ಹೈದರಾಬಾದ್: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಸಾರ್ವಕಾಲಿಕ ತಮ್ಮ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಯಿಂಗ್ XI ತಂಡವನ್ನು ಹೆಸರಿಸಿದ್ದಾರೆ. ಅನುಭವಿ ಸ್ಪಿನ್ನರ್ ತಮ್ಮ ತಂಡದಲ್ಲಿ ಕ್ರಿಸ್ ಗೇಲ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೀರಾನ್ ಪೊಲಾರ್ಡ್‌ನಂತಹ ಸ್ಫೋಟಕ ಬ್ಯಾಟರ್ಗಳನ್ನು ಕೈಬಿಟ್ಟಿದ್ದಾರೆ. ಆದಾಗ್ಯೂ, ಅವರು ಆಯ್ಕೆ ಮಾಡಿದ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಇಬ್ಬರು ಮತ್ತು ಮುಂಬೈ ಇಂಡಿಯನ್ಸ್ (MI)ನ ನಾಲ್ವರು ಆಟಗಾರರು ಸೇರಿದಂತೆ ಒಟ್ಟು 7 ಭಾರತೀಯರನ್ನು ಆಯ್ಕೆ ಮಾಡಿದ್ದು, ನಾಲ್ವರು ವಿದೇಶಿ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.
1983ರ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಅಶ್ವಿನ್ ತಮ್ಮ ಸಾರ್ವಕಾಲಿಕ ಐಪಿಎಲ್-11 ತಂಡವನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ 5 ಬಾರಿ ಐಪಿಎಲ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಆರಂಭಿಕ ಬ್ಯಾಟರ್ಗಳಾಗಿ ಆಯ್ಕೆ ಮಾಡಿದ್ದು, ವಾರ್ನರ್ ಮತ್ತು ಕ್ರಿಸ್ಗೇಲ್ ಅವರನ್ನು ಓಪನರ್ಗಳಾಗಿ ಕೈ ಬಿಟ್ಟಿದ್ದಾರೆ.
Ravichandran Ashwin picks his All-time IPL 11: [Cheeky Cheeka YT]
— Johns. (@CricCrazyJohns) August 28, 2024
Rohit, Kohli, Raina, Surya, Devilliers, Dhoni (C & WK), Narine, Rashid, Bhuvi, Malinga, Bumrah. pic.twitter.com/Cz6C4N0Bjt
ಬಳಿಕ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ರನ್ನು ಮಧ್ಯಮ ಕ್ರಮಾಂಕದಲ್ಲಿರಿಸಿದ್ದಾರೆ. ಧೋನಿ ಅವರನ್ನು ಸಾರ್ವಕಾಲಿಕ XI ತಂಡದ ವಿಕೆಟ್ ಕೀಪರ್ ಮತ್ತು ನಾಯಕನಾಗಿ ಆಯ್ಕೆ ಮಾಡಿದ್ದಾರೆ.
ಅಶ್ವಿನ್ ತಮ್ಮ ತಂಡದಲ್ಲಿ ಇಬ್ಬರು ಸ್ಪಿನ್ನರ್ ಮತ್ತು ಮೂವರು ವೇಗದ ಬೌಲರ್ಗಳನ್ನು ಆಯ್ಕೆ ಮಾಡಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್, ವೆಸ್ಟ್ ಇಂಡೀಸ್ನ ಸುನಿಲ್ ನರೈನ್ ತಂಡದ ಸ್ಪಿನ್ನರ್ಗಳಾಗಿದ್ದರೆ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ ವೇಗದ ಬೌಲರ್ಗಳಾಗಿ ಆಯ್ಕೆಯಾಗಿದ್ದಾರೆ.
India's all-rounder Ravichandran Ashwin has selected his all-time IPL XI, naming MS Dhoni as the captain pic.twitter.com/vlAwT2CqrP
— CricTracker (@Cricketracker) August 28, 2024
ಆರ್ ಅಶ್ವಿನ್ ಸಾರ್ವಕಾಲಿಕ ಐಪಿಎಲ್ XI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಸುನಿಲ್ ನರೈನ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ.
ಇದನ್ನೂ ಓದಿ: ಶುಭಮನ್ ಗಿಲ್ ಟೀಕಿಸಿದ ವಿರಾಟ್ ಕೊಹ್ಲಿ ವಿಡಿಯೋ ವೈರಲ್: ಇದರ ಅಸಲಿಯತ್ತೇನು? - Virat Kohli Viral Video