ETV Bharat / sports

ಟಿ20 ವಿಶ್ವಕಪ್​ನಿಂದ ಹೊರಬಿದ್ದ ಆಸ್ಟ್ರೇಲಿಯಾ: ಕ್ರಿಕೆಟ್‌ ವೃತ್ತಿ ಬದುಕಿಗೆ ವಾರ್ನರ್ ವಿದಾಯ - David Warner Retirement

author img

By PTI

Published : Jun 25, 2024, 6:10 PM IST

ಏಕದಿನ, ಟೆಸ್ಟ್​ ಕ್ರಿಕೆಟ್​​ಗೆ ಗುಡ್​​ಬೈ ಹೇಳಿದ್ದ ಡೇವಿಡ್​ ವಾರ್ನರ್​ ಇದೀಗ ಟಿ-20 ಮಾದರಿಯಿಂದಲೂ ಹಿಂದೆ ಸರಿದಿದ್ದಾರೆ. ಪ್ರಸಕ್ತ ಟಿ20 ವಿಶ್ವಕಪ್​ ಅವರ ಕೊನೆಯ ಟೂರ್ನಿಯಾಗಿತ್ತು.

ಡೇವಿಡ್​ ವಾರ್ನರ್ ಕ್ರಿಕೆಟ್​ಗೆ ವಿದಾಯ
ಡೇವಿಡ್​ ವಾರ್ನರ್ (AP)

ಕಿಂಗ್‌ಸ್ಟನ್​​: ಅಫ್ಘಾನಿಸ್ತಾನದ ಎದುರು ಬಾಂಗ್ಲಾದೇಶ ಸೋಲುತ್ತಿದ್ದಂತೆ ಮಾಜಿ ಚಾಂಪಿಯನ್​ ಆಸ್ಟ್ರೇಲಿಯಾ ಟಿ20 ವಿಶ್ವಕಪ್​​ನಿಂದ ಹೊರಬಿತ್ತು. ಇದರೊಂದಿಗೆ ತಂಡದ ಹಿರಿಯ ಕ್ರಿಕೆಟಿಗ ಡೇವಿಡ್​ ವಾರ್ನರ್​ ಅವರ ವೃತ್ತಿಜೀವನವೂ ಅಂತ್ಯ ಕಂಡಿತು.

ಟಿ20 ವಿಶ್ವಕಪ್​ ಬಳಿಕ ಕ್ರಿಕೆಟ್​ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ವಾರ್ನರ್​ ಘೋಷಿಸಿದ್ದರು. ಆಸೀಸ್​ ತಂಡ ವಿಶ್ವಕಪ್​ ಅಭಿಯಾನ ಸೋಲಿನ ಮೂಲಕ ಮುಗಿಸಿದ್ದು, ವಾರ್ನರ್​ ನಿರಾಸೆಯೊಂದಿಗೆ ಕ್ರಿಕೆಟ್​ಗೆ ಗುಡ್​ಬೈ ಹೇಳಿದರು. 37 ವರ್ಷ ವಯಸ್ಸಿನ ವಾರ್ನರ್, 2009ರ ಜನವರಿಯಲ್ಲಿ ಟಿ-20 ಮಾದರಿಗೆ ಪಾದಾರ್ಪಣೆ ಮಾಡಿದ್ದರು.

ಜೂನ್ 24ರಂದು ಭಾರತ ವಿರುದ್ಧ ನಡೆದ ಪಂದ್ಯವು ಅವರ ವೃತ್ತಿ ಬದುಕಿನ ಕೊನೆಯದ್ದಾಯಿತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 24 ರನ್‌ಗಳಿಂದ ಸೋಲು ಕಂಡಿತು. 6 ಎಸೆತಗಳಲ್ಲಿ 6 ರನ್​ ಗಳಿಸಿದ್ದಾಗ ಅವರು ಔಟಾದರು. ಇದೇ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಯಾರೂ ಭಾವಿಸಿರಲಿಲ್ಲ. ಹೀಗಾಗಿ ತಂಡವು ಗಾರ್ಡ್ ಆಫ್​ ಹಾನರ್​ ನೀಡಿರಲಿಲ್ಲ. ಪ್ರೇಕ್ಷಕರು ಕೂಡ ಚಪ್ಪಾಳೆ ತಟ್ಟಿರಲಿಲ್ಲ.

ವಾರ್ನರ್​ ಟಿ20 ದಾಖಲೆಗಳು: ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾದ ಡೇವಿಡ್ ವಾರ್ನರ್​, ತಂಡದ ಪರ ಈವರೆಗೂ 110 ಟಿ20 ಪಂದ್ಯಗಳನ್ನಾಡಿದ್ದಾರೆ. 33.43ರ ಸರಾಸರಿ, 142.47 ಸ್ಟ್ರೈಕ್ ರೇಟ್‌ನಲ್ಲಿ 3,277 ರನ್‌ ಗಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್​ ಗಳಿಸಿದ ಆಟಗಾರ ಮತ್ತು ಟಿ-20 ಇತಿಹಾಸದಲ್ಲಿ ಏಳನೇ ಬ್ಯಾಟರ್​ ಆಗಿದ್ದಾರೆ. ಚುಟುಕು ಮಾದರಿಯಲ್ಲಿ ಅವರು ಒಂದು ಶತಕ ಮತ್ತು 28 ಅರ್ಧಶತಕ ಗಳಿಸಿದ್ದಾರೆ.

ಭಾರತ-ಪಾಕ್​ ಎದುರು ಕೊನೆ ಪಂದ್ಯ: ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದ ವಾರ್ನರ್, ಟಿ-20 ವಿಶ್ವಕಪ್​ ಬಳಿಕ ಎಲ್ಲ ಮಾದರಿಯ ಕ್ರಿಕೆಟ್​ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಅದರಂತೆ ಸೂಪರ್​-8 ಹಂತದಲ್ಲಿ ಭಾರತ ಎದುರಿನ ಪಂದ್ಯವೇ ಕೊನೆಯಾಯಿತು. ವಿಶೇಷವೆಂದರೆ, ಏಕದಿನದಲ್ಲೂ ಅವರು ಭಾರತದ ಎದುರೇ ಅಂತಿಮ ಪಂದ್ಯವಾಡಿದ್ದರು. 2023ರ ಏಕದಿನ ವಿಶ್ವಕಪ್​​ನ ಫೈನಲ್​ನಲ್ಲಿ ಭಾರತದ ಎದುರಿನ ಪಂದ್ಯ ಕೊನೆಯಾಗಿತ್ತು. 2024ರ ಜನವರಿಯಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

15 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ವಾರ್ನರ್​ ಆಸೀಸ್​ ಪರ 112 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 26 ಶತಕ ಮತ್ತು 37 ಅರ್ಧ ಶತಕಗಳೊಂದಿಗೆ 8,786 ರನ್ ಗಳಿಸಿದ್ದಾರೆ. 161 ಏಕದಿನ ಪಂದ್ಯಗಳಿಂದ 45.30 ಸರಾಸರಿಯಲ್ಲಿ 6,932 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕ ಮತ್ತು 33 ಅರ್ಧಶತಕಗಳಿವೆ.

ಎಲ್ಲ ಮಾದರಿಗಳಲ್ಲಿ 49 ಶತಕ, 19 ಸಾವಿರಕ್ಕೂ ಅಧಿಕ ರನ್​ ಗಳಿಸಿರುವ ಆಸೀಸ್​ ಆಟಗಾರ, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸ್ಯಾಂಡ್‌ಪೇಪರ್ ಗೇಟ್ ಹಗರಣಕ್ಕೆ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದರು. ಇದು ಅವರ ವೃತ್ತಿಬದುಕಿನಲ್ಲೊಂದು ಕಪ್ಪುಚುಕ್ಕೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ ಸೆಮಿ ಫೈನಲ್​: ಭಾರತ v/s ಇಂಗ್ಲೆಂಡ್​, ದ.ಆಫ್ರಿಕಾ v/s ಅಫ್ಘಾನಿಸ್ತಾನ; ಪಂದ್ಯಗಳ ವೇಳಾಪಟ್ಟಿ ಹೀಗಿದೆ - T20 WC Semi Final

ETV Bharat Logo

Copyright © 2024 Ushodaya Enterprises Pvt. Ltd., All Rights Reserved.