ETV Bharat / sports

'ಕೊಹ್ಲಿ ಮತ್ತು ಧೋನಿ ಇವರಲ್ಲಿ ನಿಮಗೆ ಯಾರು ಇಷ್ಟ?' ಬಾಮೈದ ಬಾಲಯ್ಯ 'ಆಹಾ' ಪ್ರಶ್ನೆಗೆ ಸಿಎಂ ಚಂದ್ರಬಾಬು ಉತ್ತರ ಹೀಗಿದೆ!

ತೆಲುಗು OTT ಪ್ಲಾಟ್‌ಫಾರ್ಮ್ 'ಆಹಾ'ದಲ್ಲಿ ನಟ ಬಾಲಕೃಷ್ಣ ಮತ್ತು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮುಖಾಮುಖಿ ಆಗಿದ್ದಾರೆ. ಈ ವೇಳೆ, ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆಸಿದ್ದಾರೆ.

Actor Balakrishna  and CM Chandrababu
ಆಹಾದಲ್ಲಿ ಬಾಲಯ್ಯ ಮತ್ತು ಚಂದ್ರಬಾಬು (ANI and ETV Bharat)
author img

By ETV Bharat Karnataka Team

Published : Oct 22, 2024, 5:11 PM IST

BALAKRISHNA CHANDRABABU UNSTOPAPLE 4 Promo: ಟಾಲಿವುಡ್​ನ ಖ್ಯಾತ ನಟ ಮತ್ತು ಶಾಸಕರೂ ಆಗಿರುವ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಅನ್‌ಸ್ಟಾಪೆಬಲ್ ಸೀಸನ್-4 ಟಾಕ್ ಶೋ ಅಕ್ಟೋಬರ್ 25 ರಿಂದ ಜನಪ್ರಿಯ ತೆಲುಗು OTT ಪ್ಲಾಟ್‌ಫಾರ್ಮ್ 'ಆಹಾ'ದಲ್ಲಿ ಪ್ರಾರಂಭವಾಗಲಿದೆ. ಇತ್ತೀಚೆಗಷ್ಟೇ ಮೊದಲ ಸಂಚಿಕೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಚಿತ್ರೀಕರಿಸಿದ್ದು ಗೊತ್ತೇ ಇದೆ. ಈ ಕಾರ್ಯಕ್ರಮದ ಶೂಟಿಂಗ್ ಕೂಡ ಮುಗಿದಿದೆ. ಇದೀಗ ನಿರ್ಮಾಪಕರು ಈ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರೋಮೋ ಸುಮಾರು 5 ನಿಮಿಷ 16 ಸೆಕೆಂಡು ಅವಧಿಯದ್ದು ಇದೆ. ಬಾಲಯ್ಯ ಮತ್ತು ಚಂದ್ರಬಾಬು ನಡುವಿನ ಸಂಭಾಷಣೆ ಸ್ವಲ್ಪ ವಿನೋದ ಮತ್ತು ಸ್ವಲ್ಪ ಗಂಭೀರವಾಗಿವೆ.

ಈ ಕಾರ್ಯಕ್ರಮದಲ್ಲಿ ಬಾಲಯ್ಯ ಅವರು ಕೆಲವು ಸೆಲೆಬ್ರಿಟಿಗಳ ಚಿತ್ರಗಳನ್ನು ಪರದೆಯ ಮೇಲೆ ತೋರಿಸಿದರು ಮತ್ತು ಅವರಲ್ಲಿ ನಿಮಗೆ ಯಾರು ಇಷ್ಟ ಎಂದು ಚಂದ್ರಬಾಬು ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಬಾಲಯ್ಯ ಅವರು ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ಭಾವಚಿತ್ರಗಳನ್ನು ತೋರಿಸುತ್ತಾ ಚಂದ್ರಬಾಬು ಅವರಿಗೆ, ನೀವು ಧೋನಿಯಂತಹ ನಾಯಕನಾ ಅಥವಾ ವಿರಾಟ್ ಕೊಹ್ಲಿಯಂತಹ ಆಟಗಾರನಾ? ಮತ್ತು ಈ ಇಬ್ಬರಲ್ಲಿ ನಿಮ್ಮ ಮೊದಲ ಪ್ರಾಶಸ್ತ್ಯ ಯಾರಿಗೆ ನೀಡುತ್ತೀರಿ ಅನ್ನುವ ಪ್ರಶ್ನೆಯನ್ನು ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಸಿಎಂ ಚಂದ್ರಬಾಬು, "ನಾನು ಯಾವಾಗಲೂ ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತೇನೆ" ಎಂದು ಹೇಳಿದ್ದು, ಈ ಹೊಸ ಪ್ರೋಮೋ ಅಕ್ಟೋಬರ್ 25 ರಂದು ರಾತ್ರಿ 8.30ಕ್ಕೆ 'ಆಹಾ'ದಲ್ಲಿ ಸ್ಟ್ರೀಮ್ ಆಗಲಿದೆ.

ಇಲ್ಲದಿದ್ದಲ್ಲಿ ಮೊದಲ ಸಂಚಿಕೆಯಲ್ಲಿ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಸ್ಟಾರ್ ಹೀರೋ ಪವನ್ ಕಲ್ಯಾಣ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅಲ್ಲದೇ ಮೊದಲ ಸಂಚಿಕೆಯ ನಂತರ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ ದಿ ರೂಲ್' ಚಿತ್ರತಂಡ ಕೂಡ ಈ ಶೋಗೆ ಬರಲಿದೆ. ಎರಡನೇ ಸಂಚಿಕೆಯಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಸುಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅದಾದ ನಂತರ ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ‘ಕಂಗುವ’ ತಂಡದೊಂದಿಗೆ ಸದ್ದು ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ; ಆರೋಗ್ಯ ಕುರಿತು ಮಾಹಿತಿ ಕೇಳಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.