ETV Bharat / sports

ಕಮಿನ್ಸ್ ಹ್ಯಾಟ್ರಿಕ್​, ವಾರ್ನರ್​ ಅಬ್ಬರ: ಬಾಂಗ್ಲಾದೇಶಕ್ಕೆ ಸೋಲುಣಿಸಿದ ಕಾಂಗರೂ ಪಡೆ - Australia Defeats Bangladesh

author img

By ANI

Published : Jun 21, 2024, 11:20 AM IST

ಆಂಟಿಗುವಾಲ್ಲಿ ನಡೆದ ಟಿ20 ವಿಶ್ವಕಪ್​ ಪಂದ್ಯಾವಳಿಯ ಸೂಪರ್​ - 8 ಪಂದ್ಯದಲ್ಲಿ ಆಸ್ಟ್ರೇಲಿಯಾವು ಬಾಂಗ್ಲಾದೇಶ ತಂಡವನ್ನು ಸೋಲಿಸಿದೆ.

australia team
ಆಸ್ಟ್ರೇಲಿಯಾ ತಂಡದ ಆಟಗಾರರು (Photo: IANS)

ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್ ​- 8 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾವು 28 ರನ್​​ಗಳ ಜಯ ದಾಖಲಿಸಿತು. ವೇಗಿ ಪ್ಯಾಟ್​ ಕಮಿನ್ಸ್​ ಹ್ಯಾಟ್ರಿಕ್​ ವಿಕೆಟ್​ ಹಾಗೂ ಡೆವಿಡ್​ ವಾರ್ನರ್​ ಅರ್ಧಶತಕ ದಾಖಲಿಸಿದ್ದಲ್ಲದೇ, ಮಳೆಯಿಂದಾಗಿ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ ಆಸೀಸ್​ ಗೆಲುವಿನ ನಗೆ ಬೀರಿತು.

ಟಾಸ್​​ ಗೆದ್ದ ನಾಯಕ ಮಿಚೆಲ್​ ಮಾರ್ಷ್​ ಮೊದಲು ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ದಾಳಿಗಿಳಿದ ವೇಗಿ ಮಿಚೆಲ್​ ಸ್ಟಾರ್ಟ್​ ಮೂರನೇ ಎಸೆತದಲ್ಲೇ ತಂಝಿದ್ ಹಸನ್​ರನ್ನು (0) ಬೌಲ್ಡ್​ ಮಾಡಿ ಬಾಂಗ್ಲಾಕ್ಕೆ ಆರಂಭಿಕ ಶಾಕ್​ ನೀಡಿದರು. ಬಳಿಕ ನಿಧಾನಗತಿಯ ಆಟವಾಡಿದ ಲಿಟನ್​ ದಾಸ್​ (16) ಹಾಗೂ ನಾಯಕ ನಜ್ಮುಲ್ ಹೊಸೈನ್ ಶಾಂಟೋ (41) 58 ರನ್​ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಲಿಟನ್​ ಔಟಾದ ಬೆನ್ನಲ್ಲೇ ಬಾಂಗ್ಲಾದೇಶ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಈ ಹಂತದಲ್ಲಿ ಆ್ಯಡಂ ಜಂಪಾ (24ಕ್ಕೆ 2)​ ಎರಡು ವಿಕೆಟ್​ ಕಿತ್ತು ಆಸೀಸ್​ಗೆ ಮೇಲುಗೈ ಒದಗಿಸಿದರು. ಬಳಿಕ ತೌಹಿದ್ ಹೃದಯ್ 40 ರನ್ (28 ಬಾಲ್​)​ ಗಳಿಸಿ ತಂಡಕ್ಕೆ ನೆರವಾದರೆ, ವೇಗಿ ಟಸ್ಕಿನ್​ ಅಹ್ಮದ್​ 13 ರನ್​ ಕಾಣಿಕೆ ನೀಡಿದರು. ಶಕಿಬ್​ (8) ಸೇರಿದಂತೆ ಇನ್ನುಳಿದ ಬ್ಯಾಟರ್​ಗಳು ಎರಡಂಕಿ ಮೊತ್ತ ತಲುಪುವಲ್ಲಿ ವಿಫಲರಾದರು.

ರಿಶದ್​ ಹೊಸೈನ್​,​ ಅನುಭವಿ ಮೊಹಮ್ಮದುಲ್ಲಾ ತಲಾ 2 ರನ್​ ಹಾಗು ಮಹೆದಿ ಹಸನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ಬಾಂಗ್ಲಾ ತಂಡ 140 ರನ್​ ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಚೇಸಿಂಗ್​ : 141 ರನ್​ ಗುರಿ ಬೆನ್ನಟ್ಟಿದ ಕಾಂಗರೂಪಡೆಗೆ ಅಬ್ಬರದ ಆರಂಭ ಸಿಕ್ಕಿತು. ಡೆವಿಡ್​ ವಾರ್ನರ್​ (53*) ಹಾಗೂ ಟ್ರಾವಿಸ್​ ಹೆಡ್​ ಮೊದಲ ವಿಕೆಟ್​ಗೆ 6.5 ಓವರ್​ಗಳಲ್ಲಿ 65 ರನ್​ ಸೇರಿಸಿದರು. ಈ ಹಂತದಲ್ಲಿ ಹೆಡ್​ 31 ರನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ನಾಯಕ ಮಿಚೆಲ್​ ಮಾರ್ಷ್​ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.

ಬಳಿಕ ವಾರ್ನರ್​ ಜೊತೆಗೂಡಿದ ಗ್ಲೆನ್​ ಮ್ಯಾಕ್ಸ್​ವೆಲ್​ ತಲಾ ಸಿಕ್ಸರ್​ ಹಾಗೂ ಬೌಂಡರಿ ಸಹಿತ 14* ರನ್​ ಗಳಿಸಿದ್ದರು. ಈ ವೇಳೆ ಮಳೆ ಆರಂಭವಾಯಿತು. ಆಸೀಸ್​ 11.2 ಓವರ್​ಗಳಲ್ಲಿ 2 ವಿಕೆಟ್​ಗೆ 100 ರನ್​ ಪೇರಿಸಿತ್ತು. ತದನಂತರ ವರುಣನ ಆರ್ಭಟ ನಿಲ್ಲದ ಹಿನ್ನೆಲೆಯಲ್ಲಿ ಡಕ್ವರ್ತ್​ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡವನ್ನು 28 ರನ್​ಗಳಿಂದ ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಸೂಪರ್​-8 ಹಂತದಲ್ಲಿ ಮಾರ್ಷ್​ ಪಡೆ ಗೆಲುವಿನ ಆರಂಭ ಪಡೆಯಿತು.

ಕಮಿನ್ಸ್​ ಹ್ಯಾಟ್ರಿಕ್​: ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮಿನ್ಸ್ ಹ್ಯಾಟ್ರಿಕ್​ ವಿಕೆಟ್​ ಕಿತ್ತು ಸಂಭ್ರಮಿಸಿದರು. ಈ ಮೂಲಕ ಚುಟುಕು ವಿಶ್ವಕಪ್​ನಲ್ಲಿ ಮಾಜಿ ಸ್ಟಾರ್​ ವೇಗಿ ಬ್ರೆಟ್​ ಲೀ ಸಾಧನೆ ಸರಿಗಟ್ಟಿದರು. ಲೀ 2007ರ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ್ದರು.

17ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಮೊಹಮ್ಮದುಲ್ಲಾ ಹಾಗೂ ಮಹೆದಿ ಹಸನ್​ ವಿಕೆಟ್​ ಕಿತ್ತ ಕಮಿನ್ಸ್​, 20ನೇ ಓವರ್​ನ ಮೊದಲ ಬಾಲ್​ನಲ್ಲಿ ಹೃದಯ್​ ಅವರನ್ನು ಪೆವಿಲಿಯನ್​ಗೆ ಅಟ್ಟುವ ಮೂಲಕ ಈ ಸಾಧನೆಗೆ ಪಾತ್ರರಾದರು. ಟಿ-20 ವಿಶ್ವಕಪ್​ನಲ್ಲಿ ಈ ದಾಖಲೆ ಬರೆದ ಏಳನೇ ಬೌಲರ್​ ಆಗಿ ಹೊರಹೊಮ್ಮಿದರು. ಈ ಹಿಂದೆ ಬ್ರೆಟ್​​ ಲೀ (2007), ಕರ್ಟಿಸ್ ಕ್ಯಾಂಫರ್ (2021), ವನಿಂದು ಹಸರಂಗಾ (2021), ಕಗಿಸೊ ರಬಾಡ (2021), ಕಾರ್ತಿಕ್ ಮೇಯಪ್ಪನ್ (2022) ಹಾಗೂ ಮತ್ತು ಜೋಶ್ ಲಿಟಲ್ (2022) ಹ್ಯಾಟ್ರಿಕ್​ ವಿಕೆಟ್​ ಗಳಿಸಿದ್ದಾರೆ.

ಇದನ್ನೂ ಓದಿ: ಮಿಂಚಿದ ಸೂರ್ಯ, ಬುಮ್ರಾ ಮಾರಕ ದಾಳಿ: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ - India Beats Afghanistan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.