ETV Bharat / sports

ಆಸ್ಟ್ರೇಲಿಯನ್​ ಓಪನ್​ಗೆ ಅರಿನಾ ಸಬಲೆಂಕಾ 'ಕ್ವೀನ್​': ಚೀನಾ ಆಟಗಾರ್ತಿಗೆ ಸೋಲು - Australia Open

ಆಸ್ಟ್ರೇಲಿಯನ್​ ಓಪನ್​ನ ಮಹಿಳಾ ಸಿಂಗಲ್ಸ್​ನಲ್ಲಿ ಬೆಲಾರಸ್​ನ ಟೆನಿಸ್​ ತಾರೆ ಅರಿನಾ ಸಬಲೆಂಕಾ ಗೆಲುವು ಸಾಧಿಸಿದರು.

ಆಸ್ಟ್ರೇಲಿಯನ್​ ಓಪನ್
ಆಸ್ಟ್ರೇಲಿಯನ್​ ಓಪನ್
author img

By ETV Bharat Karnataka Team

Published : Jan 27, 2024, 6:04 PM IST

ಮೆಲ್ಬರ್ನ್​: ರಾಡ್​ ಲೇವರ್​ ಅರೇನಾದಲ್ಲಿ ಅಧಿಪತ್ಯ ಮುಂದುವರಿಸಿದ ಬೆಲಾರಸ್​ನ ಟೆನಿಸ್​ ತಾರೆ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್​ನ ಮಹಿಳಾ ಸಿಂಗಲ್ಸ್​ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಚೀನಾ ಆಟಗಾರ್ತಿ ಕ್ವಿನ್ವೆನ್ ಝೆಂಗ್ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಕಿರೀಟ ಧರಿಸಿದರು.

ಇಲ್ಲಿ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಏಕಾಧಿಪತ್ಯ ಸಾಧಿಸಿದ ವಿಶ್ವದ ನಂಬರ್​ 1 ಆಟಗಾರ್ತಿ ಸಬಲೆಂಕಾ, ಕೇವಲ 76 ನಿಮಿಷಗಳಲ್ಲಿ ಚೀನಾದ ಟೆನಿಸ್​ಪಟು ಕ್ವಿನ್ವೆನ್ ಝೆಂಗ್ ಅವರನ್ನು 6-3, 6-2 ಸೆಟ್​ಗಳಿಂದ ಮಣಿಸಿದರು. ಸತತ ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವ ಮೂಲಕ 11 ವರ್ಷಗಳ ಹಿಂದೆ ತನ್ನದೇ ದೇಶದ ವಿಕ್ಟೋರಿಯಾ ಅಜರೆಂಕಾ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಒಂದು ಸೆಟ್​ ಸೋಲದೇ ಪ್ರಶಸ್ತಿ ಗೆಲುವು: ವಿಶ್ವದ ಬಲಾಢ್ಯ ಟೆನಿಸ್​ ಆಟಗಾರ್ತಿಯಾಗಿರುವ ಸಬಲೆಂಕಾ, ಆಸ್ಟ್ರೇಲಿಯನ್​ ಓಪನ್​ನಲ್ಲಿ ಒಂದೇ ಒಂದು ಸೆಟ್​ ಸೋಲು ಕಂಡಿಲ್ಲ. ಮೊದಲ ಪಂದ್ಯದಿಂದ ಹಿಡಿದು ಫೈನಲ್​ವರೆಗೂ ಸೋಲರಿಯದೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಶ್ವ ನಂ.1 ಆಟಗಾರ್ತಿಯ ಬಲವಾದ ಸರ್ವ್​ಗಳ ಮುಂದೆ ಚೀನಾದ ಝೆಂಗ್ ನಿರುತ್ತರವಾದರು. ಒಂದೇ ಒಂದು ಡಬಲ್​​ ಫಾಲ್ಟ್​ ಕೂಡ ಮಾಡಲಿಲ್ಲ. 67 ಪ್ರತಿಶತದಷ್ಟು ಸರ್ವ್‌ಗಳು ಯಶ ಕಂಡವು.

ಟ್ರೋಫಿ ಗೆದ್ದಿದ್ದು ಸಂತಸ ತಂದಿದೆ: ಗೆಲುವಿನ ಬಳಿಕ ಮಾತನಾಡಿದ ಸಬಲೆಂಕಾ, ಗೆಲುವು ಸಾಧಿಸಿದ್ದು ನಂಬಲಾಗುತ್ತಿಲ್ಲ. ನನ್ನೆದುರು ಸೋತ ಕ್ವಿನ್ವೆನ್ ಝೆಂಗ್​ಗೆ ಬಲಿಷ್ಠ ಆಟಗಾರ್ತಿ. ಫೈನಲ್‌ನಲ್ಲಿ ಸೋಲುವುದು ಎಷ್ಟು ಕಠಿಣ ಎಂದು ನನಗೆ ತಿಳಿದಿದೆ. ಆದರೆ, ನೀವು ಅದ್ಭುತ ಆಟಗಾರ್ತಿ. ನೀವೂ ಪ್ರಶಸ್ತಿ ಗೆಲ್ಲಲು ಅರ್ಹರು ಎಂದು ಹೊಗಳಿದರು.

ಪ್ರಶಸ್ತಿಯನ್ನು ಎರಡನೇ ಬಾರಿಗೆ ಎತ್ತಿ ಹಿಡಿದಿದ್ದು, ನಂಬಲಾಗುತ್ತಿಲ್ಲ. ಈ ದಿನಗಳು ನನಗೆ ಅತೀವ ಸಂಸತ ತಂದಿವೆ. ಟ್ರೋಫಿಯನ್ನು ಮತ್ತೊಮ್ಮೆ ಜಯಿಸುವೆ ಎಂದು ನಾನು ಊಹಿಸಿರಲಿಲ್ಲ. ನನ್ನ ಮಾತು ವಿಚಿತ್ರವಾಗಿರುತ್ತವೆ ಎಂಬುದು ನನಗೆ ತಿಳಿದಿದೆ. ಏನೇ ಆಗಲಿ ನನ್ನ ತಂಡ, ಕುಟುಂಬ ನೀಡಿದ ಬೆಂಬಲ ಅಮೋಘ ಎಂದರು.

ಇದಕ್ಕೂ ಮೊದಲು ಮಾತನಾಡಿದ ರನ್ನರ್​ ಅಪ್​​ ಕ್ವಿನ್ವೆನ್ ಝೆಂಗ್, ಆಸ್ಟ್ರೇಲಿಯನ್​ ಓಪನ್​ನಲ್ಲಿ ಆಡಿದ್ದು ತುಂಬಾ ಖುಷಿ ತಂದಿದೆ. ಚಾಂಪಿಯನ್​ ಆದ ಸಬಲೆಂಕಾಗೆ ಅಭಿನಂದನೆ. ನಮ್ಮ ಅಭಿಮಾನಿಗಳಿಗೆ ಇಂದು ನಿರಾಸೆಯಾಗಿದೆ ಎಂದು ತಿಳಿದಿದೆ. ಇಂದು ನಮಗೆ ಅದೃಷ್ಟದ ಬೆಂಬಲವಿಲ್ಲ ಎಂದರು.

ಇದನ್ನೂ ಓದಿ: ಮೂರನೇ ದಿನ: 436ಕ್ಕೆ ಟೀಂ ಇಂಡಿಯಾ ಅಲೌಟ್​, 190 ರನ್​ಗಳ ಲೀಡ್​ನಲ್ಲಿ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.