ಹೈದರಾಬಾದ್: ಸಿಂಗಾಪುರ ಓಪನ್ ಟೂರ್ನಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಬಳಿಕ ಭಾರತದ ನಂಬರ್ 1 ಟೇಬಲ್ ಟೆನ್ನಿಸ್ ಆಟಗಾರ ಅಚಂತ ಶರತ್ ಕಮಲ್ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಈಚೆಗೆ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ 54 ಸ್ಥಾನಗಳನ್ನು ಜಿಗಿದು 34ನೇ ಶ್ರೇಯಾಂಕಕ್ಕೆ ಏರಿದ್ದಾರೆ.
ಭಾರತದ ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಸುಧಾರಿತ ಪ್ರದರ್ಶನ ನೀಡಿದ್ದು, ಶ್ರೇಯಾಂಕ ಪಟ್ಟಿಯಲ್ಲಿ ಭರ್ಜರಿ ಏರಿಕೆ ದಾಖಲಿಸಲು ಕಾರಣವಾಗಿದೆ. ಸಿಂಗಾಪುರ ಓಪನ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೂ, ಕ್ವಾರ್ಟರ್ಫೈನಲ್ ಹಂತಕ್ಕೆ ತಲುಪಿದ್ದರು. ಸಿಂಗಲ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶರತ್ ಕಮಲ್ ಅವರು ಭಾರತದ ನಂಬರ್ 1 ಟೇಬಲ್ ಟೆನಿಸ್ ಆಟಗಾರ ಎಂಬುದು ವಿಶೇಷ.
ಸಿಂಗಾಪುರ ಟೂರ್ನಿಯಲ್ಲಿ ವಿಶ್ವದ 13 ನೇ ಆಟಗಾರ ಡಾರ್ಕೊ ಜಾರ್ಜಿಕ್ ಮತ್ತು ವಿಶ್ವ ನಂ. 22 ಒಮರ್ ಅಸ್ಸಾರ್ ಅವರನ್ನು ಸೋಲಿಸುವ ಮೂಲಕ 8 ರ ಸುತ್ತಿಗೆ ತಲುಪಿದ್ದರು. ಆದರೆ, ಕ್ವಾರ್ಟರ್ಫೈನಲ್ನಲ್ಲಿ ಅವರು ಸೋಲು ಕಂಡಿದ್ದರು. ಆದಾಗ್ಯೂ ರ್ಯಾಂಕಿಂಗ್‌ನಲ್ಲಿ ಭಾರೀ ಸುಧಾರಣೆ ಕಂಡಿರುವ ಶರತ್‌ಗೆ ಈ ವರ್ಷ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹಾದಿಯನ್ನು ಸುಲಭಗೊಳಿಸಿದೆ.
ಇನ್ನುಳಿದಂತೆ ಭಾರತದ ಇತರ ಟೇಬಲ್ ಟೆನ್ನಿಸ್ ಆಟಗಾರರಾದ ಹರ್ಮೀತ್ ದೇಸಾಯಿ (65) ಮತ್ತು ಮಾನವ್ ಠಕ್ಕರ್ (74 ನೇ) ಅಗ್ರ 100 ಪ್ಯಾಡ್ಲರ್‌ಗಳ ಪಟ್ಟಿಯಲ್ಲಿರುವ ಸ್ಥಾನ ಪಡೆದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ನಂಬರ್ ಒನ್ ಆಟಗಾರ್ತಿ ಮಣಿಕಾ ಬಾತ್ರಾ (38ನೇ) ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ. ಶ್ರೀಜಾ ಅಕುಲಾ ಮೂರು ಸ್ಥಾನಗಳನ್ನು ಏರಿಕೆ ಕಾಣುವ ಮೂಲಕ 47 ನೇ ಸ್ಥಾನ ತಲುಪಿದ್ದಾರೆ. ಯಶಸ್ವಿನಿ ಘೋರ್ಪಡೆ 1 ಸ್ಥಾನವನ್ನು ಹೆಚ್ಚಳ ಕಂಡು 100 ನೇ ಸ್ಥಾನವನ್ನು ಪಡೆದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಗುರಿ: ಶ್ರೇಯಾಂಕ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿರುವ ಶರತ್ ಕಮಲ್ ಅವರು ಈ ವರ್ಷ ನಡೆಯುವ ಪ್ಯಾರೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ. ವಿಶ್ವದ 34ನೇ ಶ್ರೇಯಾಂಕದ ಆಟಗಾರ ಒಲಿಂಪಿಕ್ಸ್ನಲ್ಲಿ ಚಿನ್ನದ ಸಾಧನೆಯ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ; ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲು ಉತ್ಸಾಹದಲ್ಲಿರುವ ಯುವ ಪ್ರತಿಭೆಗಳು: ಏನಂದ್ರು ಹೊಸಬರು?