ETV Bharat / sports

ಸೂಪರ್‌ -8ರ ಸುತ್ತಿಗೆ ಆರ್ಹತೆ ಪಡೆದ ಆಫ್ಘನ್​: ಸೋಲಿನೊಂದಿಗೆ ಪಪುವಾ ನ್ಯೂಗಿನಿಯಾ ಟೂರ್ನಿನಿಂದ ಔಟ್‌! - T20 World Cup - T20 WORLD CUP

ಶುಕ್ರವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಪುವಾ ನ್ಯೂಗಿನಿಯಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸೂಪರ್ 8ರಲ್ಲಿ ಸ್ಥಾನ ಪಡೆದುಕೊಂಡಿತು. ಮತ್ತೊಂದೆಡೆ ಅಫ್ಘಾನಿಸ್ತಾನದ ಗೆಲುವಿನಿಂದ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

T20 WORLD CUP
ಸೂಪರ್ 8ಕ್ಕೆ ಸ್ಥಾನ ಪಡೆದುಕೊಂಡ ಅಫ್ಘಾನಿಸ್ತಾನ (AP)
author img

By PTI

Published : Jun 14, 2024, 11:14 AM IST

ತರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ): ವೇಗಿ ಫಜಲ್ಹಾಕ್ ಫಾರೂಕಿ ಅವರ ಅಮೋಘ ಮೂರು ವಿಕೆಟ್ ಗೊಂಚಲು ಮತ್ತು ಗುಲ್ಬದಿನ್ ನೈಬ್ ಅವರ ಉತ್ತಮ ಪ್ರದರ್ಶನ ಫಲವಾಗಿ ಅಫ್ಘಾನಿಸ್ತಾನವು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಶುಕ್ರವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಮೂರು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದೆ.

'ಸಿ' ಗುಂಪಿನಲ್ಲಿ ವೆಸ್ಟ್ ಇಂಡೀಸ್ ಜೊತೆಗೆ ಆಫ್ಘನ್​ ಕೂಡ ಸೂಪರ್ 8 ಸುತ್ತಿಗೆ ಪ್ರವೇಶ ಪಡೆಯಿತು. ಇದುವರೆಗೆ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೋತಿರುವ ನ್ಯೂಜಿಲೆಂಡ್, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದರ ಜೊತೆಗೆ 'ಸಿ' ಗುಂಪಿನಿಂದ ಪಪುವಾ ನ್ಯೂಗಿನಿಯಾ ಮತ್ತು ಉಗಾಂಡ ತಂಡಗಳು ಕೂಡ ಹೊರಬಿದ್ದಂತಾಯಿತು.

ಆಫ್ಘನ್​ ಎದುರು ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಪಪುವಾ, 19.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಪಪುವಾ ನ್ಯೂಗಿನಿ ತಂಡದ ವಿಕೀಟ್​ ಕೀಪರ್​ ಕಿಪ್ಲಿನ್ ಡೋರಿಗಾ 32 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 27 ರನ್ ಗಳಿಸಿ ಗರಿಷ್ಠ ಸ್ಕೋರರ್‌ ಆದರು. ಇವರಲ್ಲದೇ ಎಲಿ ನೌ 19 ಎಸೆತಗಳಲ್ಲಿ 2 ಬೌಂಡರಿ ಸಹಿತ 13 ರನ್ ಹಾಗೂ ಟೋನಿ ಉರಾ 18 ಎಸೆತಗಳಲ್ಲಿ 1 ಬೌಂಡರಿ ಸಹಿತ 11 ರನ್ ಗಳಿಸಿದರು. ಈ ಬ್ಯಾಟರ್‌ಗಳ ರನ್‌ಗಳಿಂದಾಗಿ ಪಪುವಾ ನ್ಯೂಗಿನಿ 95 ರನ್‌ಗಳಿಗೆ ತಲುಪಲು ಸಾಧ್ಯವಾಯಿತು. ಉಳಿದಂತೆ ಲೆಗಾ ಸಿಯಾಕಾ, ಸೆಸೆ ಬೌ ಮತ್ತು ನಾರ್ಮನ್ ವನುವಾ ಸೊನ್ನೆ ಸುತ್ತಿದರು. ಆಫ್ಘನ್​ ಪರ ಮಿಂಚಿನ ಬೌಲಿಂಗ್‌ ಪ್ರದರ್ಶನ ನೀಡಿದ ಫಜಲ್ಹಕ್ ಫಾರೂಕಿ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ 2 ಹಾಗೂ ನೂರ್ ಅಹ್ಮದ್ 1 ವಿಕೆಟ್ ಪಡೆದರು. ಈ ಪಂದ್ಯ ಪಪುವಾ ನ್ಯೂಗಿನಿಯಾ ತಂಡದ 4 ಬ್ಯಾಟರ್‌ ರನೌಟ್ ಆದರು.

ಪಪುವಾ ನ್ಯೂಗಿನಿಯಾ ನೀಡಿದ 96 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 15.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 101 ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಆಫ್ಘನ್ ಪರ ಗುಲ್ಬದಿನ್ ನೈಬ್ ಮತ್ತು ಮೊಹಮ್ಮದ್ ನಬಿ ಸ್ಫೋಟಕ ಇನಿಂಗ್ಸ್ ಆಡಿದರು. ಆದರೆ, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ ಶೂನ್ಯಕ್ಕೆ ಔಟ್‌ ಆದರೆ, ರಹಮಾನುಲ್ಲಾ ಗುರ್ಬಾಜ್ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

2.5 ಓವರ್‌ಗಳಲ್ಲಿ 22 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕಣಕ್ಕಿಳಿದ ಆಲ್‌ರೌಂಡರ್‌ಗಳಾದ ಗುಲ್ಬದಿನ್ ನೈಬ್ (49), ಅಜ್ಮತುಲ್ಲಾ ಒಮರ್ಜಾಯ್ (13) ಮತ್ತು ಮೊಹಮ್ಮದ್ ನಬಿ (16) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ​ ತಂಡ ಗೆಲುವಿನ ದಡಕ್ಕೆ ಸೇರಿತು. ನೈಬ್ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 49 ರನ್ ಹಾಗೂ ನಬಿ 23 ಎಸೆತಗಳಲ್ಲಿ 1 ಬೌಂಡರಿ ಸಹಿತ ಅಜೇಯ 16 ರನ್ ಗಳಿಸಿದರು. ಪಪುವಾ ನ್ಯೂಗಿನಿಯಾ ಪರ ಲೀ ನಾವೊ, ಸೆಮೊ ಕಮಿಯಾ ಮತ್ತು ನಾರ್ಮನ್ ವನುವಾ 1-1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಿತು.

ಸಂಕ್ಷಿಪ್ತ ಸ್ಕೋರ್‌: ಪಪುವಾ ನ್ಯೂಗಿನಿಯಾ: 19.5 ಓವರ್‌ಗಳಲ್ಲಿ 95 (ಕಿಪ್ಲಿನ್ ಡೊರಿಗಾ 27, ಅಲಿ ನಾವೊ 13, ಫಜಲ್ಹಕ್ ಫಾರೂಕಿ 3/16). ಅಫ್ಘಾನಿಸ್ತಾನ: (ಗುಲ್ಬದಿನ್ ನೈಬ್ 49*, ಮೊಹಮ್ಮದ್ ನಬಿ 16*, ಸೆಮೊ ಕಮಿಯಾ 1/16).

ಇದನ್ನೂ ಓದಿ: ಟಿ20 ವಿಶ್ವಕಪ್: ಓಮನ್ ವಿರುದ್ಧ 3.1 ಓವರ್​ಗಳಲ್ಲೇ ಗೆದ್ದು ಬೀಗಿದ ಇಂಗ್ಲೆಂಡ್​ - England Defeats Oman

ETV Bharat Logo

Copyright © 2025 Ushodaya Enterprises Pvt. Ltd., All Rights Reserved.