ಫ್ರಾನ್ಸ್ (ಪ್ಯಾರಿಸ್): ಶೂಟಿಂಗ್‌ನಲ್ಲಿ ಭಾರತ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಸೋಮವಾರ ನಡೆದ 10 ಮೀಟರ್ ಏರ್ ರೈಫಲ್ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಶೂಟರ್ ಅರ್ಜುನ್ ಬಾಬುತಾಗೆ ಹಿನ್ನಡೆಯಾಗಿದೆ. ಮೊದಲ 11 ಶಾಟ್ಗಳ ನಂತರ ಎರಡನೇ ಸ್ಥಾನದಲ್ಲಿದ್ದ ಅರ್ಜುನ್ ಬೆಳ್ಳಿ ಪದಕ ಗೆಲ್ಲುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಂದಿನ ಸುತ್ತುಗಳಲ್ಲಿ ಕೆಲ ತಪ್ಪು ಶೂಟಿಂಗ್ನಿಂದ ಕಡಿಮೆ ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ಕುಸಿದರು. ಅಲ್ಲದೇ ಪಂದ್ಯದಿಂದಲೂ ಎಲಿಮಿನೇಟ್ ಆದರು.
ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ಅರ್ಜುನ್, ಫೈನಲ್‌ನಲ್ಲಿ 208.4 ಪಾಯಿಂಟ್ಸ್ ಕಲೆಹಾಕಿದರು. ಈ ಮೂಲಕ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಪಂದ್ಯ ಆರಂಭದಲ್ಲಿ ಬಾಬುತಾ 11 ರೌಂಡ್ಗಳಲ್ಲಿ ಉತ್ತಮ ಪ್ರದರ್ಶನ ತೋರಿ 2ನೇ ಸ್ಥಾನದಲ್ಲಿದ್ದರು. ಆದರೇ 13ನೇ (9.9), 15ನೇ (10.2), 18ನೇ ರೌಂಡ್ನಲ್ಲಿ (10.1) ತಪ್ಪು ಹೊಡೆತಗಳನ್ನು ದಾಖಲಿಸಿದರು. ಇದು ಬಾಬುತಾ ಅವರನ್ನು ಪದಕ ರೇಸ್ನಿಂದ ಹೊರಗುಳಿಯುವಂತೆ ಮಾಡಿತು. ಅಂತಿಮ ರೌಂಡ್ನಲ್ಲೂ 9.5 ಅಂಕಗಳಿಸುವ ಮೂಲಕ ಪಂದ್ಯದಿಂದ ಹೊರನಡೆದರು. ಪಂದ್ಯ ಆರಂಭದಲ್ಲಿ ಎರಡನೇ ಸ್ಥಾನದಲ್ಲಿದ್ದ ಬಾಬುತಾ ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದರು. ಆದರೇ ಕೊನೆಯ ಕ್ಷಣದಲ್ಲಿ ಕಳಪೆ ಪ್ರದರ್ಶನದಿಂದ ಯಾವುದೇ ಪದಕವಿಲ್ಲದೇ ಬರಿಗೈನಲ್ಲೇ ಹಿಂತಿರುಗಿದರು.
ಇದಕ್ಕೂ ಮೊದಲು ನಡೆದ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಫೈನಲ್ನ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ರಮಿತಾ ಜಿಂದಾಲ್ ಅವರು ನಿರಾಸೆ ಮೂಡಿಸಿದ್ದರು. ಅರ್ಹತಾ ಸುತ್ತಿನಲ್ಲಿ ಫ್ರಾನ್ಸ್ ಆಟಗಾರ್ತಿಯೊಂದಿಗೆ ಸಮಬಲ ಸಾಧಿಸಿದ್ದ ರಮಿತಾ ಶೂಟ್-ಆಫ್ನಲ್ಲಿ 0.3 ಅಂಕಗಳ ಹಿನ್ನಡೆ ಅನುಭವಿಸಿ 7ನೇ ಸ್ಥಾನಕ್ಕೆ ತಲುಪಿದರು. ಅಲ್ಲದೇ ಪಂದ್ಯದಿಂದಲೂ ಎಲಿಮಿನೇಟ್ ಆದರು.
ಇದನ್ನೂ ಓದಿ: 10 ಮೀಟರ್ ಏರ್ ರೈಫಲ್: ಪದಕ ಪಂದ್ಯದಲ್ಲಿ ತಪ್ಪಿದ ರಮಿತಾ ಗುರಿ; ಪದಕ ಕನಸು ಭಗ್ನ - Paris olympics 2024