ETV Bharat / sports

ಅತಿ ಹೆಚ್ಚು ರನ್​ಗಳಿಸಿದ ಏಷ್ಯಾದ ಟಾಪ್​ 5 ಬ್ಯಾಟರ್ಸ್‌​ ಯಾರು ಗೊತ್ತಾ? - Top 5 Five Asian Batters

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಏಷ್ಯಾದ ಟಾಪ್​ 5 ಬ್ಯಾಟರ್​ಗಳ ಯಾರು, ಅವರ ದಾಖಲೆಗಳೇನು ಎಂಬುದರ ಬಗ್ಗೆ ಇಲ್ಲಿದೆ ವಿಶೇಷ ವರದಿ.

ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು
ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು (IANS)
author img

By ETV Bharat Sports Team

Published : Aug 20, 2024, 2:52 PM IST

ನವದೆಹಲಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಆಟಗಾರರು ಯಾರೆಂದು ನಿಮಗೆ ಗೊತ್ತಿದೆಯೇ?. ಈ ಪಟ್ಟಿಯಲ್ಲಿ ಭಾರತದ ಇಬ್ಬರು ಆಟಗಾರರಿದ್ದಾರೆ.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (ANI)

ಸಚಿನ್ ತೆಂಡೂಲ್ಕರ್: 'ಕ್ರಿಕೆಟ್​ ದೇವರು' ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಜ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಅಗ್ರ ಬ್ಯಾಟರ್ ಕೂಡಾ ಹೌದು. ಸಚಿನ್ 475 ಇನಿಂಗ್ಸ್‌ ಮೂಲಕ 21,741 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನೂ ಬರೆದಿದ್ದಾರೆ.

ಕುಮಾರ ಸಂಗಕ್ಕಾರ
ಕುಮಾರ ಸಂಗಕ್ಕಾರ (ANI)

ಕುಮಾರ ಸಂಗಕ್ಕಾರ: ಶ್ರೀಲಂಕಾದ ಮಾಜಿ ನಾಯಕ ಮತ್ತು ಎಡಗೈ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಏಷ್ಯನ್ ಬ್ಯಾಟ್ಸ್‌ಮನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ. 410 ಇನಿಂಗ್ಸ್‌ನಲ್ಲಿ 18,423 ರನ್ ಗಳಿಸಿದ್ದಾರೆ. ಇವರ ಹೆಸರಿನಲ್ಲಿ ಹಲವು ದೊಡ್ಡ ದಾಖಲೆಗಳೂ ಸೇರಿವೆ.

ಮಹೇಲಾ ಜಯವರ್ದನೆ ಮತ್ತು ಸಂಗಕ್ಕಾರ
ಮಹೇಲಾ ಜಯವರ್ಧನೆ ಮತ್ತು ಸಂಗಕ್ಕಾರ (ANI)

ಮಹೇಲಾ ಜಯವರ್ಧನೆ: ಏಷ್ಯನ್ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಶ್ರೀಲಂಕಾದ ಮಹೇಲಾ ಜಯವರ್ಧನೆ. 439 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು 17,386 ರನ್ ಗಳಿಸಿದ್ದಾರೆ. ಏಷ್ಯಾದಲ್ಲಿ ಶ್ರೀಲಂಕಾ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಕೂಡಾ ಹೌದು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (ANI)

ವಿರಾಟ್ ಕೊಹ್ಲಿ: ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. 328 ಇನಿಂಗ್ಸ್‌ ಆಡಿದ್ದು ಇದರಲ್ಲಿ 15,776 ರನ್ ಗಳಿಸಿದ್ದಾರೆ. ವಿರಾಟ್​, ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಬಳಿಕ ಚುಟುಕು ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗಳಲ್ಲಿ ಮಾತ್ರ ಮುಂದುವರೆಯಲಿದ್ದಾರೆ. ಹಾಗಾಗಿ, ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಹೆಚ್ಚಿದೆ.

ಸನತ್​ ಜಯಸೂರ್ಯ
ಸನತ್​ ಜಯಸೂರ್ಯ (ANI)

ಸನತ್ ಜಯಸೂರ್ಯ: ಶ್ರೀಲಂಕಾದ ಸನತ್ ಜಯಸೂರ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಐದನೇ ಕ್ರಿಕೆಟಿಗ. 398 ಇನಿಂಗ್ಸ್‌ನಲ್ಲಿ 13,757 ರನ್ ಪೇರಿಸಿದ್ದಾರೆ. ಸದ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ದುಲೀಪ್​ ಟ್ರೋಫಿಯಲ್ಲಿ ರೋಹಿತ್​, ವಿರಾಟ್​ ಆಡದ್ದಕ್ಕೆ ಗವಾಸ್ಕರ್​ ಅಸಮಾಧಾನ: ಯಾಕೆ ಗೊತ್ತಾ? - Sunil Gavaskar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.