ETV Bharat / sports

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ, ಪಾಕಿಸ್ತಾನ ಮುಖಾಮುಖಿ - ಯಾವ ಚಾನಲ್​ನಲ್ಲಿ ಪ್ರಸಾರ? - IND vs PAK Hockey

author img

By ETV Bharat Sports Team

Published : Sep 14, 2024, 10:33 AM IST

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ನಲ್ಲಿ ಇಂದು ಭಾರತ, ಪಾಕಿಸ್ತಾನ ಎದುರಾಗಲಿವೆ. ಮಧ್ಯಾಹ್ನ 1.15 ರಿಂದ ಪಂದ್ಯ ಆರಂಭವಾಗಲಿದೆ.

ಇಂದು ಭಾರತ, ಪಾಕಿಸ್ತಾನ ಮುಖಾಮುಖಿ
ಇಂದು ಭಾರತ, ಪಾಕಿಸ್ತಾನ ಮುಖಾಮುಖಿ (ANI)

ಮೋಕಿ (ಚೀನಾ): ಪ್ಯಾರಿಸ್ ಒಲಿಂಪಿಕ್ಸ್ 2024ರ ಕಂಚಿನ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಎಲ್ಲಾ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿ ಸೆಮಿಫೈನಲ್‌ಗೆ ತಲುಪಿದೆ. ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯಲ್ಲಿ ತಿಳಿಯಿರಿ.

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಭಾರತವು ಆತಿಥೇಯ ಚೀನಾ ವಿರುದ್ಧದ ಮೊದಲ ಪಂದ್ಯದಲ್ಲಿ 3-0 ಅಂತರದಿಂದ ಗೆಲುವಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು. ನಂತರ ಜಪಾನ್ ಅನ್ನು 5-1 ರಿಂದ ಸೋಲಿಸಿತು. ಮೂರನೇ ಪಂದ್ಯದಲ್ಲಿ ಮಲೇಷ್ಯಾವನ್ನು 8-1 ರಿಂದ ಸೋಲಿಸಿತ್ತು. ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 3-1 ಅಂತರಿದಂದ ರೋಚಕ ಗೆಲುವು ಸಾಧಿಸಿತ್ತು.

ಸಧ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಲದಲ್ಲಿರುವ ಭಾರತಕ್ಕೆ, ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ ಸವಾಲೊಡ್ಡಲಿದೆ. ಪಾಕ್​ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಮಲೇಷ್ಯಾ ವಿರುದ್ಧ 2-2 ಡ್ರಾ ಸಾಧಿಸುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದ ಪಾಕ್​ ನಂತರ ಕೊರಿಯಾ ವಿರುದ್ಧವೂ ಡ್ರಾ ಸಾಧಿಸಿತ್ತು. ಆದರೆ, ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಜಪಾನ್ ಅನ್ನು 2-1 ಮತ್ತು ಆತಿಥೇಯ ಚೀನಾವನ್ನು 5-1 ರಿಂದ ಸೋಲಿಸಿದೆ.

ಭಾರತ vs ಪಾಕ್​ ಫಲಿತಾಂಶ: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಇತ್ತೀಚಿನ ಪಂದ್ಯಗಳ ಫಲಿತಾಂಶಗಳನ್ನು ನೋಡಿದರೆ, ಭಾರತ ಅದ್ಭುತ ಪ್ರದರ್ಶನ ನೀಡಿದೆ. ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾದಾಗ ಭಾರತ 10-2ರಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಇದಕ್ಕೂ ಕೆಲವು ತಿಂಗಳುಗಳ ಮೊದಲು ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4-0 ಅಂತರದಿಂದ ಗೆದ್ದಿತ್ತು.

ಪಂದ್ಯ ಎಲ್ಲಿ ನಡೆಯಲಿದೆ?: ಭಾರತ ಮತ್ತು ಪಾಕಿಸ್ತಾನ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ರೌಂಡ್ ರಾಬಿನ್ ಪಂದ್ಯವು ಚೀನಾದ ಇನ್ನರ್ ಮಂಗೋಲಿಯಾದ ಹುಲುನ್‌ಬುಯರ್‌ನಲ್ಲಿರುವ ಮೋಕಿ ತರಬೇತಿ ನೆಲೆಯಲ್ಲಿ ಶನಿವಾರ (ಸೆಪ್ಟೆಂಬರ್ 14) ನಡೆಯಲಿದೆ.

ಸಮಯ: ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:15ಕ್ಕೆ ಆರಂಭವಾಗಲಿದೆ.

ಎಲ್ಲಿ ವೀಕ್ಷಿಸಬೇಕು?: ಭಾರತ ಮತ್ತು ಪಾಕಿಸ್ತಾನ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಟೆನ್ 1 ಮತ್ತು ಟೆನ್ 1 ಹೆಚ್‌ಡಿ ಚಾನಲ್‌ಗಳಲ್ಲಿ ಪ್ರಸಾರಗೊಳ್ಳಲಿದೆ. ಲೈವ್ ಸ್ಟ್ರೀಮಿಂಗ್ ಸೋನಿ ಲಿವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಲು ಭಾರತ ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? - World Test Championship

ETV Bharat Logo

Copyright © 2024 Ushodaya Enterprises Pvt. Ltd., All Rights Reserved.