ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳಿಂದ ಜಯಭೇರಿ ಬಾರಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲೇ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶದ ಮೊದಲ ಗೆಲುವು ಇದಾಗಿದೆ. ಐದನೇಯ ದಿನದಾಟದಂದು ಪಾಕ್ ನೀಡಿದ್ದ 30 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ವಿಕೆಟ್ ನಷ್ಟವಿಲ್ಲದೇ ಪಂದ್ಯವನ್ನು ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಕೆಟ್ಟ ಆರಂಭವನ್ನು ಪಡೆದಿತ್ತು. 16 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ನೆರವಿನಿಂದ ಅಜೇಯವಾಗಿ 171 ರನ್ ಗಳಿಸಿದರೇ, ಸೌದ್ ಶಕೀಲ್ 9 ಬೌಂಡರಿ ನೆರವಿನಿಂದ 141 ರನ್ ಕಲೆಹಾಕಿದರು. ಬಾಂಗ್ಲಾದೇಶ ಪರ ಹಸನ್ ಮಹಮೂದ್ ಮತ್ತು ಶೋರಿಫುಲ್ ಇಸ್ಲಾಂ ತಲಾ 2 ವಿಕೆಟ್ ಪಡೆದು ಮಿಂಚಿದರು.
Bangladesh 🆚 Pakistan | 1st Test | Rawalpindi
— Bangladesh Cricket (@BCBtigers) August 25, 2024
Bangladesh won by 10 wickets 👏🇧🇩
PC: PCB#BCB #Cricket #BDCricket #Bangladesh #PAKvBAN #WTC25 pic.twitter.com/yqNmaQ6rsL
ಬಳಿಕ ಬಾಂಗ್ಲಾದೇಶ ಕೂಡ ಭರ್ಜರಿ ಪ್ರದರ್ಶನ ತೋರಿ ಮೊದಲ ಇನ್ನಿಂಗ್ಸ್‌ನಲ್ಲಿ 565ರನ್ ಗಳಿಸಿತ್ತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಸಾಧಿಸಿತು. ತಂಡದ ಪರ ಮುಶ್ಫಿಕರ್ ರಹೀಮ್ 191 ರನ್‌ಗಳ ಇನಿಂಗ್ಸ್ ಆಡಿದರು. ಇದು ರಹೀಮ್ ಅವರ ಟೆಸ್ಟ್ ವೃತ್ತಿ ಜೀವನದ 11ನೇ ಶತಕವಾಗಿತ್ತು. ರಹೀಮ್ ತಮ್ಮ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಉಳಿದಂತೆ ಶಾದ್ಮನ್ ಇಸ್ಲಾಂ (97), ಮಹೇದಿ ಹಸನ್ ಮಿರಾಜ್ (77), ಲಿಟನ್ ದಾಸ್ (56) ಮತ್ತು ಮೊಮಿನುಲ್ ಹಕ್ ಅರ್ಧಶತಕಗಳ ಕೊಡುಗೆ ನೀಡಿದರು. ಪಾಕಿಸ್ತಾನ ಪರ ನಸೀಮ್ ಶಾ ಮೂರು ವಿಕೆಟ್ ಪಡೆದರೇ ಖುರ್ರಂ ಶಹಜಾದ್, ಮೊಹಮ್ಮದ್ ಅಲಿ ಮತ್ತು ಶಾಹೀನ್ ಅಫ್ರಿದಿ ತಲಾ 2 ವಿಕೆಟ್ಗಳನ್ನು ಉರುಳಿಸಿದರು.
Bangladesh win the first Test by 10 wickets 🏏#PAKvBAN | #TestOnHai pic.twitter.com/436t7yBaQk
— Pakistan Cricket (@TheRealPCB) August 25, 2024
ನಂತರ ಎರಡನೇ ಇನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಪಡೆದಿದ್ದ ಪಾಕ್ ಹೆಚ್ಚಿನ ಗುರಿ ನೀಡುವ ಒತ್ತಡದಲ್ಲಿ ಬಾಂಗ್ಲಾದ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ಬಲೆಗೆ ಬಿದ್ದು 146 ರನ್ಗಳಿಗೆ ಕುಸಿಯಿತು. ಪಾಕ್ ಪರ ರಿಜ್ವಾನ್ ಮತ್ತೊಮ್ಮೆ ಮಿಂಚಿ 51 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಉಳಿದಂತೆ ಅಬ್ದುಲ್ಲಾ ಶಫೀಕ್ 37 ರನ್ ಗಳಿಸಿದರೆ, ಬಾಬರ್ ಅಜಮ್ 22 ರನ್ ಮತ್ತು ನಾಯಕ ಶಾನ್ ಮಸೂದ್ 14 ರನ್ ಗಳಿಸಿದರು. ಇವರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಾಕ್ ಕೇವಲ 30 ರನ್‌ಗಳ ಗುರಿಯನ್ನು ನೀಡಿತು. ಬಾಂಗ್ಲಾ ಪರ ಮೆಹದಿ ಹಸನ್ 4, ಶಕೀಬ್ ಅಲ್ ಹಸನ್ 3, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್ ಮತ್ತು ನಹಿದ್ ರಾಣಾ ತಲಾ 1 ವಿಕೆಟ್ ಪಡೆದರು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ 6.3 ಓವರ್ಗಳಲ್ಲಿ ಗುರಿ ತಲುಪಿ ಗೆಲುವಿನ ಪತಾಕೆ ಹಾರಿಸಿತು.
ಬಾಂಗ್ಲಾಗೆ ಮೊದಲ ಗೆಲುವು: 2001ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬಾಂಗ್ಲಾದೇಶ ಅಲ್ಲಿಂದೀಚೆಗೆ ಪಾಕಿಸ್ತಾನದ ವಿರುದ್ಧ ಒಟ್ಟು 15 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಆಡಿದ 12 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಒಂದು ಪಂದ್ಯ ಡ್ರಾಗೊಂಡರೆ ಒಂದು ಪಂದ್ಯ ರದ್ದುಗೊಂಡಿತ್ತು.