತ್ತಿಜೀವನದಲ್ಲಿ ರಬಾಡ ಕೇವಲ 11,817 ಎಸೆತಗಳಲ್ಲಿ 300 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾ ಬ್ಯಾಟರ್ ಮುಶ್ಫಿಕರ್ ರಹೀಮ್ ಅವರ ವಿಕೆಟ್ ಪಡೆದು ಈ ಸಾಧನೆ ಮಾಡಿದರು. ಈ ಅನುಕ್ರಮದಲ್ಲಿ ಪಾಕಿಸ್ತಾನದ ವೇಗಿ ವಕಾರ್ ಯೂನಿಸ್ (12,602 ಎಸೆತ) ಅವರನ್ನು ಹಿಂದಿಕ್ಕಿದರು.
2015ರಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದ್ದ ರಬಾಡ ಇದುವರೆಗೂ 65 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 302 ವಿಕೆಟ್‌ಗಳನ್ನು ಪಡೆದಿದ್ದು, ಬ್ಯಾಟಿಂಗ್‌ನಲ್ಲಿ 932 ರನ್ ಗಳಿಸಿದ್ದಾರೆ.
Kagiso Rabada gets his 300th test wicket! ⚡
— Proteas Men (@ProteasMenCSA) October 21, 2024
Congratulations to Kagiso Rabada on reaching a monumental milestone, delivered at 13.5 overs in today’s Test against Bangladesh! 👏🏏🇿🇦
Your dedication to the craft and game-changing pace continues to inspire the nation.
Here’s to… pic.twitter.com/5b6IlTOfQ1
ಸ್ಟ್ರೈಕ್ ರೇಟ್‌ನಲ್ಲೂ ಫಸ್ಟ್: ರಬಾಡ ಎಲ್ಲ ಬೌಲರ್ಗಳಿಗಿಂತ ಬ್ಯಾಟಿಂಗ್‌ನಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂಬುದು ಗಮನಾರ್ಹ. ಸದ್ಯ ಇವರ ಸ್ಟ್ರೈಕ್ ರೇಟ್ 39.3 ಆಗಿದೆ. ಈ ಅಂಕಿಅಂಶದಂತೆ ರಬಾಡ ಟೆಸ್ಟ್‌ನಲ್ಲಿ ಪ್ರತಿ 39 ಎಸೆತಗಳಿಗೆ ಒಂದು ವಿಕೆಟ್ ಪಡೆದಂತಾಗಿದೆ.
ಅಲೆನ್ ಡೊನಾಲ್ಡ್ ನಂತರ ವೇಗವಾಗಿ 300 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮೂರನೇ ದಕ್ಷಿಣ ಆಫ್ರಿಕಾದ ವೇಗಿ ಎಂಬ ಹಿರಿಮೆಯೂ ರಬಾಡ ಅವರದಾಗಿದೆ. ಈ ಪಟ್ಟಿಯಲ್ ಡೇಲ್ ಸ್ಟೇನ್ ಅಗ್ರಸ್ಥಾನಿ. ಇವರು 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪೂರ್ಣಗೊಳಿಸಿದ್ದರು. ನಂತರ 63 ಟೆಸ್ಟ್‌ನಲ್ಲಿ ಡೊನಾಲ್ಡ್ ಈ ಸಾಧನೆ ಮಾಡಿದ್ದರು. ಅಲ್ಲದೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಕ್ಷಿಣ ಆಫ್ರಿಕಾದ ಆರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಡೇಲ್ ಸ್ಟೇನ್ (439) ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ಬೌಲರ್‌ಗಳು:
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)- 11817 ಎಸೆತ
ವಕಾರ್ ಯೂನಿಸ್ (ಪಾಕಿಸ್ತಾನ)- 12602 ಎಸೆತ
ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)- 12605 ಎಸೆತ
ಅಲೆನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ)- 13672 ಎಸೆತ
ಅತಿ ಹೆಚ್ಚು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾ ಆಟಗಾರರು:
ಡೇಲ್ ಸ್ಟೇನ್ (93 ಪಂದ್ಯ)- 439 ವಿಕೆಟ್
ಶಾನ್ ಪೊಲಾಕ್ (108 ಪಂದ್ಯ)- 421 ವಿಕೆಟ್
ಮಖಯಾ ಎನ್ತಿನಿ (101 ಪಂದ್ಯ)- 390 ವಿಕೆಟ್
ಅಲನ್ ಡೊನಾಲ್ಡ್ (72 ಪಂದ್ಯ)- 330 ವಿಕೆಟ್
ಮೊರ್ನೆ ಮೊರ್ಕೆಲ್ (86 ಪಂದ್ಯ)- 309 ವಿಕೆಟ್
ಕಗಿಸೊ ರಬಾಡ (65 ಪಂದ್ಯ)- 302* ವಿಕೆಟ್
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್: ಭಾರತ ತಂಡದಿಂದ ಪಂತ್ ಹೊರಗುಳಿಯುವ ಸಾಧ್ಯತೆ